Asianet Suvarna News Asianet Suvarna News

Health Tips: ಮಕ್ಕಳಲ್ಲಿ ಹೆಚ್ಚಾಗಿದೆ ಅಪಾಯಕಾರಿ ಎನರ್ಜಿ ಡ್ರಿಂಕ್ಸ್ ಸೇವನೆ

ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿವ ಅಗತ್ಯ ಈಗಿದೆ. ಮಾರುಕಟ್ಟೆಗೆ ನಾನಾ ರೀತಿಯ ಆಹಾರ, ಪಾನೀಯಗಳು ಬರ್ತಿವೆ. ಮೇಲ್ನೋಟಕ್ಕೆ ಇವು ಆರೋಗ್ಯ ವೃದ್ಧಿಸಿದಂತೆ ಕಂಡ್ರೂ ಸದ್ದಿಲ್ಲದೆ ಅನಾರೋಗ್ಯಕ್ಕೆ ಕಾರಣವಾಗ್ತಿದೆ. ಮಕ್ಕಳಿಗೆ ಎನರ್ಜಿ ಡ್ರಿಂಕ್ಸ್ ನೀಡುವ ಮೊದಲು ಪಾಲಕರು ಎಚ್ಚೆತ್ತುಕೊಳ್ಳಬೇಕಿದೆ.
 

Worrying Numbers Of Older Children Having Energy Drinks Regularly
Author
Bangalore, First Published Feb 10, 2022, 5:16 PM IST

ಎನರ್ಜಿ ಡ್ರಿಂಕ್ಸ್ (Energy Drink) ಕುಡಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮಕ್ಕಳ (Children) ಆರೋಗ್ಯ (Health) ವೃದ್ಧಿ ಹಾಗೂ ದೈಹಿಕ ಶಕ್ತಿ ಹೆಚ್ಚಿಸುವ ಕಾರಣಕ್ಕೆ ಪಾಲಕರು ಮಕ್ಕಳಿಗೆ ಎನರ್ಜಿ ಡ್ರಿಂಕ್ಸ್ ನೀಡುವುದನ್ನು ಪ್ರಾರಂಭಿಸುತ್ತಾರೆ. ನಂತ್ರ ಮಕ್ಕಳು ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಶುರು ಮಾಡ್ತಾರೆ. ಎನರ್ಜಿ ಡ್ರಿಂಕ್ ಕುಡಿಯುವ ಅಭ್ಯಾಸವು ಅಪಾಯಕಾರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಮೀಕ್ಷೆಯೊಂದರ ಪ್ರಕಾರ,ಯುಕೆಯಲ್ಲಿ ಮಕ್ಕಳು ನಿಯಮಿತವಾಗಿ ಹಾನಿಕಾರಕ ಎನರ್ಜಿ ಡ್ರಿಂಕ್  ಸೇವಿಸುತ್ತಾರೆ ಎಂಬುದು ಬಹಿರಂಗವಾಗಿದೆ. ಯುಕೆಯಲ್ಲಿ ಶೇಕಡಾ 32 ರಷ್ಟು ಮಕ್ಕಳು ವಾರಕ್ಕೊಮ್ಮೆಯಾದರೂ ಎನರ್ಜಿ ಡ್ರಿಂಕ್ಸ್ ಕುಡಿಯುತ್ತಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. 

ಹೊಸ ಸಂಶೋಧನೆ ಹೇಳೋದೇನು? :
ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆಯು ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಯುಕೆಯ ಸಾವಿರಾರು ಮಕ್ಕಳ ಡೇಟಾವನ್ನು ವಿಶ್ಲೇಷಿಸಲಾಗಿದೆ. ಇದ್ರ ಜೊತೆ ಯುಎಸ್ ಮತ್ತು ಕೆನಡಾ ಸೇರಿದಂತೆ ಪ್ರಪಂಚದಾದ್ಯಂತದ ಇತರ ದೇಶಗಳ ಯುವಕರ ಡೇಟಾ ಪರಿಶೀಲನೆ ಮಾಡಲಾಗಿದೆ. ಜಾಗತಿಕವಾಗಿ ಅರ್ಧದಷ್ಟು ಮಕ್ಕಳು (Children) ಮತ್ತು ಯುಕೆ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಕನಿಷ್ಠ ವಾರಕ್ಕೊಮ್ಮೆ ಎನರ್ಜಿ ಡ್ರಿಂಕ್ ಸೇವನೆ ಮಾಡ್ತಾರೆ ಎಂಬ ಸಂಗತಿ ಗೊತ್ತಾಗಿದೆ. ಯುಕೆಯಲ್ಲಿ  ಹುಡುಗಿಯರಿಗಿಂತ ಹುಡುಗರು ಹೆಚ್ಚು ಎನರ್ಜಿ ಡ್ರಿಂಕ್ಸ್ ಸೇವನೆ ಮಾಡ್ತಿದ್ದಾರಂತೆ. ವಾರದಲ್ಲಿ ಎಷ್ಟು ಬಾರಿ ಎನರ್ಜಿ ಡ್ರಿಂಕ್ ಸೇವನೆ ಮಾಡ್ತಿದ್ದಾರೆ ಎಂಬುದು ಅವರ ಮಾನಸಿಕ ಆರೋಗ್ಯ,ದೈಹಿಕ ಆರೋಗ್ಯ,ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಯನ್ನು ಅವಲಂಬಿಸಿದೆ ಎಂದು ಅಧ್ಯನದಲ್ಲಿ ಹೇಳಲಾಗಿದೆ.

FOOD TIPS: ಆಗಾಗ ಕಾಯಿಲೆ ಬೀಳ್ತಿದ್ದೀರಾ ? ಅಡುಗೆಗೆ ತೆಂಗಿನ ಎಣ್ಣೆ ಬಳಸಿ ನೋಡಿ

ಹೃದಯ ಸಮಸ್ಯೆಗೆ ಕಾರಣ : ಅಧ್ಯಯನದಲ್ಲಿ ಎನರ್ಜಿ ಡ್ರಿಂಕ್ ಹೇಗೆ ಅಪಾಯಕಾರಿ ಎಂಬುದನ್ನು ಹೇಳಲಾಗಿದೆ. ಎನರ್ಜಿ ಡ್ರಿಂಕ್ (Energy Drinks) ಹೆಚ್ಚು ಸೇವನೆ ಮಾಡುವುದ್ರಿಂದ ಹೃದಯ ವೈಫಲ್ಯ ಕಾಡುವ ಸಾಧ್ಯತೆಯಿದೆಯಂತೆ. 21 ವರ್ಷದ ಯುನಿವರ್ಸಿಟಿ ವಿದ್ಯಾರ್ಥಿ ಎರಡು ವರ್ಷಗಳ ಕಾಲ,ಪ್ರತಿ ದಿನ ಎನರ್ಜಿ ಡ್ರಿಂಕ್ ಸೇವನೆ ಮಾಡಿದ್ದಾನೆ. ಪ್ರತಿ ದಿನ 500 ಮಿಲಿ ಎನರ್ಜಿ ಡ್ರಿಂಕ್ ಸೇವನೆ ಮಾಡಿದ ವಿದ್ಯಾರ್ಥಿ ಆರೋಗ್ಯದಲ್ಲಿ ಏರುಪೇರಾಗಿ ಆತ 21 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆಯಬೇಕಾಗಿತ್ತಂತೆ.

ಎನರ್ಜಿ ಡ್ರಿಂಕ್ ನಲ್ಲಿರುತ್ತೆ ಇಷ್ಟು ಕೆಫೀನ್ :  
500ಮಿಲಿ ಕ್ಯಾನ್ ಎನರ್ಜಿ ಡ್ರಿಂಕ್ ನಲ್ಲಿ  160ಎಂಜಿ ಕೆಫೀನ್ ಇರುತ್ತದೆ.ಸಣ್ಣ ಅಂದ್ರೆ 250 ಮಿಲಿ ಕ್ಯಾನ್ ಎನರ್ಜಿ ಡ್ರಿಂಕ್ ನಲ್ಲಿ 80 ಮಿಗ್ರಾಂ ಕೆಫೀನ್ ಇರುತ್ತದೆ.   ಎನರ್ಜಿ ಡ್ರಿಂಕ್ಸ್ ಕುಡಿಯುವ ಮಕ್ಕಳ ಮೇಲೆ ಅದರ ಪರಿಣಾಮವನ್ನು ತಿಳಿಯಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಯಾರ್ಕ್ ವಿಶ್ವವಿದ್ಯಾನಿಲಯದ ಪ್ರಮುಖ ಸಂಶೋಧಕ ಕ್ಲೇರ್ ಖೌಜಾ ಹೇಳಿದ್ದಾರೆ. ಈಗ ನಡೆಸಿದ ಸಂಶೋಧನೆಯಲ್ಲಿ ಎನರ್ಜಿ ಡ್ರಿಂಕ್ಸ್ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಕಂಡು ಬಂದಿದೆ ಎಂದಿದ್ದಾರೆ.  

ಎನರ್ಜಿ ಡ್ರಿಂಕ್ಸ್ ಮಾರಾಟವನ್ನು ನಿಷೇಧಿಸಬೇಕೆಂದು ಅವರು ಸಲಹೆ ನೀಡಿದ್ದಾರೆ. ಈ ಹಿಂದೆ, ಕೆಲವು ಸಚಿವರು 2018 ರಲ್ಲಿ ಎನರ್ಜಿ ಡ್ರಿಂಕ್ಸ್ ಮಾರಾಟವನ್ನು ನಿಷೇಧಿಸಲು ಪ್ರಸ್ತಾಪಿಸಿದ್ದರು. ಆದರೆ ಅದನ್ನು ಇನ್ನೂ ಜಾರಿಗೆ ತಂದಿಲ್ಲ. ಬ್ರಿಟಿಷ್ ಸಾಫ್ಟ್ ಡ್ರಿಂಕ್ಸ್ ಅಸೋಸಿಯೇಷನ್‌ನ ಡೈರೆಕ್ಟರ್ ಜನರಲ್  ಗೇವಿನ್ ಪಾರ್ಟಿಂಗ್‌ಟನ್, ನಮ್ಮ ಸದಸ್ಯರು 16 ವರ್ಷದೊಳಗಿನವರಿಗೆ ಎನರ್ಜಿ ಡ್ರಿಂಕ್‌ಗಳನ್ನು ಮಾರಾಟ ಮಾಡುವುದಿಲ್ಲ. ಇದರ ಬಗ್ಗೆ ಪ್ರಚಾರವನ್ನೂ  ಮಾಡುವುದಿಲ್ಲ ಎಂದಿದ್ದಾರೆ. 

Celebrity Life : ಮಾಂಸ ತ್ಯಜಿಸಿದ ವಿರುಷ್ಕಾ ಜೋಡಿ! ಮಹತ್ವದ ನಿರ್ಧಾರಕ್ಕೆ ಕಾರಣ ಇಲ್ಲಿದೆ

ಎನರ್ಜಿ ಡ್ರಿಂಕ್ಸ್ ಅಡ್ಡಪರಿಣಾಮ : 
ಎನರ್ಜಿ ಡ್ರಿಂಕ್ ಕುರಿಡುವ ಮಕ್ಕಳಲ್ಲಿ ತಲೆನೋವು ಕಾಣಿಸಿಕೊಳ್ಳುತ್ತದೆ. ಎನರ್ಜಿ ಡ್ರಿಂಕ್ಸ್ ನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವುದ್ರಿಂದ ಹಲ್ಲುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿದ್ರೆಯ ತೊಂದರೆ ಮತ್ತು ಕಿರಿಕಿರಿ ಸರ್ವೆ ಸಾಮಾನ್ಯ ಸಮಸ್ಯೆಯಾಗಿದೆ. ಇದ್ರಿಂದ ಮಕ್ಕಳ ಬಿಪಿ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಅಷ್ಟೇ ಅಲ್ಲ ಎನರ್ಜಿ ಡ್ರಿಂಕ್ ಸೇವನೆ ಮಕ್ಕಳಲ್ಲಿ ಮದ್ಯಪಾನ ಹಾಗೂ ಧೂಮಪಾನ ಚಟಕ್ಕೆ ಮಕ್ಕಳನ್ನು ಪರೋಕ್ಷವಾಗಿ ಪ್ರೇರೇಪಿಸುತ್ತಿದೆ. 

Follow Us:
Download App:
  • android
  • ios