ಯಾಕೋ ಆರೋಗ್ಯ ಸರಿ ಇಲ್ಲ ಅನ್ನೋ ಬದಲು, ಖಾಲಿ ಹೊಟ್ಟೇಲಿ ಈ ಹಣ್ಣು ತಿಂದು ನೋಡಿ!
ನೀವು ಮುಂಜಾನೆಯನ್ನು ಚಹಾ ಕುಡಿಯುವ ಮೂಲಕ ಆರಂಭಿಸುತ್ತೀರಾ? ಆ ತಪ್ಪು ಮಾಡಬೇಡಿ. ಬೆಳಗ್ಗೆ ಎದ್ದ ಕೂಡಲೇ ನೀವು ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸಿ. ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತೆ.
ಖಾಲಿ ಹೊಟ್ಟೆಯಲ್ಲಿ (empty stomach) ಹಣ್ಣುಗಳನ್ನು ತಿನ್ನೋದು, ನಿಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೇ ಇದು ದಿನವನ್ನು ಉತ್ತಮವಾಗಿ ಆರಂಭಿಸಲು ಸಹ ಒಳ್ಳೆಯದು. ಅಷ್ಟೇ ಯಾಕೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನೋದ್ರಿಂದ ಜೀರ್ಣಕ್ರಿಯೆಯೂ ಸುಲಭವಾಗುತ್ತೆ, ಅಲ್ಲದೇ ಇದು ದಿನವಿಡೀ ನಿಮಗೆ ಬೇಕಾದ ಶಕ್ತಿ, ವಿಟಾಮಿನ್ ಒದಗಿಸುತ್ತೆ.
ಬಾಳೆಹಣ್ಣು (Banana)
ಬಾಳೆಹಣ್ಣು ಪೊಟ್ಯಾಶಿಯಂ ನ ಉತ್ತಮ ಮೂಲ. ಇದನ್ನು ಸೇವಿಸೋದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಬ್ಯಾಲೆನ್ಸ್ ಆಗಿರಲು ಮತ್ತು ಮಸಲ್ಸ್ ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇವು ಸುಲಭವಾಗಿ ಜೀರ್ಣವಾಗುತ್ತೆ.
ಸೇಬು (Apple)
ಫೈಬರ್‌ನಿಂದ ಸಮೃದ್ಧವಾಗಿರುವ ಸೇಬು ಹಣ್ಣನ್ನು ಪ್ರತಿದಿನ ಖಾಲಿ ಹೊಟ್ಟೆಗೆ ಸೇವಿಸೋದು ಉತ್ತಮ. ಇದು ಬ್ಲಡ್ ಶುಗರ್ ಲೆವೆಲ್ ಅನ್ನು (blood sugar level) ನಿಯಂತ್ರಿಸುತ್ತದೆ. ಸೇಬಿನಲ್ಲಿರುವ ಫೈಬರ್ ಅಂಶವು ಹೊಟ್ಟೆ ತುಂಬಿದ ಅನುಭವ ನೀಡುತ್ತೆ, ಇತರ ಅಹಾರಗಳನ್ನು ಬೇಗನೆ ಜೀರ್ಣವಾಗುವಂತೆ ಮಾಡುತ್ತೆ.
ಕಲ್ಲಂಗಡಿ (Watermelon)
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಜೊತೆಗೆ ಇದು ನಿಮ್ಮನ್ನು ಹೈಡ್ರೇಟ್ (Hydrate) ಆಗಿರಲು ಸಹಾಯ ಮಾಡುತ್ತದೆ. ಅಲ್ಲದೇ ಇದರಲ್ಲಿ ಲಿಕೋಪಿನ್ ಎಂಬ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದ್ದು, ಇದು ಆರೋಗ್ಯಕ್ಕೆ ಉತ್ತಮ.
ಪಪ್ಪಾಯಿ (Papaya)
ಪಪ್ಪಾಯಿಯಲ್ಲಿ ಪಪೈನ್ ಎಂಬ ಅಂಶವಿದೆ. ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಇದರಲ್ಲಿ ವಿಟಾಮಿನ್ ಸಿ ಪೋಷಕಾಂಶವೂ ಇದೆ. ಅದರಲ್ಲಿ ನ್ಯೂಟ್ರಿಯೆಂಟ್ಸ್ ಅಂಶವೂ ಇದೆ. ಆರೋಗ್ಯಕ್ಕೆ ತುಂಬಾನೆ ಉಪಕಾರಿ.
ಕಿವಿ (Kiwi)
ಕಿವಿ ಹಣ್ಣು ವಿಟಾಮಿನ್ಸ್ ಆಗರ. ಇದರಲ್ಲಿ ವಿಟಾಮಿನ್ ಸಿ ಮತ್ತು ವಿಟಾಮಿನ್ ಕೆ ಅಂಶವು ಇದೆ. ಇದರಲ್ಲಿರುವ ಎಂಝೈಮ್ಸ್ ಅಂಶವಿದೆ. ಇವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ (Immunity Power) ಸಹ ಹೆಚ್ಚುತ್ತೆ.
ಪಿಯರ್ಸ್ (pear)
ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುವ ಇನ್ನೊಂದು ಹಣ್ಣು ಪಿಯರ್ಸ್. ಇದು ಜೀರ್ಣಕ್ರಿಯೆಗೆ ಉತ್ತಮವಾಗಿದೆ.ಅಲ್ಲದೇ ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಲ್ಲಿ ವಿಟಾಮಿನ್ಸ್ ಮತ್ತು ಮಿನರಲ್ಸ್ ಇದ್ದು, ವಿಟಾಮಿನ್ ಕೆ ಮತ್ತು ಪೊಟಾಶಿಯಂ ಕೂಡ ಇದೆ.