ಬೆಂಗಳೂರಿನಲ್ಲಿ 24*7 ಇಡ್ಲಿ ಎಟಿಎಂ ಲಭ್ಯ. ಈ ಯಂತ್ರದ ಮೂಲಕ ಗ್ರಾಹಕರು ಯಾವುದೇ ಸಮಯದಲ್ಲಿ ಬಿಸಿಬಿಸಿ ಇಡ್ಲಿ ಮತ್ತು ಉದ್ದಿನ ವಡೆಗಳನ್ನು ಪಡೆಯಬಹುದು.
ಬೆಂಗಳೂರು: ಇಡ್ಲಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಯಾವುದೇ ತಿಂಡಿ ಇಷ್ಟವಾಗದಿದ್ರೆ ಕೊನೆಗ ಜನರು ಇಡ್ಲಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಗೆ ಬಗೆಯ ಫುಡ್ ತಿಂದು ಬೇಸರವಾದ ಮನಸ್ಸು ಸಹ ಇಡ್ಲಿಯನ್ನು ಬಯಸುತ್ತದೆ. ಬೆಂಗಳೂರಿನಲ್ಲಿ ಅದೆಷ್ಟೋ ಬ್ಯಾಚುಲರ್‌ಗಳು ಬೆಳಗ್ಗೆ ಒಂದು ಪ್ಲೇಟ್ ಇಡ್ಲಿ ತಿಂದು ಉಪಹಾರ ಮುಗಿಸುತ್ತಾರೆ. ಕೆಲವರಂತು ಇಡ್ಲಿಯನ್ನು ಹುಡುಕಿಕೊಂಡು ಹೋಗುತ್ತಾರೆ. ಆದ್ರೆ ರಾತ್ರಿ 10 ಗಂಟೆ ನಂತರ ಇಡ್ಲಿ ಸಿಗೋದು ಸ್ವಲ್ಪ ದುರ್ಬಲ. ಈ ಸಮಸ್ಯೆಗೆ ಪರಿಹಾರವೊಂದು ಸಿಕ್ಕಿದೆ. ಬೆಂಗಳೂರಿನಲ್ಲಿ ಇಡ್ಲಿ ಮಷೀನ್ ಬಂದಿದ್ದು, ಇದು 24*7 ಕಾರ್ಯ ನಿರ್ವಹಿಸುತ್ತದೆ. ಇದನ್ನು ಇಡ್ಲಿ ಎಟಿಎಂ ಅಂತ ಕರೆಯಲಾಗುತ್ತದೆ. ಎಟಿಎಂನಿಂದ ಹಣ ಡ್ರಾ ಮಾಡಿದಂತೆಯೇ ನಿಮಗೆ ರುಚಿಯಾದ ಇಡ್ಲಿ ಸಿಗುತ್ತದೆ.
ಇಡ್ಲಿ ಪ್ರಿಯರಿಗಾಗಿಯೇ ಈ ಮಷೀನ್ ಬಂದಿದ್ದು, ಈ ಯಂತ್ರದಲ್ಲಿ ನಿಮಗೆ ಗರಿಗರಿಯಾದ ಉದ್ದಿನ ವಡೆ ಸಹ ಸಿಗುತ್ತದೆ. ನಿಮಗೆ 24*7 ರುಚಿಯಾದ ಇಡ್ಲಿ ನಿಮ್ಮದಾಗುತ್ತದೆ. ಈ ಮಷೀನ್‌ನಲ್ಲಿ ನಿಮಗೆ ಇಡ್ಲಿ ಜೊತೆ ಬೇರೆ ತಿಂಡಿಗಳು ಲಭ್ಯವಿದೆ. ಮಹಿಳೆಯೊಬ್ಬರು ಈ ಮಷೀನ್‌ನಿಂದ ಇಡ್ಲಿ ಹೇಗೆ ಪಡೆಯಬೇಕು ಮತ್ತು ಹಣ ಪಾವತಿಸುವ ವಿಧಾನ ಹೇಗೆ ಎಂದು ತಿಳಿಸಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಎಲ್ಲಿದೆ ಈ ಮಷೀನ್ ಇಡ್ಲಿ?
ವೈರಲ್ ವಿಡಿಯೋ ಪ್ರಕಾರ, ಈ ಇಡ್ಲಿ ಎಟಿಎಂ ಬೆಂಗಳೂರಿನ ಬಿಳೇಕಹಳ್ಳಿಯ ವಿಜಯ ಕಾಂಪ್ಲೆಕ್ಸ್‌ನಲ್ಲಿ (Freshot Experience Center Bangalore Vijaya complex, Bilekahalli) ಅಳವಡಿಸಲಾಗಿದೆ. ಫ್ರಿಶಾಟ್ ಯಂತ್ರದಿಂದ ನಿಮಗೆ ಬಿಸಿಯಾದ ಇಡ್ಲಿ ಮತ್ತು ಚಟ್ನಿ ಸಿಗುತ್ತದೆ.
ಇಡ್ಲಿ ಆರ್ಡರ್ ಮಾಡೋದು ಹೇಗೆ?
ಇಡ್ಲಿ ಮಷೀನ್ ಬಳಿಯಲ್ಲಿರೋ ಕ್ಯೂಕೋರ್ ಕೋಡ್ ಸ್ಕ್ಯಾನ್ ಮಾಡಬೇಕು. ನಂತರ ನಿಮ್ಮ ಮೊಬೈಲ್‌ನಲ್ಲಿ ಮೆನು ಲಿಸ್ಟ್ ಓಪನ್ ಆಗುತ್ತದೆ. ನಿಮಗೆ ಬೇಕಾದ ತಿಂಡಿಯನ್ನು ಆಯ್ಕೆ ಮಾಡಿ, ಪೇಮೆಂಟ್ ಮಾಡಬೇಕು. ನಂತರ ಬಿಲ್ ಮಷೀನ್‌ಗೆ ಸ್ಕ್ಯಾನ್ ಮಾಡಿದ್ರೆ ಜಸ್ಟ್ 55 ಸೆಕೆಂಡ್‌ನಲ್ಲಿ ಇಡ್ಲಿ ರೆಡಿಯಾಗಿ ಬರುತ್ತದೆ. ಪ್ಯಾಕಿಂಗ್ ಸಹ ಇಕೋ ಫ್ರೆಂಡ್ಲಿಯಾಗಿದೆ. ಸ್ಕ್ರೀನ್ ಮೇಲೆ ನಿಮ್ಮ ಫುಡ್ ಸಿದ್ಧವಾಗುವ ಮಾಹಿತಿಯನ್ನು ನೀಡಲಾಗಿರುತ್ತದೆ.
ಇದನ್ನೂ ಓದಿ:ಅಚ್ಚರಿಯಾದ್ರೂ ಸತ್ಯವಂತೆ, ಉಳಿದ ಇಡ್ಲಿ, ದೋಸೆ ಹಿಟ್ಟನ್ನು ಹೀಗೂ ಬಳಕೆ ಮಾಡ್ತಾರಂತೆ!
ನಂದಿನಿ ಇಡ್ಲಿ-ದೋಸೆ ಹಿಟ್ಟು
ಇಂದು ರಾಜ್ಯದ ಎಲ್ಲಾ ಭಾಗಗಳಲ್ಲಿ ನಂದಿನಿ ಬ್ರ್ಯಾಂಡ್‌ನ ಇಡ್ಲಿ-ದೋಸೆ ಹಿಟ್ಟು ಸಿಗುತ್ತದೆ. ನಂದಿನಿ ಬ್ರ್ಯಾಂಡ್‌ನ ಇಡ್ಲಿ-ದೋಸೆ ಹಿಟ್ಟಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಅಧಿಕವಾಗಿದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬ್ಲಿಂಕಿಟ್, ಬಿಗ್‌ಬಾಸ್ಕೆಟ್ ಮತ್ತು ಜೆಪ್ಟೊ ಸೇರಿ ಅನೇಕ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ನಂದಿನಿ ದೋಸೆ-ಇಡ್ಲಿ ಹಿಟ್ಟು ಸಿಗುತ್ತದೆ. ಆರಂಭದಲ್ಲಿ ಮಾರುಕಟ್ಟೆಯಲ್ಲಿ ನಂದಿನಿ ಇಡ್ಲಿ - ದೋಸೆ ಹಿಟ್ಟಿಗೆ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಅಳೆಯಲು ಕೆಎಂಎಫ್ ತನ್ನ ನಂದಿನಿ ಮಳಿಗೆಗಳಿಗೆ ಹಿಟ್ಟಿನ ಮಾರಾಟವನ್ನು ಸೀಮಿತಗೊಳಿಸಿತ್ತು. ಆದರೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಇದೀಗ ಎಲ್ಲಾ ಪ್ರಮುಖ ಸೂಪರ್‌ಮಾರ್ಕೆಟ್‌ಗಳು ಮತ್ತು ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೂ ಮಾರಾಟವನ್ನು ವಿಸ್ತರಿಸಲಾಗಿದೆ. ಇಂದು ಸಣ್ಣ ಕಿರಾಣಿ ಅಂಗಡಿಗಳಲ್ಲಿಯೂ ನಂದಿನಿ ಇಡ್ಲಿ-ದೋಸೆ ಹಿಟ್ಟು ಸಿಗುತ್ತದೆ.
ಇದನ್ನೂ ಓದಿ: ಕರುಳು, ಮೆದಳು ಆರೋಗ್ಯಕ್ಕೆ ಟಾಪ್ 10 ಆಹಾರ, ಹಾರ್ವಡ್ ವೈದ್ಯನ ಪಟ್ಟಿಯಲ್ಲಿ ಇಡ್ಲಿ-ಮೊಸರು
