ಇಡ್ಲಿ, ದೋಸೆ ಹಿಟ್ಟು ಹುಳಿ ಬಂದ್ರೆ ಒಂದು ಚಮಚ ಇದನ್ನ ಸೇರಿಸಿ ತಿನ್ನಲು ಬಲು ರುಚಿಯಾಗಿರುತ್ತೆ
Sour Idli Batter Remedy: ಹಿಟ್ಟು ಹುಳಿ ಅನಿಸಿದರೆ ಚಿಂತಿಸಬೇಡಿ ಅಥವಾ ಅದನ್ನು ಎಸೆಯುವ ಅಗತ್ಯವಿಲ್ಲ. ಹುಳಿ ಹಿಟ್ಟಿನ ರುಚಿಯನ್ನು ಸುಲಭವಾಗಿ ಸರಿಪಡಿಸಲು ನಿಮಗೆ ಸಹಾಯ ಮಾಡುವ 5 ಅದ್ಭುತ ಟ್ರಿಕ್ಸ್ ಈಗ ತಿಳಿದುಕೊಳ್ಳೋಣ.

ಸೂಕ್ತವಾದ ಖಾದ್ಯ
ವರ್ಕಿಂಗ್ ವುಮೆನ್ (working women)ನಿಂದ ಹಿಡಿದು ಗೃಹಿಣಿಯರವರೆಗೆ ಎಲ್ಲರಿಗೂ ಬೆಳಗ್ಗೆ ಅಥವಾ ಸಂಜೆ ಇಡ್ಲಿ ಮತ್ತು ದೋಸೆ ಸೂಕ್ತವಾದ ಖಾದ್ಯ. ಅದಕ್ಕಾಗಿಯೇ ಅನೇಕರು ವಾರಾಂತ್ಯದಲ್ಲಿ ಇಡ್ಲಿ ಹಿಟ್ಟನ್ನು ರುಬ್ಬಿ 4 ಅಥವಾ 5 ದಿನಗಳವರೆಗೆ ಫ್ರಿಜ್‌ನಲ್ಲಿ ಸಂಗ್ರಹಿಸುತ್ತಾರೆ.
5 ಅದ್ಭುತ ಟ್ರಿಕ್ಸ್
ಆದರೆ ಕೆಲವೊಮ್ಮೆ ಹವಾಮಾನ ವೈಪರೀತ್ಯ ಅಥವಾ ಅಸಮರ್ಪಕ ಫ್ರಿಜ್ ಸೆಟ್ಟಿಂಗ್‌ಗಳಿಂದಾಗಿ ಹಿಟ್ಟು ಬೇಗನೆ ಹುಳಿಯಾಗುತ್ತದೆ. ಆದರೆ ಹಿಟ್ಟು ಹುಳಿ ಅನಿಸಿದರೆ ಚಿಂತಿಸಬೇಡಿ ಅಥವಾ ಅದನ್ನು ಎಸೆಯುವ ಅಗತ್ಯವಿಲ್ಲ. ಹುಳಿ ಹಿಟ್ಟಿನ ರುಚಿಯನ್ನು ಸುಲಭವಾಗಿ ಸರಿಪಡಿಸಲು ನಿಮಗೆ ಸಹಾಯ ಮಾಡುವ 5 ಅದ್ಭುತ ಟ್ರಿಕ್ಸ್ ಈಗ ತಿಳಿದುಕೊಳ್ಳೋಣ.
ಹುಳಿ ಸುಲಭವಾಗಿ ಕಡಿಮೆ ಮಾಡಲು
ಇಡ್ಲಿ ಅಥವಾ ದೋಸೆ ಹಿಟ್ಟು ಹುಳಿಯಾಗಿದ್ರೆ ರುಚಿ ಬದಲಾಗುತ್ತದೆ. ಅದಕ್ಕಾಗಿಯೇ ಹಿಟ್ಟು ವ್ಯರ್ಥ ಮಾಡದೆ ಮತ್ತು ರುಚಿ ಹಾಳಾಗದಂತೆ ಸರಿಪಡಿಸಲು ಈ ಸುಲಭ ವಿಧಾನಗಳನ್ನು ಅನುಸರಿಸಿ. ಹೌದು. ಇಡ್ಲಿ ಅಥವಾ ದೋಸೆ ಹಿಟ್ಟು ಹುಳಿಯಾಗಿದ್ರೆ ಹುಳಿಯನ್ನು ಸುಲಭವಾಗಿ ಕಡಿಮೆ ಮಾಡಲು ಈ ಕೆಳಗಿನ 5 ಟಿಪ್ಸ್ ಫಾಲೋ ಮಾಡ್ಬೋದು.
ರವೆ (ಬಾಂಬೆ ರವೆ) ಸೇರಿಸಿ
ಹುಳಿ ಹಿಟ್ಟಿಗೆ ರವೆ (ಬಾಂಬೆ ರವೆ) ಸೇರಿಸಿ. ಇದು ಹುಳಿ ರುಚಿಯನ್ನು ತೆಗೆದುಹಾಕುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ದೋಸೆ ಗರಿಗರಿಯಾಗುತ್ತದೆ ಮತ್ತು ತಿನ್ನಲು ರುಚಿಕರವಾಗಿರುತ್ತದೆ.
ಅಕ್ಕಿ ಹಿಟ್ಟಿನ ಬಳಕೆ
ಹುಳಿ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಬಹುದು. ಇದು ಹುಳಿ ರುಚಿಯನ್ನು ಹೊಂದಿರುವುದಿಲ್ಲ. ಬದಲಿಗೆ ಇನ್ನೂ ರುಚಿಕರವಾಗಿರುತ್ತದೆ. ಅಷ್ಟೇ ಅಲ್ಲ, ಹಿಟ್ಟನ್ನು ಸ್ವಲ್ಪ ಸಡಿಲಗೊಳಿಸಲು (ತೆಳ್ಳಗೆ) ಇದು ಉತ್ತಮವಾಗಿದೆ.
ಒಂದು ಚಿಟಿಕೆ ಸಕ್ಕರೆ ಅಥವಾ ಬೆಲ್ಲ
ಹಿಟ್ಟಿನ ಪ್ರಮಾಣವನ್ನು ಅವಲಂಬಿಸಿ ಹುದುಗಿಸಿದ ಹಿಟ್ಟಿಗೆ ಒಂದು ಚಿಟಿಕೆ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಬೇಕು. ಇದು ಹುಳಿ ರುಚಿ ಮತ್ತು ವಾಸನೆಯನ್ನು ಕಡಿಮೆ ಮಾಡುತ್ತದೆ. ಆದರೆ ಹಿಟ್ಟಿನ ರುಚಿಯನ್ನು ಹೆಚ್ಚು ಬದಲಾಯಿಸುವುದಿಲ್ಲ.
ಶುಂಠಿ - ಹಸಿರು ಮೆಣಸಿನಕಾಯಿ ಪೇಸ್ಟ್
ಹುಳಿಯಾಗಿರುವಂತೆ ತೋರುವ ಹಿಟ್ಟಿನಲ್ಲಿ ಹಿಟ್ಟಿನ ಪ್ರಮಾಣಕ್ಕೆ ಅನುಗುಣವಾಗಿ ಸ್ವಲ್ಪ ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಪೇಸ್ಟ್ ಮಾಡಿ, ಈ ಪೇಸ್ಟ್ ಅನ್ನು ಹಿಟ್ಟಿಗೆ ಸೇರಿಸಿ. ಹೀಗೆ ಮಾಡುವುದರಿಂದ ಹುಳಿ ಕಡಿಮೆಯಾಗಿ ಹಿಟ್ಟು ರುಚಿಕರವಾಗಿರುತ್ತದೆ.
ತಾಜಾ ಹಿಟ್ಟು ಮಿಶ್ರಣ ಮಾಡಿ
ಒಂದು ವೇಳೆ ಹೊಸದಾಗಿ ರುಬ್ಬಿದ ಹಿಟ್ಟು ಲಭ್ಯವಿದ್ದರೆ ತಾಜಾ ಹಿಟ್ಟಿಗೆ ಸ್ವಲ್ಪ ಹುಳಿ ಹಿಟ್ಟನ್ನು ಸೇರಿಸಿ. ಇದು ಹುಳಿಯನ್ನು ತೆಗೆದುಹಾಕಿ ಇಡ್ಲಿ ಮತ್ತು ದೋಸೆಯನ್ನು ಮೃದುವಾಗಿಸುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ಹುಳಿ ಹಿಟ್ಟನ್ನು ವ್ಯರ್ಥ ಮಾಡದೆ ನೀವು ರುಚಿಕರವಾದ ಉಪಹಾರವನ್ನು ತಯಾರಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

