MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಮೊಸರು ಕಲಸುವಾಗ ಉಪ್ಪು ಹಾಕಬಾರದು ಏಕೆ? ಅಜ್ಜಿ ಮಾತಿನ ಹಿಂದಿದೆ ವೈಜ್ಞಾನಿಕ ಕಾರಣ

ಮೊಸರು ಕಲಸುವಾಗ ಉಪ್ಪು ಹಾಕಬಾರದು ಏಕೆ? ಅಜ್ಜಿ ಮಾತಿನ ಹಿಂದಿದೆ ವೈಜ್ಞಾನಿಕ ಕಾರಣ

ಮೊಸರು ಕಲಸುವಾಗ ಉಪ್ಪು ಹಾಕಬಾರದು ಎಂದು ಅಜ್ಜಿಯರು ಪದೇ ಪದ ಹೇಳುತ್ತಾರೆ. ಇದರ ಹಿಂದೆ ವೈಜ್ಞಾನಿಕ ಕಾರಣ ಒಂದಿದೆ. ಇದು ಸಂಪ್ರದಾಯಲ್ಲ, ಆರೋಗ್ಯದ ಕಾರಣದಿಂದ ಉತ್ತಮ. ಅಜ್ಜಿ ಸೀಕ್ರೆಟ್ ಹಿಂದಿನ ಕಾರಣ ಇಲ್ಲಿದೆ.

1 Min read
Author : Chethan Kumar
Published : Sep 25 2026, 06:25 PM IST
Share this Photo Gallery
  • FB
  • TW
  • Linkdin
  • Whatsapp
15
ಮೊಸರು ಹುಳಿಯಾಗುವಾಗ ಉಪ್ಪು ಬೇಡ
Image Credit : Gemini AI

ಮೊಸರು ಹುಳಿಯಾಗುವಾಗ ಉಪ್ಪು ಬೇಡ

ಹಾಲಿಗೆ ಹೆಪ್ಪು ಹಾಕಿದ ಬಳಿಕ ಮೊಸರು ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಮೊಸರು ಹುಳಿಯಾಗುವ ಪ್ರಕ್ರಿಯೆ ವೇಳೆ ಉಪ್ಪು ಹಾಕಬಾರದು ಎಂದು ಅಜ್ಜಿಯರು ಹೇಳುತ್ತಾರೆ. ಹಾಲಿಗೆ ಹೆಪ್ಪು ಹಾಕಿದ ಬಳಿಕ ಈ ಮಿಶ್ರಣದಲ್ಲಿನ ಲ್ಯಾಕ್ಟಿಕ್ ಆ್ಯಸಿಡ್ ಬ್ಯಾಕ್ಟೀರಿಯಾ ಅತ್ಯಂತ ಮುಖ್ಯ. ಈ ಬ್ಯಾಕ್ಟಿರಿಯಾ ಹಾಲಿನಲ್ಲಿರುವ ಲ್ಯಾಕ್ಟೋಸ್‌ಗಳನ್ನು ಲ್ಯಾಕ್ಟಿಕ್ ಆ್ಯಸಿಡ್ ಆಗಿ ಪರಿವರ್ತಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಉಪ್ಪು ಸೇರಿಸಿದರೆ ಬ್ಯಾಕ್ಟಿರಿಯಾ ಬೆಳವಣಿಗೆ ಕುಂಠಿತ
Image Credit : Asianet News

ಉಪ್ಪು ಸೇರಿಸಿದರೆ ಬ್ಯಾಕ್ಟಿರಿಯಾ ಬೆಳವಣಿಗೆ ಕುಂಠಿತ

ಈ ಪ್ರಕ್ರಿಯೆಯಲ್ಲಿ ಉಪ್ಪು ಸೇರಿಸಿದರೆ ಉತ್ತಮ ಬ್ಯಾಕ್ಟಿರಿಯಾಗಳು ಸತ್ತು ಹೋಗಲಿದೆ ಅಥವಾ ಬೆಳವಣಿಗೆ ಅರ್ಧಕ್ಕೆ ನಿಲ್ಲಲಿದೆ. ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟಿರಿಯಾಗಳು ಆರೋಗ್ಯಕ್ಕೆ ಉತ್ತಮ. ಪ್ರಮುಖವಾಗಿ ಮೊಸರು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ. ಆಹಾರಗಳು ಜೀರ್ಣವಾಗಲು ಬ್ಯಾಕ್ಟಿರಿಯಾಗಳ ಅವಶ್ಯಕತೆ ಇದೆ. ಮೊಸರು ಇದಕ್ಕೆ ನೆರವಾಗುತ್ತದೆ.

Related Articles

Related image1
ಫ್ರಿಡ್ಜ್‌ನಲ್ಲಿ ಉಳಿದ ಅರ್ಧ ತೆಂಗಿನಕಾಯಿ ಹಾಳಾಗದಂತೆ ಸರಿಯಾಗಿ ಸ್ಟೋರ್ ಮಾಡೋದು ಹೇಗೆ?
Related image2
ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ಉತ್ತಮವೇ? ಅಥವಾ ಸ್ಟೀಮರ್‌ನಲ್ಲಿ ಬೇಯಿಸುವುದು ಆರೋಗ್ಯಕರವೇ?
35
ಮಡಕೆಯಲ್ಲಿ ಹೆಪ್ಪು ಹಾಕಿದರೆ ಉತ್ತಮ
Image Credit : Gemini AI

ಮಡಕೆಯಲ್ಲಿ ಹೆಪ್ಪು ಹಾಕಿದರೆ ಉತ್ತಮ

ಹಾಲಿಗೆ ಹೆಪ್ಪು ಹಾಕಲು ಮಡಕೆ ಪಾತ್ರೆ ಬಳಸಿದರೆ ಉತ್ತಮ ಎಂದು ಅಜ್ಜಿಯಂದಿರು ಹೇಳುತ್ತಾರೆ. ಇದರಿಂದ ಗಟ್ಟಿ ಮೊಸರು ಮಾತ್ರವಲ್ಲ, ರುಚಿಕರವಾಗುತ್ತದೆ. ಇದಕ್ಕೆ ಕಾರಣ ಮಣ್ಣಿನ ಪಾತ್ರೆಯಲ್ಲಿನ ಸಣ್ಣ ರಂಧ್ರಗಳು ತೇವಾಂಶ ಹೀರಿಕೊಳ್ಳುತ್ತದೆ. ಇದು ಮೊಸರನ್ನು ದಪ್ಪವಾಗಲು ನೆರವು ನೀಡುತ್ತದೆ. ಮಡಕೆ ತಾಪಮಾನವನ್ನು ಸ್ಥಿರವಾಗಿಡುವಂತೆ ಸಹಾಯ ಮಾಡುತದೆ. ಇದರಿಂದ ಮೊಸರು ಪ್ರಕ್ರಿಯೆಗೆ ಅತ್ಯುತ್ತಮ ಪಾತ್ರೆಯಾಗಿದೆ.

45
ಹೆಪ್ಪು ಹಾಕಿದ ಬಳಿಕ ಏನು ಮಾಡಬಾರದು
Image Credit : Getty

ಹೆಪ್ಪು ಹಾಕಿದ ಬಳಿಕ ಏನು ಮಾಡಬಾರದು

ಹಾಲಿಗೆ ಹೆಪ್ಪು ಹಾಕಿದ ಬಳಿಕ ಮುಚ್ಚಿಡಬೇಕು, ತೆರೆದು ನೋಡಬಾರದು, ಜೊತೆಗೆ ಅಲುಗಾಡಿಸಬಾರದು. ಮುಚ್ಚಳ ತೆರೆದರೆ ನೊಣ, ಕೀಟಗಳು ಬೇಗನೆ ಆಕರ್ಷಣೆಗೊಳ್ಳುತ್ತದೆ, ಪಾತ್ರೆಯೊಳಗೆ ಬೀಳುತ್ತದೆ. ಇನ್ನು ಸರಿಯಾದ ಮೊಸರು ಪ್ರಕ್ರಿಯೆಗೂ ಸಮಸ್ಯೆಯಾಗಲಿದೆ. ಪದೇ ಪದೇ ತೆರೆಯುವುದರಿಂದ ತಾಪಮಾನ ಬದಲಾಗುತ್ತದೆ. ಬ್ಯಾಕ್ಟಿರಿಯಾ ಪ್ರಕ್ರಿಯೆಗೂ ಸಮಸ್ಯೆಯಾಗಲಿದೆ.

55
ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿನ ವ್ಯತ್ಯಾಸ
Image Credit : Getty

ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿನ ವ್ಯತ್ಯಾಸ

ಚಳಿಗಾಲದ ಸಮಯದಲ್ಲಿ ತಾಪಮಾನ ತಂಪಾಗಿರುವ ಕಾರಣ ಹೆಪ್ಪು ಹಾಕಿದ ಬಳಿಕ ಮೊಸರು ಆಗುವ ಪ್ರಕ್ರಿಯೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.ಹೀಗಾಗಿ ಚಳಿಗಾಲದಲ್ಲಿ ಬೆಚ್ಚಿನ ಸ್ಥಳದಲ್ಲಿ ಇಡುವುದು ಉತ್ತಮ. ಇನ್ನು ತೀವ್ರ ಬೇಸಿಗೆಯಲ್ಲಿ ನೆರಳಿನಲ್ಲಿ ಇಡುವುದು ಉತ್ತಮ. ಮೊಸರು ಹುಳಿಯಾದ ಬಳಿಕ ರೆಫ್ರಿಜರೇಟರ್‌ನಲ್ಲಿ ಇಡಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಹಾರ
ಜೀವನಶೈಲಿ
ಸುದ್ದಿ
 

Latest Videos
Recommended Stories
Recommended image1
ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಡಯಾಬಿಟೀಸ್ ಪೇಶೆಂಟ್ಸ್‌ ಹೀಗೆ ಡಯಟ್ ಚೇಂಜಸ್ ಮಾಡಿಕೊಳ್ಳಿ!
Recommended image2
ತುಂಬಾ ತಲೆನೋವು ಕಾಡ್ತಿದ್ಯಾ? ಈ ಪಾನೀಯಗಳನ್ನು ಕುಡಿಯಿರಿ, ಆರಾಮ ಅನುಭವಿಸಿ!
Recommended image3
ಅಬ್ಬಾ... ಏನು ರುಚಿ! ಟೆಂಪಲ್ ಸ್ಟೈಲ್ ಚಿತ್ರಾನ್ನದ ಅಸಲಿ ಸೀಕ್ರೆಟ್ ಇಲ್ಲಿದೆ, ಒಮ್ಮೆ ಟ್ರೈ ಮಾಡಿ ನೋಡಿ..!
Related Stories
Recommended image1
ಫ್ರಿಡ್ಜ್‌ನಲ್ಲಿ ಉಳಿದ ಅರ್ಧ ತೆಂಗಿನಕಾಯಿ ಹಾಳಾಗದಂತೆ ಸರಿಯಾಗಿ ಸ್ಟೋರ್ ಮಾಡೋದು ಹೇಗೆ?
Recommended image2
ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ಉತ್ತಮವೇ? ಅಥವಾ ಸ್ಟೀಮರ್‌ನಲ್ಲಿ ಬೇಯಿಸುವುದು ಆರೋಗ್ಯಕರವೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved