ತಲೆ ನೋವು, ಹೊಟ್ಟೆ ಉರಿ ಕಡಿಮೆಯೇ ಆಗ್ತಿಲ್ವ? ಬ್ಲಾಕ್ ಕಾಫಿ hidden side effects ಇರಬಹುದು ಎಚ್ಚರ
ಬೆಳಿಗ್ಗೆ ಎದ್ದ ತಕ್ಷಣ ಟೀ, ಕಾಫಿ ಕುಡಿಬಾರದು ಅಂತ ತಜ್ಞರು ಹೇಳ್ತಾರೆ. ಹಾಗಾಗಿ ಹೆಲ್ದಿ ಇರಲಿ ಅಂತ ಅನೇಕರು ಬ್ಲಾಕ್ ಕಾಫಿ ಮೊರೆ ಹೋಗ್ತಿದ್ದಾರೆ. ಸಕ್ಕರೆ ಬೇಡ, ಹಾಲಿನ ಅವಶ್ಯಕತೆ ಇಲ್ಲ. ಆದ್ರೆ ಇದು ಕೂಡ ಅತಿಯಾದ್ರೆ ಒಳ್ಳೆಯದಲ್ಲ.

ಬ್ಲಾಕ್ ಕಾಫಿಯ ಅಡ್ಡ ಪರಿಣಾಮ
ಅತಿಯಾದ್ರೆ ಅಮೃತವೂ ವಿಷ ಎನ್ನುವ ಮಾತಿದೆ. ಹಾಗೆಯೇ ನೀವು ಪ್ರತಿ ದಿನ ಬ್ಲಾಕ್ ಕಾಫಿ ಸೇವನೆ ಮಾಡ್ತಾ ಬಂದಲ್ಲಿ ಅದು ಸ್ಲೋ ಕಿಲ್ಲರ್ ಆಗಿ ಕೆಲ್ಸ ಮಾಡ್ಬಹುದು. ಅನೇಕ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡ್ಬಹುದು. ನೀವು ಬ್ಲಾಕ್ ಕಾಫಿಯನ್ನು ಹೇಗೆ ಕುಡಿತೀರಿ, ಯಾವಾಗ ಕುಡಿತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತೆ. ಹಾಗೆಯೇ ಎಲ್ಲರಿಗೂ ಬ್ಲಾಕ್ ಕಾಫಿ ಒಂದೇ ರೀತಿ ಪರಿಣಾಮ ಬೀರೋದಿಲ್ಲ. ನಿದ್ರಾಹೀನತೆ, ಜೀರ್ಣಕ್ರಿಯೆ, ಆತಂಕದ ಮೇಲೆ ಇದು ಪರಿಣಾಮ ಬೀರುತ್ತದೆ.
ಹೊಟ್ಟೆ ಸಮಸ್ಯೆ
ಬ್ಲಾಕ್ ಕಾಫಿ ಹೊಟ್ಟೆಯಲ್ಲಿ ಆಮ್ಲವನ್ನು ಹೆಚ್ಚಿಸುತ್ತದೆ. ಹೊಟ್ಟೆಯಲ್ಲಿ ಆಹಾರವಿದ್ದು, ನಂತ್ರ ನೀವು ಬ್ಲಾಕ್ ಕಾಫಿ ಸೇವನೆ ಮಾಡಿದ್ರೆ ತೊಂದ್ರೆ ಇಲ್ಲ. ಖಾಲಿ ಹೊಟ್ಟೆಯಲ್ಲಿ ಇದ್ರ ಸೇವನೆ ಮಾಡಿದಾಗ ಆಮ್ಲವು ಹೊಟ್ಟೆಯ ಒಳಪದರದ ಮೇಲೆ ಕಾರ್ಯನಿರ್ವಹಿಸುವುದಿಲ್ಲ. ಕಾಲಾನಂತರದಲ್ಲಿ, ಇದು ಆಮ್ಲೀಯತೆ, ಹೊಟ್ಟೆ ಉಬ್ಬರ, ಎದೆ ಉರಿ, ಹುಳಿ ತೇಗು ಕಾಣಿಸಿಕೊಳ್ಳುತ್ತದೆ.
ನಿದ್ರೆಯಲ್ಲಿ ಏರುಪೇರು
ನೀವು ಕುಡಿಯುವ ಬ್ಲಾಕ್ ಕಾಫಿ, ನಿದ್ರೆಯ ಗುಣಮಟ್ಟವನ್ನು ಸದ್ದಿಲ್ಲದೆ ದುರ್ಬಲಗೊಳಿಸಬಹುದು. ಕಾಫಿ ಯಾವಾಗಲೂ ನಿದ್ರೆಗೆ ಸಂಪೂರ್ಣ ಅಡ್ಡಿಯಾಗುವುದಿಲ್ಲ. ಆದ್ರೆ ನಿದ್ರೆಯ ಆಳವನ್ನು ಬದಲಾಯಿಸುತ್ತದೆ. ನಿಯಮಿತವಾಗಿ ಬ್ಲಾಕ್ ಕಾಫಿ ಕುಡಿಯುವುದರಿಂದ ಆಳವಾದ ನಿದ್ರೆ ಕಡಿಮೆಯಾಗುತ್ತದೆ. ನೀವು ಏಳು ಗಂಟೆ ಕಾಲ ಮಲಗಿದ್ರೂ ಎದ್ದಾಗ ದಣಿವಿರುತ್ತದೆ. ನಿರಂತರ ಆಯಾಸ, ಬೆಳಿಗ್ಗೆ ನಿರುತ್ಸಾಹ ಕಾಡುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ನೀವು ಬ್ಲಾಕ್ ಕಾಫಿ ಸೇವನೆ ಮಾಡೋದ್ರಿಂದ ಕಾಡಬಹುದು.
ಆತಂಕ ಹೆಚ್ಚಳ
ಕೆಫೀನ್ ನರಮಂಡಲವನ್ನು ಉತ್ತೇಜಿಸುತ್ತದೆ. ಆದ್ರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬ್ಲಾಕ್ ಕಾಫಿ ಕುಡಿಯುವುದು ಆತಂಕಕ್ಕೆ ಕಾರಣವಾಗುತ್ತದೆ. ಉತ್ಸಾಹಭರಿತ ಆಲೋಚನೆಗಳು, ನಡುಗುವ ಕೈಗಳು, ತ್ವರಿತ ಹೃದಯ ಬಡಿತ ಅಥವಾ ಚಡಪಡಿಕೆಯ ಭಾವನೆ ಸಂಭವಿಸಬಹುದು.
ನಿರ್ಜಲೀಕರಣ
ನೀರಿನ ಬಾಟಲಿ ಪಕ್ಕದಲ್ಲಿದ್ರೆ ಸಾಲದು ಅದನ್ನು ನೀವು ಕುಡಿಯಬೇಕು. ಜನರು ಬ್ಲಾಕ್ ಕಾಫಿ ಮೋಹದಲ್ಲಿ ನೀರನ್ನು ಮರೆಯುತ್ತಾರೆ. ಬಾಯಾರಿಕೆ ಆದಾಗ ಇಲ್ಲ ಫ್ರೆಶ್ ಆಗಿರಬೇಕು ಎನ್ನುವ ಕಾರಣ ನೀಡಿ ಆಗಾಗ ಬ್ಲಾಕ್ ಕಾಫಿ ಸೇವನೆ ಮಾಡುತ್ತಾರೆ. ಇದರಿಂದ ನಿರ್ಜಲೀಕರಣ ಸಂಭವಿಸುತ್ತದೆ. ಇದು ಹೆಚ್ಚಾಗಿ ತಲೆನೋವು, ಒಣ ಚರ್ಮ, ಆಯಾಸ ಅಥವಾ ಮಲಬದ್ಧತೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಜನರು ತಪ್ಪಾಗಿ ತಿಳಿಯುತ್ತಾರೆ. ದಣಿವಾದಾಗ ನೀರು ಕುಡಿಯುವ ಬದಲು ಮತ್ತೊಂದು ಕಪ್ ಬ್ಲಾಕ್ ಕಾಫಿ ಸೇವನೆ ಮಾಡ್ತಾರೆ. ನೀರು ಹಾಗೂ ಕಾಫಿ ಎರಡೂ ದ್ರವವಾಗಿದ್ದರೂ ಎರಡರ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ.
ಖನಿಜ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ
ಊಟದ ಜೊತೆ ನೀವು ಬ್ಲಾಕ್ ಕಾಫಿ ಸೇವನೆ ಮಾಡಿದ್ರೆ ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳ ಹೀರಿಕೊಳ್ಳುವಿಕೆಯನ್ನು ಇದು ಸ್ವಲ್ಪ ದುರ್ಬಲಗೊಳಿಸಬಹುದು. ಈ ಪೋಷಕಾಂಶದ ಕೊರತೆಯಿರುವವರಿಗೆ ಇದು ಸಮಸ್ಯೆಯನ್ನುಂಟು ಮಾಡುತ್ತದೆ. ಊಟಕ್ಕೆ ಸ್ವಲ್ಪ ಮೊದಲು ಅಥವಾ ನಂತರ ಕಾಫಿ ಕುಡಿಯುವುದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
