ಕೋಳಿ ಮಾಂಸದಲ್ಲಿ ಲೆಗ್ ಪೀಸೇ ಬೇಕು ಅಂತ ಎಲ್ರೂ ಪಟ್ಟು ಹಿಡಿಯೋದ್ಯಾಕೆ, ಅಲ್ಲೇ ಇರೋದು ಆ ಸೀಕ್ರೇಟ್!
Why Chicken Leg Pieces are Popular: ಕೋಳಿ ಮಾಂಸದ ಬೇರೆ ಯಾವುದೇ ಭಾಗ ತಿನ್ನುವುದಕ್ಕಿಂತಲೂ ಲೆಗ್ ಪೀಸ್ ತಿಂದ್ರೆ ಅದರ ಮಜಾನೇ ಬೇರೆ ಎನ್ನುತ್ತಾರೆ ಅನೇಕರು. ಎಲ್ಲೇ ಹೋದರೂ ಲೆಗ್ ಪೀಸ್ ಬೇಕೆಂದು ಆಸೆಪಡುತ್ತಾರೆಂದರೆ ಅಂಥದ್ದು ಅದರಲ್ಲಿ ಏನಿದೆ?.

ಕಾಲಿನ ತುಂಡೇ ಬೇಕೆನ್ನುವುದೇಕೆ?
ಮಾಂಸಾಹಾರಿ ಪ್ರಿಯರ ಮನೆಗಳಿಗೆ ಭಾನುವಾರ ಭೇಟಿ ನೀಡಿದರೆ ಮನೆಯೆಲ್ಲಾ ಕೋಳಿ ಮಾಂಸದ ಖಾದ್ಯಗಳ ಘಮದಿಂದಲೇ ತುಂಬಿರುತ್ತದೆ. ಹಾಗೆಯೇ ಬಟ್ಟಲಿನಲ್ಲಿ ಎಷ್ಟೇ ತುಂಡುಗಳಿದ್ದರೂ ಎಲ್ಲರ ಕಣ್ಣು ಆ ಒಂದು ತುಂಡಿನ ಮೇಲೆಯೇ ಇರುತ್ತದೆ. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ಹೋಟೆಲ್‌ಗೆ ಹೋಗುವ ಹುಡುಗರವರೆಗೆ ಕಾಲಿನ ತುಂಡಿಗಾಗಿ ಜಗಳವಾಡದವರು ಯಾರೂ ಇಲ್ಲ. ಕೋಳಿಯ ಇತರ ಎಲ್ಲಾ ಭಾಗಗಳಕ್ಕಿಂತ ಕಾಲಿನ ತುಂಡೇ ಬೇಕೆನ್ನುವುದೇಕೆ ಎಂದಿಲ್ಲಿ ನೋಡೋಣ ಬನ್ನಿ..
ಅದೇ ಏಕೆ ತುಂಬಾ ರುಚಿಕರ ?
ಪ್ರಪಂಚದಾದ್ಯಂತ ಮಾಂಸಾಹಾರಿಗಳು ಕೋಳಿ ಮಾಂಸವನ್ನು ತಿಂದಷ್ಟು ಬೇರೆ ಮಾಂಸವನ್ನು ತಿನ್ನಲ್ಲ. ಅದು ಪಾರ್ಟಿಯಾಗಿರಲಿ ಅಥವಾ ಸಮಾರಂಭವಾಗಿರಲಿ ವಿವಿಧ ರೀತಿಯ ಕೋಳಿ ಭಕ್ಷ್ಯಗಳು ಕಾಣಸಿಗುತ್ತವೆ. ಅದರಲ್ಲೂ ಕೋಳಿ ಮಾಂಸದ ಬೇರೆ ಯಾವುದೇ ಭಾಗ ತಿನ್ನುವುದಕ್ಕಿಂತಲೂ ಲೆಗ್ ಪೀಸ್ ತಿಂದ್ರೆ ಅದರ ಮಜಾನೇ ಬೇರೆ ಎನ್ನುತ್ತಾರೆ ಅನೇಕರು. ಎಲ್ಲೇ ಹೋದರೂ ಲೆಗ್ ಪೀಸ್ ಬೇಕೆಂದು ಆಸೆಪಡುತ್ತಾರೆಂದರೆ ಅಂಥದ್ದು ಅದರಲ್ಲಿ ಏನಿದೆ? ಅದೇ ಏಕೆ ತುಂಬಾ ರುಚಿಕರ ಎಂಬುದರ ಹಿಂದಿನ ಸತ್ಯ ಇಲ್ಲಿದೆ ನೋಡಿ..
ತುಂಬಾ ಮೃದು ಮತ್ತು ರಸಭರಿತ
ಕೋಳಿ ಕಾಲಿನ ತುಂಡುಗಳು ಕೋಳಿಯ ಇತರ ಭಾಗಗಳಿಗಿಂತ ಭಿನ್ನವಾಗಿವೆ. ಅವು ತೊಡೆಯ ಮಾಂಸವನ್ನು ಒಳಗೊಂಡಿರುತ್ತವೆ. ಇದನ್ನು ಡಾರ್ಕ್ ಮಾಂಸ ಎಂದೂ ಕರೆಯುತ್ತಾರೆ. ಉಳಿದ ಬಿಳಿ ಮಾಂಸಕ್ಕೆ ಹೋಲಿಸಿದರೆ ಕಾಲಿನ ತುಂಡುಗಳು ತುಂಬಾ ಮೃದು ಮತ್ತು ರಸಭರಿತವಾಗಿರುತ್ತವೆ. ಅದಕ್ಕಾಗಿಯೇ ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಅವುಗಳನ್ನು ಉತ್ಸಾಹದಿಂದ ತಿನ್ನುತ್ತಾರೆ.
ಮಾಂಸಕ್ಕೆ ಉತ್ತಮ ಬಣ್ಣ ಮತ್ತು ವಿಶಿಷ್ಟ ಪರಿಮಳ
ಕೋಳಿ ಕಾಲಿನ ತುಂಡುಗಳು ತುಂಬಾ ರುಚಿಯಾಗಿರಲು ಮುಖ್ಯ ಕಾರಣವೆಂದರೆ ಅವುಗಳಲ್ಲಿರುವ ಮಯೋಗ್ಲೋಬಿನ್ ಎಂಬ ಪ್ರೋಟೀನ್. ಈ ಪ್ರೋಟೀನ್ ಸ್ನಾಯುಗಳಿಗೆ ಆಮ್ಲಜನಕವನ್ನು ಪೂರೈಸಲು ಸಹಾಯ ಮಾಡುತ್ತದೆ. ಕಾಲಿನ ತುಂಡು ಕೋಳಿಯ ದೇಹದ ನಿರಂತರವಾಗಿ ಚಲಿಸುವ ಭಾಗವಾಗಿರುವುದರಿಂದ ಈ ಪ್ರೋಟೀನ್‌ನ ಶೇಕಡಾವಾರು ಅಲ್ಲಿ ಹೆಚ್ಚಾಗಿರುತ್ತದೆ. ಇದು ಮಾಂಸಕ್ಕೆ ಉತ್ತಮ ಬಣ್ಣ ಮತ್ತು ವಿಶಿಷ್ಟ ಪರಿಮಳವನ್ನು ನೀಡುತ್ತದೆ.
ಜಿಮ್‌ಗೆ ಹೋಗುವವರು ತಿನ್ನುವುದು ಇದನ್ನೇ
ಕೋಳಿ ಕಾಲುಗಳ ತುಂಡುಗಳು ರುಚಿಕರವಾಗಿರುವುದಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಅವು ಕಬ್ಬಿಣ, ಸತು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿವೆ. ಕ್ಯಾಲೋರಿಗಳ ವಿಷಯಕ್ಕೆ ಬಂದರೆ ಸುಮಾರು 44 ಗ್ರಾಂ ತೂಕದ ಒಂದು ಕಾಲು ತುಂಡು 12.4 ಗ್ರಾಂ ಪ್ರೋಟೀನ್ ನೀಡುತ್ತದೆ. ಇದರಲ್ಲಿರುವ ಕೊಬ್ಬಿನ ಅಂಶ ಸ್ವಲ್ಪ ಹೆಚ್ಚಾಗಿರುತ್ತದೆ, ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಅದಕ್ಕಾಗಿಯೇ ಜಿಮ್‌ಗೆ ಹೋಗುವವರು ಮತ್ತು ಕಠಿಣ ವ್ಯಾಯಾಮ ಮಾಡುವವರು ಕೋಳಿ ಕಾಲು ತುಂಡುಗಳನ್ನು ತಿನ್ನುತ್ತಾರೆ.
ಬೇಡಿಕೆ ಎಂದಿಗೂ ಕಡಿಮೆಯಾಗಲ್ಲ
ಕೋಳಿ ಮಾಂಸದ ತುಂಡುಗಳಿಗಿಂತ ಕಾಲುಗಳ ತುಂಡುಗಳಲ್ಲಿ ಕ್ಯಾಲೋರಿ ಮತ್ತು ಕೊಬ್ಬು ಸ್ವಲ್ಪ ಹೆಚ್ಚಿದ್ದರೂ, ಅವುಗಳ ಪೋಷಕಾಂಶಗಳು ಮತ್ತು ರುಚಿಗೆ ಸಾಟಿಯಿಲ್ಲ. ಅದಕ್ಕಾಗಿಯೇ ಕೋಳಿ ಮಾರುಕಟ್ಟೆಯಲ್ಲಿ ಕಾಲುಗಳ ತುಂಡುಗಳಿಗೆ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
