ಹೊಸ ಕಾವಲಿಗೆ ದೋಸೆ ಅಂಟಿಕೊಳ್ಳುತ್ತಿದೆಯೇ? ಗರಿಗರಿ ದೋಸೆ ತಯಾರಿಸಲು ಈ ಟಿಪ್ಸ್ ಬಳಸಿ
ಹೊಸ ಕಾವಲಿ ಖರೀದಿಸಿದರೂ ದೋಸೆ ಸರಿಯಾಗಿ ಬರುವುದಿಲ್ಲ ಎಂಬ ಚಿಂತೆಯೇ? ಈರುಳ್ಳಿ ಬಳಕೆ, ಮಧ್ಯಮ ಉರಿಯಲ್ಲಿ ಬೇಯಿಸುವುದು ಮತ್ತು ಹಿಟ್ಟನ್ನು ಕೊಠಡಿ ತಾಪಮಾನದಲ್ಲಿಡುವುದು ಸೇರಿದಂತೆ ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಹೊಸ ಕಾವಲಿಯಲ್ಲೂ ಗರಿಗರಿಯಾದ ದೋಸೆ ತಯಾರಿಸಬಹುದು.

ಹೊಸ ಕಾವಲಿಯಲ್ಲಿ ದೋಸೆ ಮಾಡುವ ಟಿಪ್ಸ್
ಕೆಲವೊಮ್ಮೆ ದೋಸೆ ಸರಿಯಾಗಿ ಬರುತ್ತಿಲ್ಲ ಎಂದು ಗೃಹಿಣಿಯರು ಹೊಸ ಕಾವಲಿ ಖರೀದಿ ಮಾಡುತ್ತಾರೆ. ಆದ್ರೆ ಹೊಸ ಕಾವಲಿ ತಂದ್ರೂ ದೋಸೆ ಮಾತ್ರ ಸರಿಯಾಗಿ ಬರಲ್ಲ ಎಂದು ಗೃಹಿಣಿಯರು ಗೋಳಾಡುತ್ತಿರುತ್ತಾರೆ. ಕೆಲವು ಸರಳ ವಿಧಾನಗಳನ್ನು ಅನುಸರಿಸಿದ್ರೆ ಹೊಸ ಕಾವಲಿ ಮೇಲೆ ಗರಿಗರಿಯಾದ ಟೇಸ್ಟಿ ದೋಸೆಗಳನ್ನು ಮಾಡಬಹುದು.
ಮಧ್ಯಮ ಉರಿಯುಲ್ಲಿ ದೋಸೆ ಮಾಡಿಕೊಳ್ಳಿ
ಹೊಸ ಪ್ಯಾನ್/ಕಾವಲಿ ಬಳಸುವಾಗ ದೋಸೆಹಿಟ್ಟನ್ನು ಚೆನ್ನಾಗಿ ಕಲಿಸಿಕೊಳ್ಳಿ. ಕಾವಲಿ ಮೇಲೆ ಹಿಟ್ಟನ್ನು ತೆಳುವಾಗಿ ಹರಡಿಕೊಳ್ಳಿ. ದೋಸೆ ತೆಳುವಾಗಿದ್ರೆ ಕಡಿಮೆ ಸಮಯದಲ್ಲಿ ಚೆನ್ನಾಗಿ ಬೇಯುತ್ತದೆ. ದೋಸೆ ಗರಿಗರಿಯಾದಷ್ಟು ರುಚಿ ಹೆಚ್ಚಾಗುತ್ತದೆ. ದೋಸೆ ಮಾಡುವಾಗ ಒಲೆ ಮಧ್ಯಮ ಉರಿಯಲ್ಲಿರಬೇಕು. ಹಿಟ್ಟು ಕಾವಲಿ ಮೇಲೆ ಹಾಕುತ್ತಿದ್ದಂತೆ ಒಲೆಯನ್ನು ಹೈಫ್ಲೇಮ್‌ನಲ್ಲಿಟ್ಟುಕೊಳ್ಳಬೇಕು. ನಂತರ ಮಧ್ಯಮ ಉರಿಗೆ ಬದಲಿಸಿಕೊಳ್ಳಬೇಕು.
ಎಣ್ಣೆ ಸವರಲು ಬಳಸಿ ಈರುಳ್ಳಿ ಅಥವಾ ಆಲೂಗಡ್ಡೆ
ಈರುಳ್ಳಿಗೆ ಎಣ್ಣೆ ಹಚ್ಚಿ ಕಾವಲಿ ಮೇಲೆ ಸವರಿಕೊಳ್ಳಬೇಕು. ಇನ್ನು ಕೆಲವರು ಈರುಳ್ಳಿ ಬದಲಾಗಿ ಆಲೂಗಡ್ಡೆಯನ್ನು ಬಳಸುತ್ತಾರೆ. ಎಣ್ಣೆ ಸವರಿದ ಬಳಿಕವೇ ಕಾವಲಿ ಮೇಲೆ ದೋಸೆಹಿಟ್ಟು ಹಾಕಿಕೊಳ್ಳಬೇಕು. ಪ್ರತಿ ದೋಸೆ ನಂತ್ರವೂ ಕಾವಲಿಯನ್ನು ನೀರು ಹಾಕಿ ಸ್ವಚ್ಛ ಮಾಡಿಕೊಳ್ಳಬೇಕು. ಹಾಗೆ ಎಣ್ಣೆಯಲ್ಲಿ ಮಿತಿಯಾಗ ಬಳಸಿ. ದೋಸೆ ಮಾಡುವಾಗ ಕಾವಲಿಯನ್ನು ಪದೇ ಪದೇ ಕ್ಲೀನ್ ಮಾಡಿಕೊಳ್ಳಿ.
ಚೆನ್ನಾಗಿ ಬೇಯಿಸಿಕೊಳ್ಳಿ, ಅವಸರ ಬೇಡ
ಕೆಲವರಿಗೆ ದೋಸೆಯನ್ನು ಕಾವಲಿಯಿಂದ ಬೇಗ ತೆಗೆಯುವ ಆತುರದಲ್ಲಿರುತ್ತಾರೆ. ದೋಸೆಯ ಅಂಚು ಚಿನ್ನದ ಕಂದು ಬಣ್ಣಕ್ಕೆ ತಿರುಗಿದಾಗ ತೆಗೆಯಬೇಕು. ದೋಸೆಯನ್ನು ಎರಡೂ ಕಡೆ ಬೇಯಿಸಿಕೊಂಡ್ರೆ ಒಂದು ರೀತಿ ರುಚಿ ಮತ್ತು ಒನ್ ಸೈಡ್ ರೋಸ್ಟ್ ಮಾಡಿದ್ರೆ ಮತ್ತೊಂದು ಬಗೆಯ ರುಚಿ ಸಿಗುತ್ತದೆ. ಈ ಎರಡರಲ್ಲಿ ಆಯ್ಕೆ ನಿಮ್ಮದು.
ಹಿಟ್ಟು ಕೊಠಡಿ ತಾಪಮಾನದಲ್ಲಿರಲಿ
ರೆಫ್ರಿಜರೇಟರ್‌ನಿಂದ ತೆಗೆದ ನಂತರವೇ ಬ್ಯಾಟರ್‌ನಿಂದ ದೋಸೆ ಮಾಡಬಾರದು. ದೋಸೆ ಮಾಡುವ ಕನಿಷ್ಠ 1 ಗಂಟೆ ಮುಂಚೆಯೇ ರೆಫ್ರಿಜರೇಟರ್‌ನಿಂದ ತೆಗೆದಿಟ್ಟುಕೊಳ್ಳಿ. ದೋಸೆಹಿಟ್ಟು ಕೊಠಡಿಯ ತಾಪಮಾನಕ್ಕೆ ಬಂದಾಗ ದೋಸೆ ಮಾಡಿಕೊಳ್ಳಬೇಕು. ಇದರಿಂದ ದೋಸೆ ಸರಿಯಾಗಿ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
