- Home
- Life
- Food
- ತನ್ನನ್ನೇ ತಾನು ತಿಂದ್ರೆ ಈ ತರಕಾರಿಗಳ ರಿಯಾಕ್ಷನ್ ಹೇಗಿರತ್ತೆ ಗೊತ್ತಾ? ಫನ್ನಿ ಕ್ಯೂಟ್ ವಿಡಿಯೋ ವೈರಲ್
ತನ್ನನ್ನೇ ತಾನು ತಿಂದ್ರೆ ಈ ತರಕಾರಿಗಳ ರಿಯಾಕ್ಷನ್ ಹೇಗಿರತ್ತೆ ಗೊತ್ತಾ? ಫನ್ನಿ ಕ್ಯೂಟ್ ವಿಡಿಯೋ ವೈರಲ್
ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಹಾಗಲಕಾಯಿ, ಈರುಳ್ಳಿ, ಕ್ಯಾರೆಟ್‌ನಂತಹ ತರಕಾರಿಗಳು ತಮ್ಮದೇ ತುಂಡನ್ನು ತಿಂದಾಗ ವಿಚಿತ್ರವಾಗಿ ಪ್ರತಿಕ್ರಿಯಿಸುತ್ತವೆ. ಕೆಲವು ಖುಷಿಪಟ್ಟರೆ, ಇನ್ನು ಕೆಲವು ಅಳುವ ದೃಶ್ಯಗಳು ನಗಿಸುತ್ತಿವೆ.

ತರಕಾರಿಗಳ ರಿಯಾಕ್ಷನ್
ಹೇಳಿ ಕೇಳಿ ಇದು ಕೃತಕ ಬುದ್ಧಿಮತ್ತೆ (AI) ಯುಗ. ಏನು ಬೇಕಾದರೂ ಮಾಡಲು ಸಾಧ್ಯ. ಇದೀಗ ಕೆಲವು ತರಕಾರಿಗಳ ಬಾಯಿಗೆ ಅವುಗಳದ್ದೇ ತುಂಡೊದ್ದನ್ನು ಹಾಕಲಾಗಿದೆ. ಅವುಗಳ ರಿಯಾಕ್ಷನ್ ಹೇಗಿದೆ ಎನ್ನುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತರಕಾರಿಗಳ ರಿಯಾಕ್ಷನ್ ಜೊತೆ ವಿಡಿಯೋ ಕೂಡ ಇಲ್ಲಿ ಶೇರ್ ಮಾಡಲಾಗಿದೆ.
ಅಯ್ಯಯ್ಯೋ ಕಹಿ ಕಹಿ
ಹಾಗಲಕಾಯಿ ಕಹಿ ಆದ್ರೂ ಆರೋಗ್ಯಕ್ಕೆ ಸಿಹಿ ನಿಜ. ಆದರೆ ಹಾಗೆಂದು ಹಾಗಲಕಾಯಿಯನ್ನು ಹಾಗೆಯೇ ತಿನ್ನಲು ಆಗಲ್ಲವಲ್ಲ. ಇದೀಗ ಹಾಗಲಕಾಯಿಯು ತನ್ನದೇ ಒಂದು ಪೀಸನ್ನು ತಿಂದಾಗ ಹೇಗಿದೆ ನೋಡಿ ರಿಯಾಕ್ಷನ್.
ಬಾಯಲ್ಲಿ ನೀರೂರುವ ಗೋಬಿ
ಹೂಕೋಸಿನಿಂದ ಮಾಡುವ ಮಂಚೂರು (ಗೋಬಿ ಮಂಚೂರಿ) ನೆನೆಸಿಕೊಂಡವರೆ ಬಹುತೇಕ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಎಳೆಯದಾಗಿರುವ ಹೂಕೋಸನ್ನು ಹಾಗೆಯೇ ತಿನ್ನುವುದಕ್ಕೆ ರುಚಿಯೂ ಆಗಿದೆ ಎನ್ನುವುದು ಅದನ್ನು ತಿಂದ ಹೂಕೋಸಿನ ರಿಯಾಕ್ಷನ್ ನೋಡಿ
ಕಣ್ಣಲ್ಲಿ ನೀರು
ಈರುಳ್ಳಿ ಬಹುತೇಕ ಎಲ್ಲಾ ಅಡುಗೆಗೆ ಬಳಸಲು ಬೇಕಾದರೂ, ಇದನ್ನು ಹೆಚ್ಚುವಾಗ ಆಗಲೀ ಹಾಗೆಯೇ ತಿಂದರೆ ಕಣ್ಣೀರು ಬರುತ್ತದೆ. ಅದೇ ರೀತಿ ಪಾಪ ಈ ಈರುಳ್ಳಿಗೂ ಆಗಿದೆ ನೋಡಿ.
ಕ್ಯಾರೆಟ್ ಮುಖ ಅರಳಿತು
ಕ್ಯಾರೆಟ್ ಹಸಿಯಾಗಿಯೇ ತಿನ್ನಲು ಬಲು ಸೊಗಸು. ಅದಕ್ಕಾಗಿಯೇ ತನ್ನನ್ನು ತಾನು ತಿಂದಾಗ ಕ್ಯಾರೆಟ್ ಮುಖ ಅರಳಿದೆ.
ಟೇಸ್ಟಿ ಟೊಮೆಟೊ
ಟೊಮೆಟೊ ಕೂಡ ತನ್ನನ್ನು ತಾನು ತಿಂದುಕೊಂಡು ಟೇಸ್ಟಿ ಟೇಸ್ಟಿ ಎಂದಿದೆ.
ಅಯ್ಯಬ್ಬಾ ಶುಂಠಿ
ಶುಂಠಿ ತಿಂದರೆ ಅಬ್ಬಬ್ಬಾ ನೆನೆಸಿಕೊಂಡ್ರೆ ಮೈ ಝುಂ ಎನ್ನುತ್ತದೆ ಅಲ್ವಾ? ಪಾಪ ಶುಂಠಿಗೂ ತನ್ನ ಪೀಸ್ ತಾನು ತಿಂದು ಹೇಗಾಗಿದೆ ನೋಡಿ
ಸ್ವೀಟ್ ಕಾರ್ನ್ ಖುಷಿ
ಸ್ವೀಟ್ ಕಾರ್ನ್ ತನ್ನ ಪೀಸನ್ನು ತಿಂದು ಸ್ವೀಟ್ ಆಗಿ ಖುಷಿಯಿಂದ ನಲಿದಾಡಿದೆ.
ಕ್ಯಾಪ್ಸಿಕಂ ಖುಷ್
ಕ್ಯಾಪ್ಸಿಕಂ ಅಷ್ಟು ಖಾರ ಇರುವುದಿಲ್ಲ. ಸ್ಯಾಂಡ್ವಿಚ್ನಲ್ಲಿಯೂ ಇದನ್ನು ಹಸಿಹಸಿಯಾಗಿಯೇ ತಿನ್ನುವುದಲ್ವಾ? ಅದಕ್ಕೇ ಕ್ಯಾಪ್ಸಿಕಂ ಬಲು ಖುಷಿಯಿಂದ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

