Asianet Suvarna News Asianet Suvarna News

ಪಾಕಿಸ್ತಾನ ಹಿಂದೂ ದೇಗುಲದಲ್ಲಿ ನವರಾತ್ರಿ ಪೂಜೆ, ಕುಟುಂಬ ಸಮೇತ ಪಾಲ್ಗೊಂಡ ಕ್ರಿಕೆಟಿಗ!

ಪಾಕಿಸ್ತಾನದ ಹಿಂದೂ ದೇಗುಲದಲ್ಲಿ ನವರಾತ್ರಿ ಆಚರಣೆ ನಡೆಯುತ್ತಿದೆ. ಐತಿಹಾಸಿಕ ದೇಗುಲದಲ್ಲಿ ನವರಾತ್ರಿ ಪೂಜೆ, ಗರ್ಬಾ ನೃತ್ಯದಲ್ಲೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಶ ಕನೇರಿಯಾ ಪಾಲ್ಗೊಂಡಿದ್ದಾರೆ. ಎಲ್ಲರ ಒಳಿತಿಗಾಗಿ ಜಗದಾಂಬೆಯನ್ನು ಪ್ರಾರ್ಥಿಸಿದ್ದೇನೆ ಎಂದಿದ್ದಾರೆ.

Pakistan cricketer danish kaneria Participates Navratri Festival Pooja in Temple ckm
Author
First Published Oct 22, 2023, 6:48 PM IST

ಸಿಂಧ್(ಅ.22) ಪಾಕಿಸ್ತಾನ ವಿಭಜನೆಗೂ ಮೊದಲು ಹಲವು ಐತಿಹಾಸಿಕ ಹಿಂದೂ ದೇಗುಲಗಳು ಪಾಕ್ ನೆಲದಲ್ಲಿತ್ತು. ಆದರೆ ಪಾಕಿಸ್ತಾನ ರೂಪಗೊಂಡ ಬಳಿಕ ಪಾಕಿಸ್ತಾನದಲ್ಲಿರುವ ಬಹುತೇಕ ಹಿಂದೂ ದೇಗುಲಗಳು ಧ್ವಂಸಗೊಂಡಿದೆ. ಇದೀಗ ಅಳಿದು ಉಳಿದ ದೇವಸ್ಥಾನದಲ್ಲಿ ನವರಾತ್ರಿ ಹಬ್ಬ ಅದ್ಧೂರಿಯಾಗಿ ಆಚರಿಸಲಾಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಕುಟುಂಬ ಸಮೇತರಾಗಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇಷ್ಟೇ ಅಲ್ಲ ಗರ್ಬಾ ನೃತ್ಯದಲ್ಲೂ ಪಾಲ್ಗೊಂಡು ಜಗದಾಂಬೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

9 ದಿನಗಳ ನವರಾತ್ರಿ ಹಬ್ಬ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಪಾಕಿಸ್ತಾನದ ಐತಿಹಾಸಿಕ ಹಿಂದೂ ದೇಗುಲದಲ್ಲಿ ನವರಾತ್ರಿ ಪೂಜೆ ನಡೆಯುತ್ತಿದೆ. ಮಾ ದುರ್ಗೆಯ ಆರಾಧನೆ ಹಾಗೂ ಪೂಜಾ ಕಾರ್ಯಗಳು ನಡೆಯುತ್ತಿದೆ. ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಧಾನೀಶ್ ಕನೇರಿಯಾ ಕುಟುಂಬ ಸಮೇತ ನವರಾತ್ರಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪಾಕ್ ಕ್ರಿಕೆಟಿಗ, ಟ್ರೋಲ್ ಮಾಡಿದವರಿಗೆ ಕೊಟ್ಟ ಉತ್ತರ ವೈರಲ್!

ದೇವಸ್ಥಾನದಲ್ಲಿ ದುರ್ಗಾ ದೇವಿಯ ಪೂಜೆಯಲ್ಲಿ ಆರತಿ ಬೆಳಗಿದ ಧಾನೀಶ್ ಕನೇರಿಯಾ, ಭಜನೆ ಮೂಲಕ ದೇವರ ಸ್ಥುತಿ ಮಾಡಿದ್ದಾರೆ. ಇದಕ್ಕೂ ಮೊದಲು ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಪೂಜೆ ಹಾಗೂ ಗರ್ಬಾ ನೃತ್ಯದ ವಿಡಿಯೋಗಳನ್ನು ದಾನೀಶ್ ಕನೇರಿಯಾ ಹಂಚಿಕೊಂಡಿದ್ದಾರೆ.

 

ಪಾಕಿಸ್ತಾನ ಪರ ಆಡಿದ ಹಿಂದೂ ಕ್ರಿಕೆಟಿಗ ದಾನೀಶ್ ಕನೇರಿಯಾ ಭಾರತ ಕುರಿತು ವಿಶೇಷ ಒಲವು ಹಾಗೂ ಗೌರವ ಹೊಂದಿದ್ದಾರೆ. ಹಿಂದುತ್ವ, ಹಿಂದೂ ಆಚರಣೆಗಳ ಕುರಿತು ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿ ಭಾರತೀಯರಿಗೆ ಹತ್ತಿರವಾಗಿದ್ದಾರೆ. 

 

 

ಇದೀಗ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ ಧಾನೀಶ್ ಕನೇರಿಯಾ, ಎಲ್ಲರ ಒಳಿತಿಗಾಗಿ ಜಗದಾಂಬೆಯಲ್ಲಿ ಪಾರ್ಥಿಸಿದ್ದೇನೆ ಎಂದು ಧಾನೀಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ.

ಇಸ್ಲಾಂಗೆ ಮತಾಂತರಕ್ಕೆ ಅಫ್ರಿದಿ ಒತ್ತಡ: ಕನೇರಿಯಾ ಗಂಭೀರ ಆರೋಪ

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಸಹ ಆಟಗಾರರು ಹಿಂದು ಎಂಬ ಕಾರಣಕ್ಕಾಗಿ ತನ್ನ ಜೊತೆ ಕೀಳಾಗಿ ಮತ್ತು ತುಚ್ಛವಾಗಿ ವರ್ತಿಸುತ್ತಿದ್ದರು. ಆದಾಗ್ಯೂ, ಸಹ ತಾನು ಎಂದಿಗೂ ಹಿಂದು ಧರ್ಮದಿಂದ ಮತಾಂತರ ಹೊಂದಬೇಕೆಂದು ಎಂದಿಗೂ ಅಂದುಕೊಳ್ಳಲಿಲ್ಲ ಎಂದು ಇತ್ತೀಚೆಗೆ ಕನೇರಿಯಾ ಹೇಳಿದ್ದರು. ಭಾರತದ ಪರವಾಗಿ ಟ್ವೀಟ್ ಮೂಲಕ ಹೆಚ್ಚು ಸಕ್ರಿಯವಾಗಿರುವ ಕನೇರಿಯಾಗೆ ಪಾಕಿಸ್ತಾನದ ಹಿಂದೂ ಹುಲಿ ಎಂದು ಹಲವು ಕಮೆಂಟ್ ಮಾಡಿದ್ದಾರೆ.

Follow Us:
Download App:
  • android
  • ios