ಆಲಿವ್ ಎಣ್ಣೆಯಲ್ಲಿ ಅಡುಗೆ, ಆರೋಗ್ಯಕ್ಕೆಬೇರೇನಿದೆ ರಹದಾರಿ?
ಸಾಸಿವೆ ಎಣ್ಣೆಯನ್ನು ಭಾರತದಲ್ಲಿ ಅನೇಕ ವರ್ಷಗಳಿಂದ ಅಡುಗೆಗೆ ಬಳಸಲಾಗುತ್ತಿದೆ. ಆದರೆ ಅಡುಗೆಗೆ ಆಲಿವ್ ಎಣ್ಣೆ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗಿದೆ. ಇದರ ಹಿಂದಿನ ಪ್ರಮುಖ ಕಾರಣವೆಂದರೆ ಹೃದಯಕ್ಕೆ ಆಲಿವ್ ಎಣ್ಣೆಯ ಪ್ರಯೋಜನ. ಆಲಿವ್ ಎಣ್ಣೆಯಲ್ಲಿ ಬೇಯಿಸುವ ಮೂಲಕ ಹಲವು ಪ್ರಯೋಜನಗಳನ್ನು ಪಡೆಯಬಹುದು. ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..
ಆಲಿವ್ ಎಣ್ಣೆಯಲ್ಲಿ ಅಡುಗೆ, ಪ್ರಯೋಜನಗಳು
ಅಡುಗೆ ಮಾಡಲು ಹೆಚ್ಚುವರಿ ವರ್ಜಿನ್ ಎಣ್ಣೆಯನ್ನು (ಎಕ್ಸ್ ಟ್ರಾ ವರ್ಜಿನ್ ಆಲಿವ್ ಆಯಿಲ್) ಬಳಸಬೇಕು. ಏಕೆಂದರೆ ಇದು ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಪಾಲಿಫಿನಾಲ್ ಗಳು, ವಿಟಮಿನ್ ಇ ಮುಂತಾದ ಹೆಚ್ಚಿನ ಪೋಷಕಾಂಶಗಳ ಮಟ್ಟವನ್ನು ಹೊಂದಿದೆ.
ಅಡುಗೆ ಮಾಡುವಾಗ ಹೆಚ್ಚಿನ ಉರಿಯಲ್ಲಿ ಆಲಿವ್ ಎಣ್ಣೆಯನ್ನು ಬೇಯಿಸುವುದನ್ನು ತಪ್ಪಿಸಬೇಕು. ಹಾಗೆ ಮಾಡುವುದರಿಂದ ಅದರ ಪ್ರಯೋಜನಗಳು ಕಡಿಮೆ ಆಗಬಹುದು. ಆಲಿವ್ ಎಣ್ಣೆಯಲ್ಲಿ ಅಡುಗೆ ಮಾಡುವ ಪ್ರಯೋಜನಗಳು ಇಲ್ಲಿವೆ...
ಹೃದಯಕ್ಕೆ ಪ್ರಯೋಜನಕಾರಿ
ಹೆಚ್ಚುವರಿ ವರ್ಜಿನ್ ಆಲಿವ್ ಎಣ್ಣೆಯಲ್ಲಿ ಪಾಲಿಫಿನಾಲ್ ಗಳು ಸಮೃದ್ಧವಾಗಿದೆ, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ಕೆಟ್ಟ ಎಲ್ ಡಿಎಲ್ ಕೊಲೆಸ್ಟ್ರಾಲ್‌ನಿಂದ ರಕ್ಷಣೆ ನೀಡುತ್ತದೆ.
ಆಲಿವ್ ಆಯಿಲ್ ರಕ್ತನಾಳಗಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಹೃದ್ರೋಗಗಳಿಗೆ ಕಾರಣಗಳಾದ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರವಿರಿಸುತ್ತದೆ.
ಬೊಜ್ಜು ಹೆಚ್ಚಿಸುವುದಿಲ್ಲ
ಆಲಿವ್ ಎಣ್ಣೆಯಿಂದ ತಯಾರಿಸಿದ ಆಹಾರವು ದೇಹದ ತೂಕದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ಇದರಲ್ಲಿ ಅನಾರೋಗ್ಯಕರ ಕೊಬ್ಬು ತುಂಬಾ ಕಡಿಮೆ. ದೇಹದಲ್ಲಿ ಅನಾರೋಗ್ಯಕರ ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಇದು ಅನಾವಶ್ಯಕ ಬೊಜ್ಜು ಹೆಚ್ಚಲು ಕಾರಣವಾಗುತ್ತದೆ.
ಮಧುಮೇಹದ ಕಡಿಮೆ ಅಪಾಯ
ಟೈಪ್ 2 ಮಧುಮೇಹ ರೋಗಿಗಳಿಗೆ ಆಲಿವ್ ಎಣ್ಣೆಯ ಸೇವನೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಇದು ಟೈಪ್ 2 ಮಧುಮೇಹದಿಂದ ರಕ್ಷಿಸುವ ಅಂಶಗಳನ್ನು ಒಳಗೊಂಡಿದೆ.
ಆಹಾರದಲ್ಲಿ ಆಲಿವ್ ಎಣ್ಣೆಯನ್ನು ಬಳಕೆ ಮಾಡುವುದರಿಂದ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸರಿಯಾಗಿರಿಸುತ್ತದೆ.
ಅಪಾಯಕಾರಿ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ
ಆಲಿವ್ ಎಣ್ಣೆಯ ಬಳಕೆಯಿಂದ ದೇಹದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ತಡೆಗಟ್ಟುತ್ತವೆ ಮತ್ತು ನಾಶಗೊಳ್ಳುತ್ತವೆ. ಇದರ ಸೇವನೆಯು ಹೊಟ್ಟೆಯಲ್ಲಿರುವ ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ ಎಂದು ಸಂಶೋಧನೆಯು ತೋರಿಸಿದೆ. ಈ ಬ್ಯಾಕ್ಟೀರಿಯಾವು ಹೊಟ್ಟೆ ಹುಣ್ಣು ಮತ್ತು ಕ್ಯಾನ್ಸರ್ ಗೆ ಕಾರಣವಾಗಬಹುದು.
ಉರಿಯೂತ ಕಡಿಮೆ ಮಾಡುತ್ತದೆ
ದೇಹದಲ್ಲಿ ದೀರ್ಘಕಾಲದ ಉರಿಯೂತವು ಸಂಧಿವಾತ, ಚಯಾಪಚಯ ಸಿಂಡ್ರೋಮ್, ಅಲ್ಝೈಮರ್ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಆಲಿವ್ ಎಣ್ಣೆಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ, ಇದು ದೇಹದ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.