- Home
- Life
- Health
- ಲಿವರ್‌ನಲ್ಲಿ ನೀರು ಸಂಗ್ರಹವಾದ್ರೆ ಈ ಚಿಹ್ನೆಗಳು ಕಂಡುಬರುತ್ತವೆ, ನಿರ್ಲಕ್ಷಿಸಿದ್ರೆ ಹಾನಿಯಾಗುತ್ತೆ!
ಲಿವರ್‌ನಲ್ಲಿ ನೀರು ಸಂಗ್ರಹವಾದ್ರೆ ಈ ಚಿಹ್ನೆಗಳು ಕಂಡುಬರುತ್ತವೆ, ನಿರ್ಲಕ್ಷಿಸಿದ್ರೆ ಹಾನಿಯಾಗುತ್ತೆ!
ಲಿವರ್‌ನಲ್ಲಿ ನೀರು ತುಂಬಿದಾಗ ಹೊಟ್ಟೆ ಉಬ್ಬರ ಸೇರಿದಂತೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಲಿವರ್‌ನಲ್ಲಿ ಸಮಸ್ಯೆಯಾಗಿದೆಯೆಂದು ಸೂಚಿಸುತ್ತವೆ. ಆಗ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅಗತ್ಯ.
- FB
- TW
- Linkdin
Follow Us
)
ದೇಹದಲ್ಲಿ ಕಂಡುಬರುವ ಕೆಲವು ಚಿಹ್ನೆಗಳು
ಲಿವರ್ ಅಂದರೆ ಯಕೃತ್ತು ಅತ್ಯಂತ ಮುಖ್ಯವಾದ ಅಂಗ. ಇಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದರೆ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಲಿವರ್ ನೀರಿನಿಂದ ತುಂಬಿದಾಗ, ದೇಹದಲ್ಲಿ ಕೆಲವು ಚಿಹ್ನೆಗಳು ಕಂಡುಬರುತ್ತವೆ. ಹಾಗಾದರೆ ಯಕೃತ್ತು ನೀರಿನಿಂದ ತುಂಬಿದಾಗ ಕಂಡುಬರುವ ಲಕ್ಷಣಗಳು ಯಾವುವು ಎಂದು ನೋಡೋಣ..
ಹೊಟ್ಟೆ ಉಬ್ಬರ
ಲಿವರ್‌ನಲ್ಲಿ ನೀರು ತುಂಬಿಕೊಳ್ಳುವುದರಿಂದ ಹೊಟ್ಟೆಯಲ್ಲಿ ಊತ ಉಂಟಾಗುತ್ತದೆ. ಹೊಟ್ಟೆ ಊದಿಕೊಂಡಂತೆ ಕಾಣುವಂತೆ ಮಾಡುತ್ತದೆ. ಊತದ ಜೊತೆಗೆ, ಹೊಟ್ಟೆ ನೋವಿನ ಸಮಸ್ಯೆಯೂ ಇರಬಹುದು.
ಹಳದಿ ಬಣ್ಣಕ್ಕೆ ತಿರುಗುವ ಚರ್ಮ
ಲಿವರ್‌ನಲ್ಲಿ ನೀರು ಸಂಗ್ರಹವಾದಾಗ, ಮುಖ ಮತ್ತು ಕಣ್ಣುಗಳ ಬಣ್ಣ ಹಳದಿ ಬಣ್ಣಕ್ಕೆ ತಿರುಗಬಹುದು. ಚರ್ಮ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು ಯಕೃತ್ತಿನ ಸಮಸ್ಯೆಗಳನ್ನು ಸೂಚಿಸುತ್ತದೆ. ಆದ್ದರಿಂದ ಮುಖದ ಹಳದಿ ಬಣ್ಣವನ್ನು ನಿರ್ಲಕ್ಷಿಸಬೇಡಿ, ಸಾಧ್ಯವಾದಷ್ಟು ಬೇಗ ವೈದ್ಯರ ಬಳಿಗೆ ಹೋಗಿ.
ಹಸಿವಿನ ಕೊರತೆ
ಲಿವರ್‌ನಲ್ಲಿ ನೀರು ಶೇಖರಣೆಯಾಗುವುದರಿಂದ ಹಸಿವು ಕಡಿಮೆಯಾಗಬಹುದು. ಯಾವಾಗಲೂ ಹೊಟ್ಟೆ ತುಂಬಿರುವಂತೆ ಭಾಸವಾಗುವುದು ಯಕೃತ್ತಿನಲ್ಲಿ ನೀರು ಶೇಖರಣೆಯಾಗುವುದರ ಸಂಕೇತ. ಸತತವಾಗಿ ಹಲವಾರು ದಿನಗಳವರೆಗೆ ಹಸಿವಾಗದಿದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಕಾಲುಗಳಲ್ಲಿ ಊತ
ನೀರು ಶೇಖರಣೆಯಾಗುವುದರಿಂದ ಲಿವರ್ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೇಹದಲ್ಲಿ ಪ್ರೋಟೀನ್ ಮಟ್ಟ ಕಡಿಮೆಯಾಗುತ್ತದೆ. ದೇಹದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಈ ಪರಿಸ್ಥಿತಿಯಲ್ಲಿ, ಪಾದಗಳು ಮತ್ತು ಕಣಕಾಲುಗಳಲ್ಲಿ ಊತದ ಸಮಸ್ಯೆ ಉಂಟಾಗಬಹುದು.