ಹುಳಿ ಮೊಸರನ್ನು ಕೆಲವು ರೀತಿಯ ಅಡುಗೆ ತಯಾರಿಕೆಯಲ್ಲಿ ಬಳಸುವುದರಿಂದ ಅವುಗಳ ರುಚಿ ಮತ್ತು ಸಾಫ್ಟ್‌ನೆಸ್ ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ.
food Jul 03 2026
Author: Ashwini HR Image Credits:AI Image
Kannada
ಏನು ಮಾಡ್ಬೋದು?
ಸಾಮಾನ್ಯವಾಗಿ ಇಡ್ಲಿ, ದೋಸೆ ಹಿಟ್ಟನ್ನು ರಾತ್ರಿಯಿಡೀ ಹುದುಗಿಸುವುದು (Ferment) ನಮಗೆ ಅಭ್ಯಾಸ! ಆದರೆ ಆ ಕ್ಷಣದಲ್ಲೇ ಇವುಗಳನ್ನು ಸಿದ್ಧಪಡಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂದು ಇಲ್ಲಿ ತಿಳಿಯೋಣ.
Image credits: Getty
Kannada
ಹಿಟ್ಟಿಗೆ ಹುಳಿ ಮೊಸರು ಸೇರಿಸಿ
ಇನ್‌ಸ್ಟಂಟ್ ಆಗಿ ಮಾಡುವ ರವೆ ಇಡ್ಲಿ, ಅಕ್ಕಿ ಹಿಟ್ಟಿನ ದೋಸೆ ಅಥವಾ ರಾಗಿ ದೋಸೆಗೆ ನೀರು ಮಾತ್ರ ಹಾಕುವ ಬದಲು, ಹುಳಿ ಮೊಸರನ್ನು ಸೇರಿಸಿ ಕಲಸಬೇಕು. ಇದರಿಂದ ಮೃದುವಾಗಿ, ಸಾಫ್ಟ್ ಆಗಿ ಬರುತ್ತವೆ. ರುಚಿಯಾಗಿಯೂ ಇರುತ್ತವೆ.
Image credits: Chat GPT AI
Kannada
ಸ್ವಲ್ಪ ನೀರು ಯಾಕೆ?
ಬರೀ ಮೊಸರು ಮಾತ್ರ ಹಾಕಿದರೆ ಹಿಟ್ಟು ಅತಿಯಾಗಿ ದಪ್ಪಗಾಗಬಹುದು ಅಥವಾ ತುಂಬಾ ಹುಳಿಯಾಗಬಹುದು. ಅದಕ್ಕಾಗಿಯೇ ಮೊಸರಿಗೆ ಸ್ವಲ್ಪ ನೀರು ಸೇರಿಸಿ, ಮಜ್ಜಿಗೆಯಂತೆ ಮಾಡಿ ಹಿಟ್ಟನ್ನು ಕಲಸಿಕೊಳ್ಳಬೇಕು.
Image credits: AI Meta
Kannada
ಇದಕ್ಕೆ ಹುಳಿ ಮೊಸರು ಬೇಕು
ಢೋಕ್ಲಾ ಸ್ಪಾಂಜ್ ತರಹ ಅತ್ಯಂತ ಸಾಫ್ಟ್ ಹಾಗೂ ಮೃದುವಾಗಿ ಬರಬೇಕಾದರೆ, ಅದಕ್ಕೆ ಸಾಮಾನ್ಯ ಮೊಸರಿನ ಬದಲು ಹುಳಿ ಮೊಸರನ್ನು ಸೇರಿಸಬೇಕು. ತಿನ್ನುವಾಗ ಬಾಯಿಗೆ ಒಂದು ರೀತಿಯ ಹುಳಿ ಮಿಶ್ರಿತ ರುಚಿ ಸಿಗಲಿದೆ.