ದಿನದ 24 ಗಂಟೆಯಲ್ಲಿ ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ 'ಅಮೃತಕ್ಕೆ ಸಮಾನ'.. ಯಾವುದು ಆ ಮುಹೂರ್ತ?
ನೀರನ್ನು ಎಲ್ಲಾ ಸಮಯದಲ್ಲೂ ಅವರವರ ಆರೋಗ್ಯ ಹಾಗೂ ಅನುಕೂಲತೆಗೆ ತಕ್ಕಂತೆ ಕುಡಿಯಬಹುದು. ಆದರೆ, ಯಾವ ಸಮಯದಲ್ಲಿ ಕುಡಿದ ನೀರು ಅಮೃತದಂತೆ ಕೆಲಸ ಮಾಡುತ್ತದೆ ಗೊತ್ತಾ? ಉತ್ತಮ ಆರೋಗ್ಯ ಭಾಗ್ಯ ಪಡೆಯಲು ಈ ಸ್ಟೋರಿ ನೋಡಿ

ನೀರು ಭೂಲೋಕದ ಅಮೃತ ಎನ್ನುವ ಮಾತು ಬಹಳಷ್ಟು ಜನರಿಗೆ ಗೊತ್ತೇ ಇದೆ. ನೀರನ್ನು ಎಲ್ಲರೂ ಕುಡಿಯುತ್ತಾರೆ.
ಆದರೆ, ಯಾವ ಸಮಯದಲ್ಲಿ ನೀರನ್ನು ಕುಡಿಯಬೇಕು ಯಾವ ಸಮಯದಲ್ಲಿ ಕುಡಿಯಬಾರದು ಎಂಬುದು ಹಲವರಿಗೆ ಗೊತ್ತಿಲ್ಲ.
ನೀರನ್ನು ಊಟವಾದ ತಕ್ಷಣ, ತಿಂಡಿ ತಿಂದ ತಕ್ಷಣ ಕುಡಿಯಬಾರದು ಎನ್ನುತ್ತಾರೆ ಆರೋಗ್ಯ ಶಾಸ್ತ್ರಜ್ಞರು. ಹೊಟ್ಟೆ ತುಂಬಿದ ಬಳಿಕ ಅಟ್‌ಲೀಸ್ಟ್ 30 ನಿಮಿಷ ಬಿಟ್ಟು ನೀರು ಕುಡಿಯಿರಿ ಅಂತಾರೆ.
ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವುದಕ್ಕಿಂತ ಒಂದು ಬಾರಿ ಒಂದು ಲೋಟ ಅಥವಾ ಬಾಯಾರಿಕೆಗೆ ತಕ್ಕಂತೆ ಕುಡಿಯವುದು ಒಳಿತು ಎನ್ನುತ್ತವೆ ಆರೋಗ್ಯ ಶಾಸ್ತ್ರದ ಗ್ರಂಥಗಳು.
ನೀರು ಎಂದರೆ ಅದು ಶುದ್ಧವಾದ ನೀರೇ ಆಗಿರಬೇಕು.. ಅಶುದ್ಧ ನೀರು ಕುಡಿದು ಆರೋಗ್ ಹಾಗೂ ಹೊಟ್ಟೆ ಕೆಡಿಸಿಕೊಳ್ಳಬಾರದು.
ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದು ಅತ್ಯಂತ ಹೆಚ್ಚು ಪ್ರಯೋಜನಕಾರಿ ಎನ್ನಲಾಗಿದೆ. ಸ್ಟೀಲ್ ಪಾತ್ರೆಯೋ ಓಕೆ ಎಂಬ ಮಾತಿದೆ.
ನೀರನ್ನು ಹೆಚ್ಚಾಗಿ ಮಡಿಕೆ ಅಥವಾ ತಾಮ್ರದ ಪಾತ್ರೆಯಲ್ಲಿ ಶೇಖರಿಸುವ ಅಭ್ಯಾಸ ಹೆಚ್ಚಿನ ಹಳ್ಳಿಗಳಲ್ಲಿ ಇದೆ. ಆದರೆ, ಮಳೆಗಾಲ ಹಾಗೂ ಚಳಿಗಾಲಗಳಲ್ಲಿ ಮಣ್ಣಿನ ಮಡಿಕೆಯಲ್ಲಿನ ನೀರು ತುಂಬಾ ತಂಪಾಗಿ ಇದ್ದರೆ ಕುಡಿಯುವುದು ಅಷ್ಟೇನೂ ಉತ್ತಮವಲ್ಲ. ನೀರು ಸಾಮಾನ್ಯ ವಾತವರಣದಲ್ಲಿ ಇದ್ದಂತೆ ಇದ್ದರೆ ಉತ್ತಮ ಎನ್ನಲಾಗುತ್ತದೆ.
ನೀರನ್ನು ರಾತ್ರಿಯ ಸಮಯದಲ್ಲಿ ಎಷ್ಟು ಅಗತ್ಯವೋ ಅಷ್ಟೇ ಕುಡಿಯಬೇಕು. ಮಲಗುವ 2 ಗಂಟೆ ಮೊದಲೇ ಅಗತ್ಯವಿದ್ದಷ್ಟು ನೀರನ್ನು ಕುಡಿದು ಮುಗಿಸಬೇಕು. ಮಲಗುವಾಗ ಹೆಚ್ಚುನೀರು ಕುಡಿದರೆ ರಾತ್ರಿ ನಿದ್ದೆ ಸಮಯದಲ್ಲಿ ಎಚ್ಚರವಾಗಿ ನಿದ್ದೆಗೆ ಭಂಗ ಬರುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಬೇಕು. ಎದ್ದಾಗ ಹೊಟ್ಟೆಗೆ ಹೋವ\ಗುವ ಮೊಟ್ಟಮೊದಲ ಆಹಾರ ನೀರೇ ಆಗಿರಬೇಕು ಎನ್ನುತ್ತದೆ ಆರೋಗ್ಯ ಶಾಸ್ತ್ರ. ಕಾರಣ, ರಾತ್ರಿಯೆಲ್ಲಾ ಉಸಿರಾಟ ಹಾಗೂ ದೇಹದ ಅನೇಕ ಅಗತ್ಯಗಳಿಗೆ ನೀರು ಪೂರೈಕೆ ಆಗುವುದರಿಂದ ಬೆಳಿಗ್ಗೆ ಎದ್ದ ತಕ್ಷಣ ದೇಹಕ್ಕೆ ನೀರಿನ ಅಗತ್ಯ ಇರುತ್ತದೆ. ಆಗ ಕುಡಿದ ನೀರು ನಮ್ಮ ದೇಹಕ್ಕೆ ‘ಅಮೃತ’ದಂತೆ ಕೆಲಸ ಮಾಡುತ್ತದೆ. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

