Secret to crispy dosa batter: ಪರ್ಫೆಕ್ಟ್ ದೋಸೆಗೆ ಕೇವಲ ಅಕ್ಕಿ-ಬೇಳೆ ಮಾತ್ರ ಸಾಲದು! ದೋಸೆ ಹಿಟ್ಟು ಸೂಪರ್ ಆಗಿ ಉಬ್ಬಿ ಬರಲು ಮತ್ತು ಸಖತ್ ಕ್ರಿಸ್ಪಿಯಾಗಲು ಹಿಟ್ಟು ರುಬ್ಬುವಾಗ ಇನ್ನು 5 ಸೀಕ್ರೆಟ್ ಪದಾರ್ಥಗಳನ್ನು ಸೇರಿಸಬೇಕಾಗುತ್ತದೆ. ಆ ಪದಾರ್ಥಗಳು ಯಾವುವು ಮತ್ತು ಹಿಟ್ಟಿನ ಸರಿಯಾದ ಅಳತೆ ಇಲ್ಲಿದೆ ನೋಡಿ.

ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಉಪಹಾರವಾದ ದೋಸೆ, ಇಂದು ಇಡೀ ಭಾರತದ ಅತ್ಯಂತ ಜನಪ್ರಿಯ ಬ್ರೇಕ್‌ಫಾಸ್ಟ್‌ಗಳಲ್ಲಿ ಒಂದಾಗಿದೆ. ಇದರ ಕ್ರಿಸ್ಪಿ ರುಚಿ ಎಂಥದ್ದು ಎಂದರೆ, ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತೆ. ಹಿಟ್ಟು ಮೊದಲೇ ರೆಡಿಯಾಗಿದ್ದರೆ ಬೆಳಗ್ಗಿನ ಉಪಹಾರಕ್ಕೆ ಇದನ್ನು ಸುಲಭವಾಗಿ ಮಾಡಬಹುದು. ಇದು ಟೇಸ್ಟಿ ಆಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಮನೆಯಲ್ಲಿ ದೋಸೆ ಮಾಡುವಾಗ ಹಲವರಿಗೆ ಅದರ ಹಿಟ್ಟಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಿರುತ್ತವೆ. ಉದಾಹರಣೆಗೆ- ದೋಸೆ ಕ್ರಿಸ್ಪಿಯಾಗಿ ಬರಲು ಹಿಟ್ಟಿಗೆ ಏನೇನು ಹಾಕಬೇಕು? ಇದನ್ನು ಪರ್ಫೆಕ್ಟ್ ಆಗಿ ಫರ್ಮೆಂಟ್ (ಹುದುಗು ಭರಿಸುವುದು) ಮಾಡುವುದು ಹೇಗೆ? ಇತ್ಯಾದಿ. ಒಂದು ವೇಳೆ ನೀವು ದೋಸೆ ಹಿಟ್ಟನ್ನು ಪರ್ಫೆಕ್ಟ್ ಆಗಿ ಮಾಡುವುದನ್ನು ಕಲಿತರೆ, ನಿಮ್ಮ ಮನೆಯ ದೋಸೆಯೂ ಹೋಟೆಲ್ ಸ್ಟೈಲ್‌ನಲ್ಲಿ ಕ್ರಿಸ್ಪಿಯಾಗಿ ಕರುಂ ಕರುಂ ಅಂತ ಬರುತ್ತದೆ.

ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದರಲ್ಲಿ ಬಿಂದೇಶ್ವರಿ ಸಿಂಗ್ ಅವರು ಪರ್ಫೆಕ್ಟ್ ದೋಸೆ ಹಿಟ್ಟಿಗೆ ಸಂಬಂಧಿಸಿದ ಕೆಲವು ಟಿಪ್ಸ್‌ಗಳನ್ನು ಹಂಚಿಕೊಂಡಿದ್ದಾರೆ, ಬನ್ನಿ ಅದೇನೆಂದು ತಿಳಿಯೋಣ.

ದೋಸೆ ಹಿಟ್ಟಿಗೆ ಅಕ್ಕಿ ಮತ್ತು ಬೇಳೆಯ ಅಳತೆ ಎಷ್ಟಿರಬೇಕು?

ಪರ್ಫೆಕ್ಟ್ ದೋಸೆ ಹಿಟ್ಟು ತಯಾರಿಸಲು 3:1 ಅನುಪಾತವನ್ನು ಫಾಲೋ ಮಾಡಿ. ಅಂದರೆ, ನೀವು 3 ಕಪ್ ಅಕ್ಕಿ ತೆಗೆದುಕೊಳ್ಳುತ್ತಿದ್ದರೆ, 1 ಕಪ್ ಉದ್ದಿನಬೇಳೆ ಹಾಕಿ. ಸಾಂಪ್ರದಾಯಿಕವಾಗಿ ದೋಸೆ ಮಾಡಲು ಇಡ್ಲಿ ಅಕ್ಕಿಯನ್ನು ಬಳಸಲಾಗುತ್ತದೆ, ಆದರೆ ನೀವು ಯಾವುದೇ ಅಕ್ಕಿಯನ್ನು ಬಳಸಬಹುದು. ಇನ್ನು ಬೇಳೆಯ ವಿಷಯಕ್ಕೆ ಬಂದರೆ, ಸಿಪ್ಪೆ ಇಲ್ಲದ ಬಿಳಿ ಉದ್ದಿನಬೇಳೆಯನ್ನು ಬಳಸಲಾಗುತ್ತದೆ.

ದೋಸೆ ಹಿಟ್ಟಿಗೆ ಇನ್ನು ಏನೇನು ಪದಾರ್ಥ ಸೇರಿಸಬೇಕು?

ಅಕ್ಕಿ ಮತ್ತು ಉದ್ದಿನಬೇಳೆಯ ಹೊರತಾಗಿ ದೋಸೆ ಹಿಟ್ಟಿಗೆ ಇನ್ನು ಕೆಲವು ಪದಾರ್ಥಗಳನ್ನು ಸೇರಿಸಲಾಗುತ್ತದೆ. ನೀವು 3 ಕಪ್ ಅಕ್ಕಿ ಮತ್ತು 1 ಕಪ್ ಉದ್ದಿನಬೇಳೆ ತೆಗೆದುಕೊಳ್ಳುತ್ತಿದ್ದರೆ, ಆ ಲೆಕ್ಕಾಚಾರದ ಪ್ರಕಾರ ಅದಕ್ಕೆ 1/4 ಕಪ್ ಕಡಲೆಬೇಳೆ, ತೊಗರಿಬೇಳೆ (2 ಚಮಚ) ಮತ್ತು ಒಂದು ಚಮಚ ಮೆಂತ್ಯ ಕಾಳುಗಳನ್ನು ಸೇರಿಸಬಹುದು. ನೀವು ಎಷ್ಟು ಪ್ರಮಾಣದಲ್ಲಿ ಅಕ್ಕಿ-ಬೇಳೆ ತೆಗೆದುಕೊಳ್ಳುತ್ತೀರೋ, ಉಳಿದ ಪದಾರ್ಥಗಳ ಪ್ರಮಾಣವನ್ನೂ ಅದೇ ರೀತಿ ಅಡ್ಜಸ್ಟ್ ಮಾಡಿಕೊಳ್ಳಿ. ಈಗ ಈ ಎಲ್ಲಾ ಪದಾರ್ಥಗಳನ್ನು ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆದು, ನಂತರ 5-6 ಗಂಟೆಗಳ ಕಾಲ ನೆನೆಯಲು ಇಡಿ. ಅವಲಕ್ಕಿ (ಪೋಹಾ) ಸೇರಿಸುವುದರಿಂದ ದೋಸೆ ಲೈಟ್ ಮತ್ತು ಫ್ಲಫಿ ಆಗುತ್ತದೆ. ಅಕ್ಕಿ-ಬೇಳೆಯನ್ನು 5-6 ಗಂಟೆಗಳ ಕಾಲ ನೆನೆಸಿದ ನಂತರ, ಹಿಟ್ಟನ್ನು ರುಬ್ಬುವ ಮುನ್ನ ನೀವು ಒಂದೂವರೆ ಕಪ್ ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ ಸ್ವಲ್ಪ ಸಮಯ ಇಡಬೇಕು. 5 ರಿಂದ 10 ನಿಮಿಷಗಳಲ್ಲಿ ಇದು ಚೆನ್ನಾಗಿ ಉಬ್ಬಿಕೊಳ್ಳುತ್ತದೆ. ಅವಲಕ್ಕಿ ಹಾಕುವುದರಿಂದ ದೋಸೆ ತುಂಬಾ ಲೈಟ್ ಮತ್ತು ಸಾಫ್ಟ್ ಆಗಿ ಬರುತ್ತದೆ.

ದೋಸೆ ಹಿಟ್ಟನ್ನು ಈ ರೀತಿ ರುಬ್ಬಿಕೊಳ್ಳಿ

ಈಗ ನೆನೆಸಿಟ್ಟ ಅಕ್ಕಿ-ಬೇಳೆ ಮತ್ತು ಅವಲಕ್ಕಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ. ಹಿಟ್ಟು ರುಬ್ಬಲು ನೀವು ಅಕ್ಕಿ-ಬೇಳೆ ನೆನೆಸಿಟ್ಟಿದ್ದ ಅದೇ ನೀರನ್ನೇ ಬಳಸಿ. ಇಷ್ಟು ಹಿಟ್ಟಿಗೆ ಸುಮಾರು 1.25 ರಿಂದ 1.75 ಕಪ್ ವರೆಗೆ ನೀರು ಬೇಕಾಗುತ್ತದೆ. ಆದರೆ ನೆನಪಿಡಿ, ನೀರನ್ನು ಒಂದೇ ಬಾರಿಗೆ ಹಾಕಬೇಡಿ, ಬದಲಿಗೆ ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ರುಬ್ಬಿಕೊಳ್ಳಿ. ಹಿಟ್ಟಿನ ಹದ (Consistency) ಮೀಡಿಯಂ ಆಗಿರಬೇಕು; ಅಂದರೆ ತುಂಬಾ ಗಟ್ಟಿಯಾಗಿಯೂ ಇರಬಾರದು, ತುಂಬಾ ತೆಳ್ಳಗೂ ಇರಬಾರದು. ಜೊತೆಗೆ ಅದರ ಟೆಕ್ಸ್ಚರ್ ಸ್ವಲ್ಪ ತರಿತರಿಯಾಗಿರಬೇಕು (ರವೆಯಂತೆ). ಇದನ್ನು ನೀವು ಪಾತ್ರೆಗೆ ಸುರಿಯುವಾಗ ರಿಬ್ಬನ್ ಬಿದ್ದಂತೆ ಮಡಿಕೆಗಳಾಗಿ ಬೀಳಬೇಕು.

ಫಾಸ್ಟ್ ಫರ್ಮೆಂಟೇಶನ್‌ಗಾಗಿ ಈ 1 ಸೀಕ್ರೆಟ್ ಪದಾರ್ಥ ಮಿಕ್ಸ್ ಮಾಡಿ

ಈಗ ರುಬ್ಬಿದ ಹಿಟ್ಟನ್ನು ಒಂದು ದೊಡ್ಡ ಬೌಲ್‌ಗೆ ತೆಗೆದುಕೊಳ್ಳಿ. ಇದಕ್ಕೆ ಒಂದು ಚಿಟಿಕೆ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಸೇರಿಸುವುದರಿಂದ ಫರ್ಮೆಂಟೇಶನ್ (ಹಿಟ್ಟು ಹುದುಗುವ) ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ. ಹಿಟ್ಟನ್ನು 2-3 ನಿಮಿಷಗಳ ಕಾಲ ಕೈಯಿಂದಲೇ ಚೆನ್ನಾಗಿ ಕೈಯಾಡಿಸಿ (ಫೆಂಟಿ). ನಂತರ ಹಿಟ್ಟನ್ನು ಮುಚ್ಚಿ ಯಾವುದೇ ಬೆಚ್ಚಗಿನ ಜಾಗದಲ್ಲಿ 10-12 ಗಂಟೆಗಳ ಕಾಲ ಇಡಿ. ಇದು ಕಂಪ್ಲೀಟ್ ಆಗಿ ಪರ್ಫೆಕ್ಟ್ ಆಗಿ ಫರ್ಮೆಂಟ್ ಆಗುತ್ತದೆ.

ಫ್ರಿಡ್ಜ್‌ನಲ್ಲಿ ಈ ಹಿಟ್ಟನ್ನು ಎಷ್ಟು ದಿನ ಸ್ಟೋರ್ ಮಾಡಬಹುದು?

ನಿಮಗೆ ಎಷ್ಟು ಹಿಟ್ಟು ಬೇಕೋ ಅಷ್ಟನ್ನು ಮಾತ್ರ ಬೇರೆ ಪಾತ್ರೆಗೆ ತೆಗೆದುಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆ ಸವಿಯಬಹುದು. ಬಾಕಿ ಉಳಿದ ಹಿಟ್ಟಿಗೆ ಉಪ್ಪು ಸೇರಿಸಬೇಡಿ. ಉಪ್ಪು ಹಾಕದ ಈ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಆರಾಮವಾಗಿ 5 ರಿಂದ 7 ದಿನಗಳವರೆಗೆ ಸ್ಟೋರ್ ಮಾಡಿ ಇಡಬಹುದು.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ 

View post on Instagram