Food

ಕೂದಲು ಉದುರುವಿಕೆ

ಕೂದಲು ಉದುರುವುದು ಇತ್ತೀಚಿಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿ ಹೀಗೆ ನಾನಾ ಕಾರಣದಿಂದ ಹೀಗಾಗುತ್ತೆ. ಕೆಲ ಹಣ್ಣುಗಳನ್ನು ತಿನ್ನೋ ಮೂಲಕ ನೀವು ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

Image credits: others

ಬೆರ್ರೀಸ್‌

ಸ್ಟ್ರಾಬೆರಿ, ಬ್ಲ್ಯೂಬೆರಿ, ರಸಬೆರಿ ಮೊದಲಾದ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುತ್ತವೆ. ಇದರಲ್ಲಿರುವ ವಿಟಮಿನ್‌ ಸಿ ಕೂದಲು ಹಾಳಾಗದಂತೆ ತಡೆಯುತ್ತದೆ. 

Image credits: Others

ಸಿಟ್ರಸ್ ಹಣ್ಣುಗಳು

ಕಿತ್ತಳೆ, ಮೂಸಂಬಿ, ನಿಂಬೆ ಮೊದಲಾದ ಸಿಟ್ರಸ್ ಹಣ್ಣುಗಳು ಕೂದಲ ಆರೋಗ್ಯಕ್ಕೆ ಅತ್ಯುತ್ತಮ. ಇದರಲ್ಲಿರುವ ಕಬ್ಬಿಣದ ಅಂಶ ಕೂದಲು ಬೆಳೆಯಲು ನೆರವಾಗುತ್ತದೆ. 

Image credits: Others

ಬಾಳೆಹಣ್ಣು

ಬಾಳೆಹಣ್ಣು, ಪೊಟ್ಯಾಶಿಯಂನಲ್ಲಿ ಸಮೃದ್ಧವಾಗಿದೆ. ಇದು ತಲೆಯ ನೆತ್ತಿಯನ್ನು ತಂಪಾಗಿರಿಸುತ್ತದೆ. ಬನಾನದಲ್ಲಿರುವ ವಿಟಮಿನ್ ಎ ನ್ಯಾಚುರಲ್ ಎಯನ್ನು ಉತ್ಪಾದಿಸುತ್ತದೆ. ಇದು ನೆತ್ತಿಯನ್ನು ಡ್ರೈ ಆಗದಂತೆ ನೋಡಿಕೊಳ್ಳುತ್ತದೆ.

Image credits: Others

ಅವಕಾಡೊ

ಅವಕಾಡೊದಲ್ಲಿರುವ ಮೊನೊ ಅನ್‌ಸ್ಯಾಚುರೇಟೆಡ್‌ ಕೊಬ್ಬು ಕೂದಲ ಆರೋಗ್ಯಕ್ಕೆ ಅತೀ ಒಳ್ಳೆಯದು. ಅವಕಾಡೊದಲ್ಲಿರುವ ವಿಟಮಿನ್ ಇ, ನೆತ್ತಿಯ ಬ್ಲಡ್‌ ಸರ್ಕ್ಯೂಲೇಶನ್‌ನ್ನು ಉತ್ತಮಗೊಳಿಸಿ ಕೂದಲು ಬೆಳೆಯಲು ನೆರವಾಗುತ್ತದೆ.

Image credits: others

ಪಪ್ಪಾಯಿ

ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್‌ ಎ ಮತ್ತು ಸಿ ಹೇರಳವಾಗಿರುತ್ತದೆ. ಇವೆರಡೂ ಕೂದಲ ಆರೋಗ್ಯಕ್ಕೆ ಅತೀ ಅಗತ್ಯವಾಗಿರುವಂಥವು. ಇದು ಕೂದಲು ತುಂಡಾಗುವುದನ್ನು ತಡೆಯುತ್ತದೆ. 

Image credits: others

ಹೇರ್‌ಫಾಲ್‌ಗೆ ಪರಿಹಾರ

ಇನ್ಯಾಕೆ ತಡ, ನೀವು ಸಹ ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದರೆ ಈ ಕೆಲವು ಹಣ್ಣುಗಳನ್ನು ತಿಂದು ರಿಲ್ಯಾಕ್ಸ್ ಆಗಿ.

Image credits: Others
Find Next One