ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಭಾರತದ ಬಿಯರ್ ಬ್ರ್ಯಾಂಡ್, ಸವಾಲಿನ ಜೊತೆ ಕೋಟಿ ಕೋಟಿ ಆದಾಯ
ಭಾರತದ ಪ್ರಮುಖ ಬಿಯರ್ ಬ್ರ್ಯಾಂಡ್‌ಗಳು ಈಗ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ. ಬದಲಾಗುತ್ತಿರುವ ಗ್ರಾಹಕರ ಅಭಿರುಚಿ ಮತ್ತು ಅನಿವಾಸಿ ಭಾರತೀಯರ ಬೆಂಬಲ ಇದಕ್ಕೆ ದೊಡ್ಡ ಶಕ್ತಿಯಾಗಿದೆ. ಇದರೊಂದಿಗೆ ಭಾರತದ ಬ್ರ್ಯಾಂಡ್ ಇನ್ನು ಪ್ರಮುಖ ದೇಶಗಳಲ್ಲಿ ಲಭ್ಯವಾಗಲಿದೆ.

ಗ್ಲೋಬಲ್ ಮಾರುಕಟ್ಟೆಗೆ ಭಾರತದ ಬಿಯರ್
ಭಾರತದ ಬಿಯರ್ ಬ್ರ್ಯಾಂಡ್‌ಗಳು ಈಗ ಗ್ಲೋಬಲ್ ಮಾರುಕಟ್ಟೆಗೆ ಕಾಲಿಡುತ್ತಿದೆ. ನಮ್ಮ ದೇಶದ ಕಿಂಗ್‌ಫಿಶರ್, ಬಿರಾ 91, ಬೀಯಂಗ್, ಗಾಡ್‌ಫಾದರ್, ಮತ್ತು ಮೆಡೂಸಾದಂತಹ ಪ್ರಸಿದ್ಧ ಬ್ರ್ಯಾಂಡ್‌ಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧತೆ ನಡೆಸುತ್ತಿವೆ. ಸದ್ಯ ಜಾಗತಿಕ ಬಿಯರ್ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆ. ಇದರ ಬೆನ್ನಲ್ಲೇ ಭಾರತದ ಬಿಯರ್ ಬ್ರ್ಯಾಂಡ್ ಗ್ಲೋಬಲ್ ಮಾರ್ಕೆಟ್‌ಗೆ ಲಗ್ಗೆ ಇಡುತ್ತಿದೆ.

ಬಿಯರ್ ಮಾರುಕಟ್ಟೆ ಬಂಡವಾಳ
2024ರಲ್ಲಿ ಸುಮಾರು 839.31 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದ ಈ ಮಾರುಕಟ್ಟೆ, 2030ರ ವೇಳೆಗೆ 1,248.3 ಬಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ. ಅಂದರೆ, ವಾರ್ಷಿಕವಾಗಿ ಈ ಕ್ಷೇತ್ರ 6.8% ರಷ್ಟು ಬೆಳೆಯಲಿದೆ. ಇಷ್ಟು ದೊಡ್ಡ ಮಾರುಕಟ್ಟೆಯ ಮೇಲೆ ಭಾರತದ ಕಂಪನಿಗಳು ಕಣ್ಣಿಟ್ಟಿವೆ. ಇಷ್ಟೇ ಅಲ್ಲ ಸಾವಿರಾರು ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ.
ವಿದೇಶಿ ಮಾರುಕಟ್ಟೆಯತ್ತ ಚಿತ್ತ ಯಾಕೆ?
ಈ ಹೊಸ ನಡೆಯ ಹಿಂದೆ ಇರುವುದು ಭಾರತೀಯ ಗ್ರಾಹಕರ ಟೇಸ್ಟ್‌ನಲ್ಲಿ ಆದ ಬದಲಾವಣೆ. ಮೊದಲೆಲ್ಲಾ 'ಸ್ಟ್ರಾಂಗ್' ಬಿಯರ್ ಇಷ್ಟಪಡುತ್ತಿದ್ದ ಜನ, ಈಗ ಪ್ರೀಮಿಯಂ, ಸ್ಮೂತ್ ಮತ್ತು ಕ್ರಾಫ್ಟ್ ಬಿಯರ್‌ಗಳತ್ತ ವಾಲುತ್ತಿದ್ದಾರೆ. ಗುಣಮಟ್ಟದ ಬಿಯರ್ ತಯಾರಿಸುವುದರಲ್ಲಿ ಮತ್ತು ಬ್ರ್ಯಾಂಡಿಂಗ್ ಮಾಡುವುದರಲ್ಲಿ ಭಾರತೀಯ ಕಂಪನಿಗಳು ಪರಿಣಿತಿ ಸಾಧಿಸಿವೆ. ಇದೇ ಆತ್ಮವಿಶ್ವಾಸದಿಂದ ವಿದೇಶಿ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿವೆ.
ಗಲ್ಫ್ ದೇಶಗಳೇ ಮೊದಲ ಟಾರ್ಗೆಟ್:
ವಿದೇಶಿ ಮಾರುಕಟ್ಟೆಗೆ ಕಾಲಿಡುವಾಗ ಭಾರತೀಯ ಬ್ರ್ಯಾಂಡ್‌ಗಳು ಮೊದಲು ಆಯ್ಕೆ ಮಾಡಿಕೊಳ್ಳುತ್ತಿರುವುದು ಗಲ್ಫ್ ರಾಷ್ಟ್ರಗಳನ್ನು. ಅಲ್ಲಿರುವ ಅನಿವಾಸಿ ಭಾರತೀಯರೊಂದಿಗಿನ ಭಾವನಾತ್ಮಕ ಸಂಬಂಧ ಮತ್ತು ಬಹುತೇಕ ಒಂದೇ ರೀತಿಯ ರುಚಿ ಇದಕ್ಕೆ ಮುಖ್ಯ ಕಾರಣ
ಅನಿವಾಸಿ ಭಾರತೀಯರ ಬೆಂಬಲ:
ಪ್ರಪಂಚದಾದ್ಯಂತ ಇರುವ ಅನಿವಾಸಿ ಭಾರತೀಯರು ಈ ಬ್ರ್ಯಾಂಡ್‌ಗಳ ಮೊದಲ ರಾಯಭಾರಿಗಳಾಗುತ್ತಿದ್ದಾರೆ. ಇದು ಹೊಸ ಮಾರುಕಟ್ಟೆಗಳಲ್ಲಿ ಬೇಗನೆ ನೆಲೆಯೂರಲು ಕಂಪನಿಗಳಿಗೆ ಸಹಾಯ ಮಾಡುತ್ತಿದೆ. ಇದರ ಜೊತೆಗೆ ವ್ಯಾಪಾರ, ಜಾಲ ವಿಸ್ತರಿಸುತ್ತಾ ವಿಶ್ವದಲ್ಲೆಡೆ ಪ್ರಬಲ ಬ್ರ್ಯಾಂಡ್ ಆಗಿ ಮಾಡಲು ಸಜ್ಜಾಗಿದೆ.
ಸವಾಲುಗಳ ನಡುವೆ ಕೋಟಿ ಕೋಟಿ ಆದಾಯ
ವಿದೇಶಗಳಿಗೆ ಮದ್ಯ ರಫ್ತು ಮಾಡುವುದು ಅಷ್ಟು ಸುಲಭದ ಮಾತಲ್ಲ. ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಕಾನೂನು ಮತ್ತು ನಿಯಮಗಳಿವೆ. ಲೈಸೆನ್ಸ್, ಲೇಬಲಿಂಗ್, ಆಮದು ಸುಂಕ ಮತ್ತು ಜಾಹೀರಾತುಗಳ ಮೇಲಿನ ನಿರ್ಬಂಧಗಳು ದೊಡ್ಡ ಸವಾಲುಗಳನ್ನು ಒಡ್ಡುತ್ತವೆ. ಇದನ್ನು ನಿಭಾಯಿಸಲು ಭಾರತೀಯ ಬ್ರ್ಯಾಂಡ್‌ಗಳು ಅಲ್ಲಿನ ಸ್ಥಳೀಯ ಕಂಪನಿಗಳೊಂದಿಗೆ ಕೈಜೋಡಿಸಬೇಕಾಗುತ್ತದೆ. ಬಿಯರ್‌ನ ಗುಣಮಟ್ಟ ಕೆಡದಂತೆ ವಿದೇಶಿ ಮಾರುಕಟ್ಟೆಗಳಿಗೆ ತಲುಪಿಸಲು ಒಂದು ಬಲಿಷ್ಠ ಸರಬರಾಜು ವ್ಯವಸ್ಥೆ (ಸಪ್ಲೈ ಚೈನ್) ಕೂಡ ಅತ್ಯಗತ್ಯ.
ಸವಾಲುಗಳ ನಡುವೆ ಕೋಟಿ ಕೋಟಿ ಆದಾಯ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

