MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಆರೋಗ್ಯಕರ ಅಗಸೆಬೀಜದಿಂದ ಚಟ್ನಿ ಪುಡಿ ಮಾಡಿ, ಹೀಗೆ ಸ್ಟೋರ್ ಮಾಡಿದ್ರೆ 6 ತಿಂಗಳು ಏನೂ ಆಗಲ್ಲ

ಆರೋಗ್ಯಕರ ಅಗಸೆಬೀಜದಿಂದ ಚಟ್ನಿ ಪುಡಿ ಮಾಡಿ, ಹೀಗೆ ಸ್ಟೋರ್ ಮಾಡಿದ್ರೆ 6 ತಿಂಗಳು ಏನೂ ಆಗಲ್ಲ

ಅಗಸೆಬೀಜವನ್ನು ನೇರವಾಗಿ ತಿನ್ನಲು ಕಷ್ಟಪಡುವವರಿಗಾಗಿ, ಉತ್ತರ ಕರ್ನಾಟಕ ಶೈಲಿಯ ರುಚಿಕರ ಚಟ್ನಿ ಪುಡಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು ಮತ್ತು ಸರಳ ಕ್ರಮಗಳನ್ನು ಅನುಸರಿಸಿ, ಆರೋಗ್ಯಕರ ಅಗಸೆಬೀಜ ಚಟ್ನಿ ಪುಡಿಯನ್ನು ತಯಾರಿಸಿ ಆರು ತಿಂಗಳವರೆಗೆ ಸಂಗ್ರಹಿಸಬಹುದು.

1 Min read
Author : Mahmad Rafik
Published : Jun 20 2026, 07:46 PM IST
Share this Photo Gallery
  • FB
  • TW
  • Linkdin
  • Whatsapp
15
ಅಗಸೆಬೀಜ
Image Credit : Gemini

ಅಗಸೆಬೀಜ

ಇತ್ತೀಚೆಗೆ ಅಗಸೆಬೀಜ ತಿನ್ನಬೇಕು ಎಂಬ ಟ್ರೆಂಡ್ ಶುರುವಾಗಿದೆ. ಆದ್ರೆ ಬಹುತೇಕರಿಗೆ ಅಗಸೆಬೀಜ ಹೇಗೆ ಸೇವಿಸಬೇಕು ಎಂಬುದರ ಸ್ಪಷ್ಟತೆ ಇಲ್ಲ. ಹಾಗೆಯೇ ತಿನ್ನಲು ಅಗಸೆಬೀಜ ರುಚಿಯಾಗಿರಲ್ಲ. ಹಾಗಾಗಿ ಅಂಗಡಿಯಿಂದ ತಂದ್ರೂ ಅದು ಡಬ್ಬದಲ್ಲಿಯೇ ಉಳಿಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಅಗಸೆಬೀಜವನ್ನು ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅಗಸೆಬೀಜದ ಚಟ್ನಿ ಪುಡಿ
Image Credit : istockphoto

ಅಗಸೆಬೀಜದ ಚಟ್ನಿ ಪುಡಿ

ಚಟ್ನಿಪುಡಿ ರೂಪದಲ್ಲಿ ಅಗಸೆಬೀಜ ಬಳಕೆ ಮಾಡಲಾಗುತ್ತದೆ. ಕೆಲವು ಸರಳ ವಿಧಾನಗಳಿಂದ ಕ್ರಮಬದ್ಧವಾಗಿ ಚಟ್ನಿ ಮಾಡಿಕೊಳ್ಳೋದರಿಂದ ಸುಮಾರು ಆರು ತಿಂಗಳವರೆಗೆ ಇದನ್ನು ಸ್ಟೋರ್ ಮಾಡಿಕೊಳ್ಳಬಹುದು. ಪ್ರತಿದಿನ ಊಟದಲ್ಲಿ ಅಗಸೆಬೀಜದ ಚಟ್ನಿ ಬಳಕೆ ಮಾಡೋದರಿಂದ ಆರೋಗ್ಯಕರ ಲಾಭಗಳು ನಿಮ್ಮದಾಗುತ್ತವೆ. ಅಗಸೆಬೀಜದ ಚಟ್ನಿ ಪುಡಿ ಮಾಡೋದು ಹೇಗೆಂದು ನೋಡೋಣ ಬನ್ನಿ.

Related Articles

Related image1
ಬಾಯಿ ರುಚಿ ಕೆಟ್ಟಾಗ ನಾಲ್ಕು ಈರುಳ್ಳಿಯಿಂದ ಚಟ್ನಿ ಮಾಡ್ಕೊಳ್ಳಿ; ಬಿಸಿ ಅನ್ನ, ದೋಸೆಗೂ ಬೆಸ್ಟ್ ಕಾಂಬಿನೇಷನ್
Related image2
ಬೆಳ್ಳುಳ್ಳಿ ಕಬಾಬ್‌ ಚಂದ್ರು ಸ್ಟೈಲ್‌ ಅಲ್ಲಿ, ಬೆಳ್ಳುಳ್ಳಿ ಚಟ್ನಿ ಮಾಡೋದು ಹೀಗೆ
35
ಅಗಸೆಬೀಜದ ಚಟ್ನಿ ಪುಡಿ ಮಾಡಲು ಬೇಕಾಗುವ ಸಾಮಾಗ್ರಿಗಳು
Image Credit : Getty

ಅಗಸೆಬೀಜದ ಚಟ್ನಿ ಪುಡಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಅಗಸೆಬೀಜ: 200 ಗ್ರಾಂ, ಅಚ್ಚಖಾರದ ಪುಡಿ: 2 ಟೀ ಸ್ಪೂನ್ (10 ಒಣಮೆಣಸಿನಕಾಯಿ), ಬೆಳ್ಳುಳ್ಳಿ: 10 ರಿಂದ 15 ಎಸಳು, ಜೀರಿಗೆ: 1 ಟೀ ಸ್ಪೂನ್, ಕರೀಬೇವು: 15 ರಿಂದ 20 ಎಲೆ, ಉಪ್ಪು: ರುಚಿಗೆ ತಕ್ಕಷ್ಟು, ಧನಿಯಾ: 1/2 ಟೀ ಸ್ಪೂನ್ (ಬೇಕಿದ್ರೆ ಅರಿಶಿನ ಪುಡಿ, ಕೋತಂಬರಿ ಸೊಪ್ಪು ಸೇರಿಸಿಕೊಳ್ಳಬಹುದು)

45
ಅಗಸೆಬೀಜ ಚಟ್ನಿ ಮಾಡುವ ವಿಧಾನ
Image Credit : Getty

ಅಗಸೆಬೀಜ ಚಟ್ನಿ ಮಾಡುವ ವಿಧಾನ

ಮೊದಲಿಗೆ ಅಗಸೆಬೀಜವನ್ನು ಕಾವಲಿಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಂಡು ಎತ್ತಿಟ್ಟುಕೊಳ್ಳಿ. ನಂತರ ಅರ್ಧ ಟೀ ಸ್ಪೂನ್‌ ಎಣ್ಣೆಯಲ್ಲಿ ಕರೀಬೇವು ಎಲೆಗಳನ್ನು ಫ್ರೈ ಮಾಡಿಕೊಳ್ಳಿ ಅಗಸೆಬೀಜ ತಣ್ಣಗಾಗುವರೆಗೂ ವೇಟ್ ಮಾಡಿ. ಈ ವೇಳೆ ಬೆಳ್ಳುಳ್ಳಿಯ ಸಿಪ್ಪೆ ಬಿಡಿಸಿಕೊಳ್ಳಿ.

55
 ಗಾಳಿಯಾಡದ ಡಬ್ಬದಲ್ಲಿ ಹಾಕಿಕೊಳ್ಳಿ
Image Credit : others

ಗಾಳಿಯಾಡದ ಡಬ್ಬದಲ್ಲಿ ಹಾಕಿಕೊಳ್ಳಿ

ಈಗ ಒಂದು ಮಿಕ್ಸಿ ಜಾರ್‌ಗೆ ಹುರಿದುಕೊಂಡಿರುವ ಅಗಸೆಬೀಜ ಮತ್ತು ಕರೀಬೇವು ಹಾಕಿಕೊಳ್ಳಿ. ಈಗ ಇದಕ್ಕೆ ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ, ಜೀರಿಗೆ, ಧನಿಯಾ, ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಂಡ್ರೆ ಅಗಸೆಬೀಜ ಚಟ್ನಿಪುಡಿ ಸವಿಯಲು ಸಿದ್ಧವಾಗುತ್ತದೆ. 

ಈ ಚಟ್ನಿಪುಡಿಯನ್ನು ಚಪಾತಿ, ರೊಟ್ಟಿ, ಬಿಸಿಅನ್ನಕ್ಕೂ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಈ ಚಟ್ನಿ ಜೊತೆ ತುಪ್ಪ, ಒಳ್ಳೆಣ್ಣೆ ಮತ್ತು ಮೊಸರು ಸೇರಿಸಿಕೊಂಡ್ರೆ ರುಚಿ ಹೆಚ್ಚಾಗುತ್ತದೆ. ಗಾಳಿಯಾಡದ ಡಬ್ಬದಲ್ಲಿ ಅಗಸೆಬೀಜ ಚಟ್ನಿಪುಡಿ ಹಾಕಿಕೊಂಡ್ರೆ ಆರು ತಿಂಗಳವರೆಗೆ ಸ್ಟೋರ್ ಮಾಡಿಕೊಳ್ಳಬಹುದು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರೆಸಿಪಿ
ಅಡುಗೆಮನೆ ಸಲಹೆಗಳು
ಆಹಾರ

Latest Videos
Recommended Stories
Recommended image1
ಬೆಂಡೆಕಾಯಿ ಪಲ್ಯ ಮಾಡುವಾಗ ಈ ಒಂದು ಬಿಳಿ ಪದಾರ್ಥ ಹಾಕಿ.. ಗರಿಗರಿಯಾಗಿ, ಹೆಚ್ಚು ರುಚಿಯಾಗಿರುತ್ತೆ
Recommended image2
Protein dosa recipe: ರಾತ್ರಿಯಿಡೀ ನೆನೆಸಬೇಕಿಲ್ಲ... ಉದ್ದು, ಸೋಡಾ ಏನೂ ಹಾಕದೆ ಮಾಡಿ ಪ್ರೋಟೀನ್ ದೋಸೆ
Recommended image3
ಕಿಂಡರ್ ಜಾಯ್, ಸಫೋಲಾ ಸೇರಿ ಹಲವು ಉತ್ಪನ್ನಕ್ಕೆ ಆಹಾರ ಸುರಕ್ಷತೆ ಪ್ರಾಧಿಕಾರ ನೋಟಿಸ್, ಕಾರಣವೇನು?
Related Stories
Recommended image1
ಬಾಯಿ ರುಚಿ ಕೆಟ್ಟಾಗ ನಾಲ್ಕು ಈರುಳ್ಳಿಯಿಂದ ಚಟ್ನಿ ಮಾಡ್ಕೊಳ್ಳಿ; ಬಿಸಿ ಅನ್ನ, ದೋಸೆಗೂ ಬೆಸ್ಟ್ ಕಾಂಬಿನೇಷನ್
Recommended image2
ಬೆಳ್ಳುಳ್ಳಿ ಕಬಾಬ್‌ ಚಂದ್ರು ಸ್ಟೈಲ್‌ ಅಲ್ಲಿ, ಬೆಳ್ಳುಳ್ಳಿ ಚಟ್ನಿ ಮಾಡೋದು ಹೀಗೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved