- Home
- Life
- Food
- ಬಾಯಿ ರುಚಿ ಕೆಟ್ಟಾಗ ನಾಲ್ಕು ಈರುಳ್ಳಿಯಿಂದ ಚಟ್ನಿ ಮಾಡ್ಕೊಳ್ಳಿ; ಬಿಸಿ ಅನ್ನ, ದೋಸೆಗೂ ಬೆಸ್ಟ್ ಕಾಂಬಿನೇಷನ್
ಬಾಯಿ ರುಚಿ ಕೆಟ್ಟಾಗ ನಾಲ್ಕು ಈರುಳ್ಳಿಯಿಂದ ಚಟ್ನಿ ಮಾಡ್ಕೊಳ್ಳಿ; ಬಿಸಿ ಅನ್ನ, ದೋಸೆಗೂ ಬೆಸ್ಟ್ ಕಾಂಬಿನೇಷನ್
ಬಾಯಿ ರುಚಿ ಕೆಟ್ಟಾಗ ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ರುಚಿಕರ ಈರುಳ್ಳಿ ಚಟ್ನಿ ರೆಸಿಪಿ ಇಲ್ಲಿದೆ. ಈರುಳ್ಳಿ, ಟೊಮೆಟೋ ಮತ್ತು ಕೆಲವು ಮಸಾಲೆಗಳನ್ನು ಬಳಸಿ ಇದನ್ನು ಸರಳವಾಗಿ ತಯಾರಿಸಬಹುದು. ಈ ಚಟ್ನಿಯು ಅನ್ನ, ರೊಟ್ಟಿ, ಮತ್ತು ದೋಸೆಯೊಂದಿಗೆ ಸವಿಯಲು ಅತ್ಯುತ್ತಮವಾಗಿರುತ್ತದೆ.

ಈರುಳ್ಳಿ ಚಟ್ನಿ
ಬಾಯಿ ರುಚಿ ಕೆಟ್ಟಾಗ ಕೇವಲ ನಾಲ್ಕೇ ನಾಲ್ಕು ಈರುಳ್ಳಿ ಬೆಳೆಸಿ ರುಚಿಕರವಾದ ಚಟ್ನಿ ಮಾಡಿಕೊಳ್ಳಬಹುದು. ತುಂಬಾ ಸರಳವಾದ ರೆಸಿಪಿ ಇದಾಗಿದ್ದು, 10 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಈ ಚಟ್ನಿ ಬಿಸಿಯಾದ ಅನ್ನ, ರೊಟ್ಟಿ, ಪೂರಿ ಮತ್ತು ದೋಸೆಗೆ ಒಳ್ಳೆಯ ಕಾಂಬಿನೇಷನ್ ಆ

ಬೇಕಾಗುವ ಸಾಮಾಗ್ರಿಗಳು
ಈರುಳ್ಳಿ: 4, ಟೊಮೆಟೋ: 2, ಬೆಳ್ಳುಳ್ಳಿ: 10 ಎಸಳು, ಅಡಿಕೆ ಗಾತ್ರದಷ್ಟು ಹುಣಸೆಹಣ್ಣು, ಸಾಸವೆ: 1/4 ಟೀ ಸ್ಪೂನ್, ಜೀರಿಗೆ: 1/2 ಟೀ ಸ್ಪೂನ್, ಕಡಲೆಬೇಳೆ: 1/2 ಟೀ ಸ್ಪೂನ್, ಮೆಂತ್ಯೆ: 8 ರಿಂದ 10 ಕಾಳು, ಧನಿಯಾ: 1/4 ಟೀ ಸ್ಪೂನ್, ಬ್ಯಾಡಗಿ ಮೆಣಸಿನಕಾಯಿ: 10, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು, ಕರೀಬೇವು: 8-10 ದಳ, ಕೋತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿಕೊಂಡು ಒಲೆ ಆನ್ ಮಾಡ್ಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸವೆ, ಜೀರಿಗೆ, ಕಡಲೆಬೇಳೆ, ಮೆಂತ್ಯೆ, ಧನಿಯಾ, ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿಕೊಂಡು ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಬೌಲ್‌ಗೆ ಹಾಕಿ ಎತ್ತಿಟ್ಟುಕೊಳ್ಳಿ.
ಸಿದ್ಧತೆ
ನಂತರ ಇದೇ ಬಾಣಲೆಗೆ ಕತ್ತರಿಸಿ ಈರುಳ್ಳಿ, ಅಡಿಕೆ ಗಾತ್ರದ ಹುಣಸೆ ಸೇರಿಸಿಕೊಳ್ಳಬೇಕು. ನಂತರ ಹಸಿ ವಾಸನೆ ಹೋಗೋವರೆಗೂ ಈರುಳ್ಳಿ ಫ್ರೈ ಮಾಡಿಕೊಂಡ ನಂತ್ರ ಇದಕ್ಕೆ ಕತ್ತರಿಸಿದ ಟೊಮೆಟೋ ಸೇರಿಸಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಂಡು ಒಲೆ ಆಫ್ ಮಾಡಿಕೊಳ್ಳಬೇಕು.
ಮಸಾಲೆ ಮತ್ತು ಈರುಳ್ಳಿ-ಟೊಮೆಟೋ ಮಿಶ್ರಣಕ್ಕೆ ಒಗ್ಗರಣೆ
ತದನಂತರ ಹುರಿದುಕೊಂಡಿರುವ ಮಸಾಲೆ ಮತ್ತು ಈರುಳ್ಳಿ-ಟೊಮೆಟೋವನ್ನು ಜಾರ್‌ಗೆ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ. ಈಗ ರುಬ್ಬಿಕೊಂಡಿರುವ ಚಟ್ನಿಗೆ ಸಾಸವೆ-ಜೀರಿಗೆ-ಕರೀಬೇವಿನ ಒಗ್ಗರಣೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದ್ರೆ ರುಚಿಯಾದ ಚಟ್ನಿ ಸವಿಯಲು ಸಿದ್ಧವಾಗುತ್ತದೆ. ಅಂತಿಮವಾಗಿ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೇರಿಸಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

