ನಿಮ್ಮ ಸೂಪರ್ ಇಡ್ಲಿಯ ರುಚಿ ದುಪ್ಪಟ್ಟು ಮಾಡುವ ಒಂದು ಮೆಥಡ್; ಇದಕ್ಕೆ ಚಟ್ನಿ, ಸಾಂಬಾರ್ ಬೇಡ!
Super And Tasty Idli Making Hacks: ರುಚಿಕರ ಮತ್ತು ಮೃದುವಾದ ಇಡ್ಲಿ ಮಾಡಲು ಇನ್ನು ಮುಂದೆ ಚಟ್ನಿ ಅಥವಾ ಸಾಂಬಾರ್ ತಯಾರಿಸುವ ಅಗತ್ಯವಿಲ್ಲ. ಇಡ್ಲಿ ರುಚಿ ದ್ವಿಗುಣಗೊಳ್ಳುತ್ತದೆ ಮತ್ತು ಗೃಹಿಣಿಯರ ಸಮಯವೂ ಉಳಿತಾಯವಾಗುತ್ತದೆ.

ಇಡ್ಲಿ
ಇಡ್ಲಿ ಮಾಡೋದು ಸುಲಭದ ಕೆಲಸ ಅಂತು ಅಲ್ಲವೇ ಅಲ್ಲ. ಟೇಸ್ಟಿ ಆಂಡ್ ಸಾಫ್ಟ್ ಇಡ್ಲಿ ಮಾಡಬೇಕಾದ್ರೆ ಸುಮಾರು 10 ಗಂಟೆಗಳ ಮುಂಚೆಯೇ ಕೆಲಸ ಆರಂಭಿಸಬೇಕಾಗುತ್ತದೆ. ಇಡ್ಲಿ ಹಿಟ್ಟು ಹುದುಗು ಬರಬೇಕಾದ್ರೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನೆನೆಸಬೇಕಾಗುತ್ತದೆ. ಇಷ್ಟೆಲ್ಲಾ ಆದ್ಮೇಲೆ ಇಡ್ಲಿಗೆ ಕಾಂಬಿನೇಷನ್‌ಗೆ ಚಟ್ನಿ ಅಥವಾ ಸಾಂಬಾರ್ ಮಾಡಬೇಕಾಗುತ್ತದೆ.
ಹೆಚ್ಚುವರಿ ಮೆಥಡ್
ಇಡ್ಲಿ ಮಾಡುವಾಗ ಸಣ್ಣದಾದ ಹೆಚ್ಚುವರಿ ಮೆಥಡ್ ಬಳಸಿದ್ರೆ ಹೆಚ್ಚುವರಿಯಾಗಿ ಚಟ್ನಿ ಅಥವಾ ಸಾಂಬಾರ್ ಮಾಡುವ ಪ್ರಮೇಯವೇ ಇರಲ್ಲ. ಇದರಿಂದ ಗೃಹಿಣಿಯರಿಗೆ ಸಮಯ ಉಳಿತಾಯವಾಗುತ್ತದೆ. ಇದರಿಂದ ಇಡ್ಲಿಯ ರುಚಿ ದುಪ್ಪಟ್ಟು ಹೆಚ್ಚಾಗುತ್ತದೆ.
ಈ ರೀತಿಯ ಇಡ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವರ್ಗದವರೆಗೂ ಇಷ್ಟವಾಗುತ್ತದೆ. ವಿಶೇಷ ಸಂದರ್ಭಗಳಲ್ಲಿಯೂ ಈ ರೀತಿಯ ಇಡ್ಲಿ ತಯಾರಿಸಿದ್ರೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ.
ಸೂಪರ್ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಸಾಸವೆ ಮತ್ತು ಜೀರಿಗೆ: 1 ಟೀ ಸ್ಪೂನ್, ಅಡುಗೆ ಎಣ್ಣೆ: 3-4 ಟೀ ಸ್ಪೂನ್, ಉದ್ದಿನಬೇಳೆ: 2 ಟೀ ಸ್ಪೂನ್, ಕಡಲೆಬೇಳೆ: 1 ಟೀ ಸ್ಪೂನ್, ಇಂಗು: 1/2 ಟೀ ಚಮಚ
ಅಚ್ಚರಿಯಾದ್ರೂ ಸತ್ಯವಂತೆ, ಉಳಿದ ಇಡ್ಲಿ, ದೋಸೆ ಹಿಟ್ಟನ್ನು ಹೀಗೂ ಬಳಕೆ ಮಾಡ್ತಾರಂತೆ!#IdliBatter#DosaBatter#LeftoverBatter#KitchenHackshttps://t.co/S8nZ51Ush2
— Asianet Suvarna News (@AsianetNewsSN) June 24, 2025
ಒಗ್ಗರಣೆ ಹಾಕಿಕೊಳ್ಳಿ
ಒಲೆ ಆನ್ ಮಾಡಿಕೊಂಡು ಅಡುಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸವೆ ಹಾಕಿಕೊಳ್ಳಿ ಸಿಡಿಸಿಕೊಳ್ಳಬೇಕು. ನಂತರ ಉದ್ದಿನಬೇಳೆ, ಕಡಲೆಬೇಳೆ, ಜೀರಿಗೆ ಮತ್ತು ಇಂಗು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ಈ ಒಗ್ಗರಣೆಯನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: ಇಡ್ಲಿ ಕುಕ್ಕರ್ ಇಲ್ವಾ? ಚಿಂತೆ ಬೇಡ, ಹೀಗೂ ಮಾಡಬಹುದು ಮಲ್ಲಿಗೆಯಂಥ ಇಡ್ಲಿ
ಚಟ್ನಿ ಅಥವಾ ಸಾಂಬಾರ್ ಬೇಕಿಲ್ಲ
ಒಗ್ಗರಣೆ ಹಾಕಿದ ಹಿಟ್ಟಿನಿಂದ ಇಡ್ಲಿ ಮಾಡಿದ್ರೆ ಚಟ್ನಿ ಅಥವಾ ಸಾಂಬಾರ್ ಬೇಕಾಗುವುದಿಲ್ಲ. ಮನೆಯಲ್ಲಿರುವ ಚಟ್ನಿ ಪುಡಿಯಿಂದ ಇಡ್ಲಿಯನ್ನು ತಿಂದು ಮುಗಿಸಬಹುದು. (ಬೇಕಿದ್ರೆ ಒಗ್ಗರಣೆಗೆ ಕರೀಬೇವು, ಕೋತಂಬರಿ ಸೊಪ್ಪು ಸೇರಿಸಿಕೊಳ್ಳಬಹುದು)
ಇದನ್ನೂ ಓದಿ: ವಾರ ಕಳೆದ್ರೂ ಇಡ್ಲಿ ಹಿಟ್ಟು ಹುಳಿ ಬಾರದಂತೆ 'ಸಾಂಪ್ರದಾಯಿಕ ಶೈಲಿ'ಯಲ್ಲಿ ಸ್ಟೋರ್ ಮಾಡುವ ಟಿಪ್ಸ್
ಇದನ್ನೂ ಓದಿ: ಇಡ್ಲಿ-ದೋಸೆ ತಿನ್ನುವಾಗ 90% ಜನರು ಈ ತಪ್ಪು ಮಾಡ್ತಾರೆ, ನೀವಿಗಲೇ ನಿಲ್ಲಿಸದಿದ್ದರೆ ಹೊಟ್ಟೆ ಗ್ಯಾಸ್ ಚೇಂಬರ್ ಆಗುತ್ತೆ!