ವಾರ ಕಳೆದ್ರೂ ಇಡ್ಲಿ ಹಿಟ್ಟು ಹುಳಿ ಬಾರದಂತೆ 'ಸಾಂಪ್ರದಾಯಿಕ ಶೈಲಿ'ಯಲ್ಲಿ ಸ್ಟೋರ್ ಮಾಡುವ ಟಿಪ್ಸ್
Fermentation Prevention: ಮನೆಯಲ್ಲಿ ತಯಾರಿಸಿದ ಇಡ್ಲಿ ಹಿಟ್ಟು ಹುಳಿಯದೆ ಏಳು ದಿನಗಳವರೆಗೆ ಇಡೋಕೆ ಸಿಂಪಲ್ ಟ್ರಿಕ್ ಇಲ್ಲಿದೆ. ಫ್ರಿಡ್ಜ್ ಇಲ್ಲದ ಸಮಯದಲ್ಲಿ ಹಿರಿಯರು ಇಡ್ಲಿ ಹಿಟ್ಟು ಸ್ಟೋರ್ ಮಾಡುತ್ತಿದ್ದ ವಿಧಾನ ಇಲ್ಲಿದೆ ನೋಡಿ

ದಕ್ಷಿಣ ಭಾರತದಲ್ಲಿ ಇಡ್ಲಿ, ದೋಸೆನೇ ಬಹುತೇಕ ಮನೆಗಳಲ್ಲಿ ಮಾಡುವ ತಿಂಡಿಯಾಗಿದೆ . ದಿನಾ ಹಿಟ್ಟು ಅರೆಯೋಕೆ ಟೈಮ್ ಇರಲ್ಲ ಅಂತ ಕೆಲವರು ಹಿಟ್ಟು ಅರೆದು ಫ್ರಿಡ್ಜ್‌ನಲ್ಲಿ ಇಡ್ತಾರೆ. ಏಳು ದಿನ ಯೂಸ್ ಮಾಡೋರೂ ಇದ್ದಾರೆ. ಆದ್ರೆ ಒಂದೆರಡು ದಿನದಲ್ಲೇ ಹಿಟ್ಟು ಹುಳಿಬಂದು ಇಡ್ಲಿ ತಿನ್ನುವಾಗ ಮುಖ ಸುಕ್ಕುಗಟ್ಟುತ್ತೆ. ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಹಿಟ್ಟು ಬೇಗ ಹುಳಿಯಲ್ಲ.
ಏನು ಮಾಡಬೇಕು?
ಇಡ್ಲಿ, ದೋಸೆಗೆ ಹಿಟ್ಟು ರುಬ್ಬುವಾಗ ಅಕ್ಕಿ ನೆನೆಸೋದ್ರಲ್ಲಿ ಕೇರ್‌ಫುಲ್ ಆಗಿರಬೇಕು. ಕನಿಷ್ಠ 3 ರಿಂದ 4 ಗಂಟೆ ಅಕ್ಕಿ ನೆನೆಸಿದ್ರೆ ಸಾಕು. ಅದಕ್ಕಿಂತ ಜಾಸ್ತಿ ನೆನೆಸಿದ್ರೆ ಹಿಟ್ಟು ಬೇಗ ಹುಳಿಯುತ್ತೆ. ಅಕ್ಕಿಗಿಂತ ಕಡಿಮೆ ಟೈಮ್ ಉದ್ದಿನಬೇಳೆ ನೆನೆಸಿದ್ರೆ ಸಾಕು. ಒಂದು ಗಂಟೆ ನೆನೆಸಿದ್ರೂ ಓಕೆ. ಹಿಟ್ಟು ರುಬ್ಬುವಾಗ ಜಾಸ್ತಿ ಟೈಮ್ ತೆಗೆದುಕೊಳ್ಳಬೇಡಿ.
ಗ್ರೈಂಡರ್‌ನಲ್ಲಿ ಹಿಟ್ಟು ರುಬ್ಬುವ ವೇಳೆ ಅಕ್ಕಿ ಹಾಕುವಾಗ ಐಸ್ ವಾಟರ್ ಹಾಕಿ. ಉದ್ದಿನಬೇಳೆ ಹಾಕಿ ಅಕ್ಕಿ ಅರೆದ್ರೆ ಹಿಟ್ಟನ್ನ ಕೈಯಲ್ಲಿ ತಳ್ಳಬೇಡಿ. ಚಮಚದಿಂದ ತಳ್ಳಿ. ಇಡ್ಲಿ ಮಾಡುವಾಗಲೇ ಉಪ್ಪು ಹಾಕಿಕೊಳ್ಳಬೇಕು. ಅಕ್ಕಿ ರುಬ್ಬಿಕೊಳ್ಳುವಾಗ ಯಾವುದೇ ಕಾರಣಕ್ಕೂ ಉಪ್ಪು ಸೇರಿಸಬೇಡಿ.
ಟಿಪ್ಸ್
ಪಾತ್ರೆಯ ತಳದಲ್ಲಿ ಬಾಳೆ ಎಲೆ ಇರಿಸಬೇಕು. ನಂತರ ಎಲ್ಲಾ ಹಿಟ್ಟು ಹಾಕಿದ್ಮೇಲೆಯೂ ಮೇಲೆ ಬಾಳೆ ಎಲೆಯಿಂದ ಮುಚ್ಚಬೇಕು. ನಂತರ ಕಾಟನ್ ಬಟ್ಟೆಯಿಂದ ಮುಚ್ಚಿಡಿ. ಹೀಗೆ ಮಾಡೋದರಿಂದ ಇಡ್ಲಿ ಹಿಟ್ಟು ಬೇಗ ಹಾಳಾಗಲ್ಲ.
ಬಾಳೆ ಎಲೆಗೆ ಬದಲು 2 ವೀಳ್ಯದೆಲೆ ಯೂಸ್ ಮಾಡಬಹುದು. ವೀಳ್ಯದೆಲೆ ಒಳಭಾಗ ಹಿಟ್ಟಿಗೆ ತಾಗಲಿ. ಈ ಟಿಪ್ಸ್ ಯೂಸ್ ಮಾಡಿ ಹುಳಿಯದ ಹಿಟ್ಟಲ್ಲಿ ಇಡ್ಲಿ ಮಾಡಿ. ಮನೆಯಲ್ಲಿ ಖುಷಿಪಡ್ತಾರೆ!