ಸ್ಲೋವಾಕಿಯಾ ಸ್ಪೀಕರ್‌ಗೆ ಪ್ರಧಾನಿ ಮೋದಿ ನೀಡಿದ ತೆಕುವಾ ಗಿಫ್ಟ್ ವಿಶೇಷತೆ ಏನು? ಈ ಸ್ವೀಟ್ ಮೂಲ ಎಲ್ಲಿ?
ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಹಲವು ನಾಯಕರನ್ನು ಭೇಟಿಯಾಗಿದ್ದಾರೆ. ಸ್ಲೋವಾಕ್ ಪಾರ್ಲಿಮೆಂಟ್ ಸ್ವೀಕರ್‌ಗೆ ತೆಕುವಾ ಸಿಹಿ ತಿಂಡಿ ಗಿಫ್ಟ್ ನೀಡಿದ್ದಾರೆ. ಈ ಸ್ವೀಟ್ ವಿಶೇಷತೆ ಏನು?

ಮೋದಿ ಉಡುಗೊರೆ ನೀಡಿದ ತೆಕುವಾ ಸ್ವೀಟ್ಸ್
ಪ್ರಧಾನಿ ನರೇಂದ್ರ ಮೋದಿ ಯೂರೋಪ್ ಪ್ರವಾಸ ಫಲಪ್ರದವಾಗಿದೆ. ಜಿ7 ಶೃಂಗಸಭೆಯಲ್ಲಿ ಡೋನಾಲ್ಡ್ ಟ್ರಂಪ್ ಜೊತೆ ಮಾತುಕತೆ ಸೇರಿದಂತೆ ಹಲವು ಪ್ರಮುಖ ನಾಯಕರ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ. ಯೂರೋಪ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಲೋವಾಕಿಯಾ ಸಂಸತ್ತಿನ ಸ್ಪೀಕರ್ ರಿಚರ್ಡ್ ರಾಸಿ ಭೇಟಿಯಾಗಿ ಚರ್ಚಿಸಿದ್ದಾರೆ. ಭೇಟಿ ವೇಳೆ ಮೋದಿ, ವಿಶೇಷ ತೆಕುವಾ ಸ್ವೀಟ್ ಉಡುಗೊರೆಯಾಗಿ ನೀಡಿದ್ದಾರೆ.
ಬಿಹಾರ, ಜಾರ್ಖಂಡ್ ಮೂಲದ ಸ್ವೀಟ್
ಸ್ಲೋವಾಕಿಯಾ 1993ರಲ್ಲಿ ಸ್ವತಂತ್ರಗೊಂಡಿದೆ. ಇದರ ಬಳಿಕ ಸ್ಲೋವಾಕಿಯಾಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಲೋವಾಕಿಯಾ ದೇಶಕ್ಕೆ ಭೇಟಿಯಾದ ಮೋದಿ ಸ್ವೀಕರ್ ರಿಚರ್ಡ್ ರಾಸಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ನೀಡಿದ ತೆಕುವಾ ಸ್ವೀಟ್ ಮೂಲಕ ಬಿಹಾರ ಹಾಗೂ ಜಾರ್ಖಂಡ್.
ಭಾರತದ ವಿಶೇಷ ಸಿಹಿ ತಿಂಡಿ ಉಡುಗೊರೆ
ತೆಕುವಾ ಭಾರತದ ವಿಶೇಷ ಸಿಹಿ ತಿಂಡಿ. ಇದಕ್ಕೆ ಧಾರ್ಮಿಕ ಹಿನ್ನಲೆ ಇದೆ. ಈ ವಿಶೇಷ ಸ್ವೀಟ್‌ನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ತೆಕುವಾ ಸ್ವೀಟ್‌ನ್ನು ಉತ್ತರ ಭಾರತದಲ್ಲಿ ಆಚರಿಸುವ ಛತ್ ಪೂಜೆ ವೇಳೆ ಈ ತೆಕುವಾ ಸಿಹಿ ತಿಂಡಿಯನ್ನು ತಯಾರಿಸಲಾಗುತ್ತದೆ. ಸೂರ್ಯ ದೇವನಿಗೆ ಈ ತೆಕುವಾ ಸ್ವೀಟ್ ಅರ್ಪಿಸಲಾಗುತ್ತದೆ. ಬಳಿಕ ಪ್ರಸಾದದ ರೂಪದಲ್ಲಿ ತೆಕುವಾ ಸ್ವೀಟ್ಸ್ ಹಂಚಲಾಗುತ್ತದೆ.
ಸೂರ್ಯದೇವನಿಗೆ ಅರ್ಪಿಸುವ ವಿಡಿಯೋ
ಛತ್ ಪೂಜೆ ಸಂದರ್ಭದಲ್ಲಿ ಅತ್ಯಂತ ಪವಿತ್ರವಾಗಿ ಈ ಸಿಹಿ ತಿಂಡಿ ತಯಾರಿಸಲಾಗುತ್ತದೆ. ಮಣ್ಣಿನ ಒಲೆ, ಮಾವಿನ ಮರದ ಸೌದೆ ಬಳಸಿ ತೆಕುವಾ ಸ್ವೀಟ್ ತಯಾರಿಸಲಾಗುತ್ತದೆ. ಸೂರ್ಯ ದೇವನಿಗೆ ಅರ್ಪಿಸುವ ಕಾರಣಕ್ಕೆ ಅತೀವ ಮುತುವರ್ಜಿ ವಹಿಸಲಾಗುತ್ತದೆ. ಜೊತೆ ಅತ್ಯಂತ ಸ್ವಾದದ ಸಿಹಿ ತಿಂಡಿ ಇದಾಗಿದೆ. ಗರಿಗರಿಯಾಗಿರುವ ಈ ಸ್ವೀಟ್ ಭಾರತದಲ್ಲಿ ಅತೀ ಹೆಚ್ಚು ಇಷ್ಟಪಡುವ ಸಿಹಿ ತಿಂಡಿಯಾಗಿದೆ.
ತೆಕುವಾ ಸಿಹಿ ತಿಂಡಿ ಸ್ವಾದ
ಗೋಧಿ ಹಿಟ್ಟು, ಬೆಲ್ಲ, ಶುದ್ಧ ತುಪ್ಪ, ಒಣ ಕೊಬ್ಬರಿ ಚೂರುಗಳು, ಸೋಂಪು, ಎಲಕ್ಕಿ ಪುಡಿ ಸೇರಿದಂತೆ ಇತರ ಕೆಲ ಮಸಾಲೆಗಳನ್ನು ಬಳಸಲಾಗುತ್ತದೆ. ಗರಿಗರಿಯಾಗಿ ಬಿಸ್ಕಟ್ ರೀತಿಯಲ್ಲಿ ಗರಿಗರಿಯಾಗಿರುವ ಈ ತಿಂಡಿ 15 ರಿಂದ 20 ದಿನಗಳ ವರೆಗೆ ಕೆಡದಂತೆ ಬಳಸಲಾಗುತ್ತದೆ. ಯಾವುದೇ ಕೃತಕ ಪ್ರಿಸರ್ವೇಟೀವ್ ಬಳಸುವುದಿಲ್ಲ.
ತೆಕುವಾ ಸ್ವೀಟ್ಸ್ ಸರ್ಚ್
ಧಾರ್ಮಿಕ ಹಿನ್ನಲೆಯುಳ್ಳ ಹಾಗೂ ಸುದೀರ್ಘ ಪರಂಪರೆಯ ಸಿಹಿ ತಿಂಡಿಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಲೋವಾಕಿಯಾ ದೇಶದ ಸ್ಪೀಕರ್‌ಗೆ ನೀಡಿದ್ದಾರೆ. ಇಷ್ಟೇ ಅಲ್ಲ ತಿಂಡಿಯ ಮಹತ್ವವನ್ನು ಹೇಳಿದ್ದಾರೆ. ಇದೀಗ ತೆಕುವಾ ಸ್ವೀಟ್ಸ್ ಕುರಿತು ಗೂಗಲ್‌ನಲ್ಲಿ ಭಾರಿ ಸರ್ಚ್ ನಡೆಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

