MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • Adult Bed wetting: ಏನೇನಕ್ಕೆ ಹಾಸಿಗೆ ಒದ್ದೆ ಮಾಡ್ತಾರೆ ದೊಡ್ಡೋರು?

Adult Bed wetting: ಏನೇನಕ್ಕೆ ಹಾಸಿಗೆ ಒದ್ದೆ ಮಾಡ್ತಾರೆ ದೊಡ್ಡೋರು?

ಚಿಕ್ಕ ಮಕ್ಕಳು ಹಾಸಿಗೆಯನ್ನು ಒದ್ದೆ ಮಾಡುವುದು ಸಾಮಾನ್ಯ. ಆದರೆ ವಯಸ್ಕರಲ್ಲಿ ಈ ಸಮಸ್ಯೆ ಕಂಡು ಬಂದ್ರೆ, ಅದು ಅನಾರೋಗ್ಯದ ಸಂಕೇತವಾಗಿದೆ. ದೊಡ್ಡವರಾದ್ಮೇಲೂ ಈ ಸಮಸ್ಯೆ ಕಾಡೋದು ಯಾಕೆ? ಇದಕ್ಕೆ ಪರಿಹಾರ ಏನು ತಿಳಿಯೋಣ.  

2 Min read
Suvarna News
Published : Jul 04 2023, 05:36 PM IST
Share this Photo Gallery
  • FB
  • TW
  • Linkdin
  • Whatsapp
17

ಮಕ್ಕಳಲ್ಲಿ ಮಾತ್ರವಲ್ಲ, ಕೆಲವು ವಯಸ್ಕರು ಸಹ ನಿದ್ರೆಯಲ್ಲಿ ಹಾಸಿಗೆಯನ್ನು ಒದ್ದೆ ಮಾಡುವ (Bedwetting) ಸಮಸ್ಯೆ ಹೊಂದಿದ್ದಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಎನ್ಯುರೆಸಿಸ್ ಎಂದು ಕರೆಯಲಾಗುತ್ತೆ. ಈ ಸಮಸ್ಯೆ ನೂರು ಜನರಲ್ಲಿ ಒಬ್ಬರಿಗೆ ಸಂಭವಿಸುತ್ತೆ. ಅಲ್ಲದೇ ಈ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು. ರಾತ್ರಿಯಲ್ಲಿ ಸಂಭವಿಸುವ ಈ ಸಮಸ್ಯೆಯನ್ನು ನಾಕ್ ಟರ್ನಲ್ ಎನ್ಯುರೆಸಿಸ್ (nocturnal enuresis) ಎಂದು ಕರೆಯಲಾಗುತ್ತದೆ. ಇನ್ನು ಹಗಲಿನ ಹೊತ್ತು ಮೂತ್ರವನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದ ಸಮಸ್ಯೆಯನ್ನು ಯೂರಿನರಿ ಇನ್ ಕಾಂಟಿನೆನ್ಸ್ ಎನ್ನುತ್ತಾರೆ.

27

ಯಾಕೆ ಹೀಗಾಗುತ್ತೆ?
ಕೆಲವು ರೋಗಗಳಿಂದಾಗಿ, ವಯಸ್ಕರಲ್ಲಿ ಬೆಡ್ವೆಟ್ಟಿಂಗ್ ಸಮಸ್ಯೆ ಕಾಣಿಸುತ್ತೆ. ಮೂತ್ರನಾಳದ ಸೋಂಕುಗಳು, ಮೂತ್ರಕೋಶದ ಕಲ್ಲುಗಳು (Kidney stone) ಮೂತ್ರಕೋಶ ಅಥವಾ ಪ್ರಾಸ್ಟೇಟ್ ಗೆಡ್ಡೆಗಳು, ಮಧುಮೇಹ, ನರವೈಜ್ಞಾನಿಕ ಕಾಯಿಲೆಗಳು (ಮಲ್ಟಿಪಲ್ ಸ್ಕ್ಲೆರೋಸಿಸ್ ಅಥವಾ ಪಾರ್ಕಿನ್ಸನ್ ಕಾಯಿಲೆಯಂತಹ), ಬೆನ್ನುಹುರಿ ಗಾಯ ಅಥವಾ ಮೂತ್ರನಾಳದಲ್ಲಿನ ರಚನಾತ್ಮಕ ಅಸಹಜತೆಗಳಿಂದ ಈ ಸಮಸ್ಯೆ ಉಂಟಾಗುತ್ತೆ.

37

ಔಷಧಿಗಳು
ಸೆಡೆಕ್ಟೀವ್ಸ್, ಹಿಪ್ನೋಟಿಕ್ಸ್ ಅಥವಾ ಕೆಲವು ಆಂಟಿಸೈಕೋಟಿಕ್ಗಳಂತಹ ಕೆಲವು ಔಷಧಿಗಳ ಸೇವನೆಯಿಂದ ವಯಸ್ಕ ಬೆಡ್ ವೆಟ್ಟಿಂಗ್ ಅಪಾಯವನ್ನು ಹೆಚ್ಚಿಸಬಹುದು.

ಮನೋವೈಜ್ಞಾನಿಕ ಅಂಶ
ಒತ್ತಡ (Stress), ಆತಂಕ (Anxiety), ಖಿನ್ನತೆ (Depression) ಅಥವಾ ಇತರ ಭಾವನಾತ್ಮಕ ಸಮಸ್ಯೆಗಳು(mental and emotional issues)  ಸಹ ಹಾಸಿಗೆಯಲ್ಲಿ ಮೂತ್ರಮಾಡುವಂತೆ ಮಾಡುತ್ತೆ. ಈ ಅಂಶಗಳು ಮೆದುಳು ಮತ್ತು ಮೂತ್ರಕೋಶದ ನಡುವಿನ ಸಂಕೇತಗಳನ್ನು ಅಡ್ಡಿಪಡಿಸಬಹುದು, ಈ ಕಾರಣದಿಂದಾಗಿ ವ್ಯಕ್ತಿಗೆ ತಿಳಿಯದೆಯೇ ರಾತ್ರಿಯಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುತ್ತಾನೆ. .

47

ಹಾರ್ಮೋನ್ ಅಸಮತೋಲನ
ಹಾರ್ಮೋನುಗಳ ಅಸಮತೋಲನ (hormone imbalance), ವಿಶೇಷವಾಗಿ ಆಂಟಿಡೈಯುರೆಟಿಕ್ ಹಾರ್ಮೋನ್ (ಎಡಿಎಚ್), ನಿದ್ರೆಯ ಸಮಯದಲ್ಲಿ ಮೂತ್ರವನ್ನು ಉತ್ಪಾದಿಸುವ ವ್ಯಕ್ತಿಯ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ. ಇದು ಹಾಸಿಗೆ ಒದ್ದೆಯಾಗಲು ಕಾರಣವಾಗಬಹುದು.

57

ದೈಹಿಕ ಪರೀಕ್ಷೆ
ದೇಹದಲ್ಲಿನ ಯಾವುದೇ ತೊಂದರೆಗಳನ್ನು ಗುರುತಿಸಲು ಪೆಲ್ವಿಕ್ ಪರೀಕ್ಷೆ (ಮಹಿಳೆಯರಿಗೆ) ಅಥವಾ ಡಿಜಿಟಲ್ ಗುದನಾಳ ಪರೀಕ್ಷೆ (ಪುರುಷರಿಗೆ) ಮಾಡಬಹುದು.

ಮೂತ್ರ ಮತ್ತು ರಕ್ತ ಪರೀಕ್ಷೆಗಳು (blood and urine test)
ಈ ಎರಡೂ ಪರೀಕ್ಷೆಗಳು ಮೂತ್ರನಾಳದ ಸೋಂಕುಗಳನ್ನು ಗುರುತಿಸಬಹುದು, ಹಾರ್ಮೋನ್ ಮಟ್ಟವನ್ನು ತಿಳಿದುಕೊಳ್ಳಬಹುದು ಮತ್ತು ಯಾವುದೇ ಆಂತರಿಕ ಕಾಯಿಲೆಯನ್ನು ಗುರುತಿಸಬಹುದು.

67

ಮೂತ್ರಕೋಶ ತರಬೇತಿ
ಮೂತ್ರಕೋಶದ ಮರು ತರಬೇತಿಯಂತಹ ತಂತ್ರಗಳು ಮೂತ್ರಕೋಶದ ಸಾಮರ್ಥ್ಯ ಹೆಚ್ಚಿಸಲು ಮತ್ತು ಮೂತ್ರ ನಿಯಂತ್ರಣವನ್ನು ಸುಧಾರಿಸಲು ಸಹಾಯ ಮಾಡುತ್ತೆ. ಈ ತರಬೇತಿಯಲ್ಲಿ, ಮೂತ್ರಕೋಶವು ದೀರ್ಘಕಾಲದವರೆಗೆ ಮೂತ್ರವನ್ನು ನಿಲ್ಲಿಸಲು ಬಾತ್ ರೂಮ್ ಗೆ ಹೋಗುವ ನಡುವಿನ ಸಮಯದ ಅಂತರವನ್ನು ಕ್ರಮೇಣ ಹೆಚ್ಚಿಸಬೇಕಾಗುತ್ತದೆ.

77

ಜೀವನಶೈಲಿಯನ್ನು (Lifestyle) ಸುಧಾರಿಸುವುದು
ಜೀವನಶೈಲಿ ಬದಲಾವಣೆಗಳನ್ನು ಮಾಡುವುದರಿಂದ ವಯಸ್ಕರ ಹಾಸಿಗೆ ಒದ್ದೆ ಮಾಡುವ ಸಮಸ್ಯೆಯನ್ನು ನಿವಾರಿಸಬಹುದು. ಈ ಬದಲಾವಣೆಗಳಲ್ಲಿ ಸಂಜೆ ನಿರಿನ ಸೇವನೆಯನ್ನು ಕಡಿಮೆ ಮಾಡುವುದು, ಕೆಫೀನ್ ಮತ್ತು ಆಲ್ಕೋಹಾಲ್ ಅವಾಯ್ಡ್ ಮಾಡೋದು ಮತ್ತು ಚೆನ್ನಾಗಿ ನಿದ್ರೆ ಮಾಡೋದು, ಇವೆಲ್ಲವೂ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತೆ. 

About the Author

SN
Suvarna News
ಆರೋಗ್ಯ
ಜೀವನಶೈಲಿ
ಮೂತ್ರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved