ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಡಯಾಬಿಟೀಸ್ ಪೇಶೆಂಟ್ಸ್ ಹೀಗೆ ಡಯಟ್ ಚೇಂಜಸ್ ಮಾಡಿಕೊಳ್ಳಿ!
ಮಧುಮೇಹವು ಕಿಡ್ನಿಯನ್ನು ಹಾಳುಮಾಡುವ ಪ್ರಮುಖ ಕಾಯಿಲೆಗಳಲ್ಲಿ ಒಂದಾಗಿದೆ. ಶುಗರ್ ಲೆವೆಲ್ ಹೆಚ್ಚಾದಂತೆ ಕಿಡ್ನಿ ವೈಫಲ್ಯದ ಅಪಾಯವೂ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹಿಗಳು ತಮ್ಮ ದೈನಂದಿನ ಡಯಟ್‌ನಲ್ಲಿ ಈ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು.

ಮಧುಮೇಹಿಗಳ ಡಯಟ್ ಹೀಗಿರಲಿ
ಮಧುಮೇಹವು ಕಿಡ್ನಿಯನ್ನು ಹಾಳುಮಾಡುತ್ತದೆ. ಶುಗರ್ ಲೆವೆಲ್ ಹೆಚ್ಚಾದಂತೆ ಕಿಡ್ನಿ ವೈಫಲ್ಯದ ಅಪಾಯವೂ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹಿಗಳ ಡಯಟ್ ಹೀಗಿರಲಿ.
ಸರಿಯಾದ ಆಹಾರ ಕ್ರಮ
ನೀವು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಕ್ರಮದಲ್ಲಿ ಊಟ ಮಾಡಬೇಕು. ಇಲ್ಲದಿದ್ದರೆ ಮಧುಮೇಹ ಹೆಚ್ಚಾಗಿ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು.
ಸಾಕಷ್ಟು ನೀರು ಕುಡಿಯಿರಿ
ದೇಹವನ್ನು ಆರೋಗ್ಯವಾಗಿಡಲು ನೀವು ಸಾಕಷ್ಟು ನೀರು ಕುಡಿಯಲೇಬೇಕು. ನೀರು ಕಡಿಮೆ ಕುಡಿದರೆ ಡಿಹೈಡ್ರೇಶನ್ ಉಂಟಾಗಿ ಕಿಡ್ನಿಗಳು ಹಾಳಾಗುವ ಅಪಾಯವಿರುತ್ತದೆ.
ಅತಿಯಾದ ಪ್ರೋಟೀನ್ ಬೇಡ
ದೇಹಕ್ಕೆ ಪ್ರೋಟೀನ್ ಅಗತ್ಯವಿದೆ, ಆದರೆ ಅದು ಮಿತಿಯಲ್ಲಿದ್ದರೆ ಮಾತ್ರ. ನೀವು ಅತಿಯಾಗಿ ಪ್ರೋಟೀನ್ ತಿಂದರೆ ಅದು ಕಿಡ್ನಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಸಕ್ಕರೆ ಅಂಶ ಕಡಿಮೆ ಮಾಡಿ
ಸಿಹಿ ಪದಾರ್ಥಗಳನ್ನು ನೀವು ಅತಿಯಾಗಿ ತಿನ್ನುವುದನ್ನು ಬಿಡಬೇಕು. ಇದು ಶುಗರ್ ಲೆವೆಲ್ ಹೆಚ್ಚಿಸುವುದರ ಜೊತೆಗೆ ಕಿಡ್ನಿಗಳಿಗೂ ಹಾನಿ ಮಾಡುತ್ತದೆ.
ಉಪ್ಪಿನ ಬಳಕೆ ಮಿತವಾಗಿರಲಿ
ಮಧುಮೇಹಿಗಳು ತಮ್ಮ ಊಟದಲ್ಲಿ ಅತಿಯಾಗಿ ಉಪ್ಪನ್ನು ಬಳಸಬಾರದು. ಬೇಕರಿ ಸ್ನ್ಯಾಕ್ಸ್ ಮತ್ತು ಪ್ಯಾಕೆಟ್ ಆಹಾರಗಳಲ್ಲಿ ಸೋಡಿಯಂ ಅಂಶ ಬಹಳ ಹೆಚ್ಚಾಗಿರುತ್ತದೆ.
ಸಂಸ್ಕರಿಸಿದ ಆಹಾರ ಬೇಡ
ಚಿಪ್ಸ್ ಮತ್ತು ಪ್ಯಾಕೆಟ್‌ಗಳಲ್ಲಿ ಸಿಗುವ ಮಾಂಸದಂತಹ ಸಂಸ್ಕರಿಸಿದ ಆಹಾರಗಳನ್ನು ನೀವು ತಿನ್ನಬಾರದು. ಇವುಗಳಲ್ಲಿ ಸೋಡಿಯಂ, ಪ್ರಿಸರ್ವೇಟಿವ್ಸ್ ಮತ್ತು ಅನಾರೋಗ್ಯಕರ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

