- Home
- Life
- Health
- ಮೆಂತ್ಯ – ನೇರಳೆ ಮಧುಮೇಹಕ್ಕೆ ಸೂಪರ್ ಫುಡ್ ! ಏನು ಹೇಳ್ತಾರೆ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ವೈದ್ಯರು?
ಮೆಂತ್ಯ – ನೇರಳೆ ಮಧುಮೇಹಕ್ಕೆ ಸೂಪರ್ ಫುಡ್ ! ಏನು ಹೇಳ್ತಾರೆ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ವೈದ್ಯರು?
ಮಧುಮೇಹಿಗಳು ಅನ್ನ ಬಿಡಿ, ನೇರಳೆ ಹಣ್ಣಿನ ಜ್ಯೂಸ್ ಕುಡಿರಿ, ಸಕ್ಕರೆ ಬದ್ಲು ಬೆಲ್ಲ ತಿನ್ನಿ.. ಹೀಗೆ ಜನರು ನಾನಾ ರೀತಿ ಸಲಹೆ ನೀಡ್ತಾರೆ. ಆದ್ರೆ ಇದೆಲ್ಲ ಎಷ್ಟು ಸತ್ಯ? ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ವೈದ್ಯರು ನೀಡಿದ ಉತ್ತರ ಇಲ್ಲಿದೆ.

ಡಯಾಬಿಟಿಸ್ ಗೆ ಸೂಪರ್ ಫುಡ್
ಡಿಜಿಟಲ್ ಯುಗದಲ್ಲಿ ಜನ್ರು ಡಾಕ್ಟರ್ ನಂಬೋದಕ್ಕಿಂತ ಇಂಟರ್ ನೆಟ್ ಮೇಲೆ ಹೆಚ್ಚು ನಂಬಿಕೆ ಇಡ್ತಿದ್ದಾರೆ. ಅದೇನೇ ಆಗ್ಲಿ ಸರ್ಚ್ ಇಂಜಿನ್ ಆಕ್ಟಿವ್ ಆಗುತ್ತೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಸೂಪರ್ ಫುಡ್ ಟ್ರೆಂಡ್ ಹೆಚ್ಚಾಗಿದೆ. ಭಾರತದಲ್ಲಿ 10 ಕೋಟಿಗಿಂತ ಹೆಚ್ಚು ಮಧುಮೇಹಿಗಳಿದ್ದಾರೆ. ಮೆಂತ್ಯ, ಹಣ್ಣು ಹಾಗೂ ದಾಲ್ಚಿನಿ ಡಯಾಬಿಟಿಸ್ ಗೆ ಸೂಪರ್ ಫುಡ್ ಅಂತ ಸುದ್ದಿಯೊಂದು ಹರಡಿದೆ. ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಸಲಹೆಗಾರ ಆಹಾರ ತಜ್ಞೆ ಐಶ್ವರ್ಯಾ ಎ. ಕುಂಭಕೋಣಿ ಈ ಬಗ್ಗೆ ಮಾತನಾಡಿದ್ದಾರೆ. ಸೂಪರ್ ಫುಡ್ ಹಾಗೂ ಡಯಾಬಿಟಿಸ್ ಬಗ್ಗೆ ಇರುವ ಸತ್ಯ – ಮಿತ್ಯಗಳ ಬಗ್ಗೆ ತಿಳಿಸಿದ್ದಾರೆ.
ಸೂಪರ್ ಫುಡ್
ಐಶ್ವರ್ಯಾ ಎ. ಕುಂಭಕೋಣಿ ಪ್ರಕಾರ, ಯಾವುದೇ ಒಂದು ಆಹಾರ ಸೂಪರ್ ಫುಡ್ ಪಟ್ಟ ಪಡೆಯಲು ಸಾಧ್ಯವಿಲ್ಲ. ಮೆಂತ್ಯ, ನೇರಳೆ ಹಣ್ಣು ಹಾಗೂ ದಾಲ್ಚಿನಿ ಮಾತ್ರ ಮಧುಮೇಹ ನಿಯಂತ್ರಿಸುತ್ತೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಯಾವುದೇ ಒಂದು ಆಹಾರ ಮಧುಮೇಹವನ್ನು ನಿಯಂತ್ರಿಸೋದಿಲ್ಲ. ನಿಯಮಿತ ಔಷಧಿ, ದೈಹಿಕ ಚಟುವಟಿಕೆ ಮತ್ತು ನಿಯಮಿತ ಮೇಲ್ವಿಚಾರಣೆಯ ಗ್ಲೂಕೋಸ್ ನಿಯಂತ್ರಣಕ್ಕೆ ಅತ್ಯಗತ್ಯ ಅಂತಾರೆ ಅವ್ರು.
ಅತಿಯಾದ ಸಕ್ಕರೆ ಮಧುಮೇಹಕ್ಕೆ ಕಾರಣ
ಐಶ್ವರ್ಯಾ ಅವರು, ಡಯಾಬಿಟಿಸ್ ಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅತಿಯಾದ ಸಕ್ಕರೆ ತಿನ್ನೋದು ನೇರವಾಗಿ ಮಧುಮೇಹಕ್ಕೆ ಕಾರಣವಾಗುತ್ತದೆ ಎಂಬುದು. ಸಂಸ್ಕರಿಸಿದ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಕ್ಯಾಲೋರಿ ಹೆಚ್ಚಿರುವ ಆಹಾರ ಕೂಡ ತೂಕ ಹೆಚ್ಚಿಸುತ್ತದೆ. ಹೊಟ್ಟೆ ಕೊಬ್ಬು ಹೆಚ್ಚಾಗುತ್ತದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಐಶ್ವರ್ಯ. ಪ್ಯಾಕ್ ಮಾಡಿದ ಜ್ಯೂಸ್, ಮಿಲ್ಕ್ಶೇಕ್, ಎನರ್ಜಿ ಡ್ರಿಂಕ್ಸ್ ಮತ್ತು ಕಾರ್ಬೊನೇಟೆಡ್ ಪಾನೀಯಗಳಂತಹ ಸಕ್ಕರೆ ಹೊಂದಿರುವ ಡ್ರಿಂಕ್ಸನ್ನು ಹೆಚ್ಚಾಗಿ ಸೇವಿಸಿದಾಗ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಇರುತ್ತದೆ.
ಮಧುಮೇಹಿಗಳು ಹಣ್ಣು ತಿನ್ಬಾರದು
ಐಶ್ವರ್ಯ ಪ್ರಕಾರ, ಹಣ್ಣು ಆರೋಗ್ಯಕರ ಆಹಾರದ ಭಾಗ. ಹಾಗಂತ ಮಿತಿಮೀರಿ ತಿನ್ನಬಾರದು. ಸಮ ಪ್ರಮಾಣದಲ್ಲಿ ಹಣ್ಣಿನ ಸೇವನೆ ಅಗತ್ಯ. ಹಣ್ಣುಗಳು ಫ್ರಕ್ಟೋಸ್ ಎಂಬ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ. ಅವು ಫೈಬರ್, ವಿಟಮಿನ್ಗಳು ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಸಂಪೂರ್ಣ ಹಣ್ಣುಗಳಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.
ಬೆಲ್ಲ ಮತ್ತು ಜೇನುತುಪ್ಪ ಸಕ್ಕರೆಗೆ ಪರ್ಯಾಯ
ಐಶ್ವರ್ಯ ಪ್ರಕಾರ, ಬೆಲ್ಲ, ಜೇನುತುಪ್ಪ ಮತ್ತು ಸಂಸ್ಕರಿಸಿದ ಸಕ್ಕರೆ ಎಲ್ಲವೂ ಸರಳ ಕಾರ್ಬೋಹೈಡ್ರೇಟ್ಗಳಾಗಿವೆ. ಬೆಲ್ಲವು ಸೂಕ್ಷ್ಮ ಖನಿಜಗಳನ್ನು ಹೊಂದಿರಬಹುದು. ಜೇನುತುಪ್ಪ ಕೆಲವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರಬಹುದು. ಇವು ಸಾಮಾನ್ಯ ಸಕ್ಕರೆಯಂತೆಯೇ ಕಾರ್ಬೋಹೈಡ್ರೇಟ್ಗಳು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತವೆ. ಈ ಮೂರೂ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗಬಹುದು. ಮಧುಮೇಹಿಗಳು ಇವುಗಳ ಸೇವನೆಯನ್ನು ಮಿತಿಗೊಳಿಸಬೇಕು.
ಮಧುಮೇಹಿಗಳು ಅನ್ನ ತಿನ್ಬಾರದು
ಗೋಧಿ ಮತ್ತು ಇತರ ಧಾನ್ಯಗಳಂತೆ ಅಕ್ಕಿಯೂ ಕಾರ್ಬೋಹೈಡ್ರೇಟ್ ಭರಿತ ಆಹಾರ. ಬಿಳಿ ಅಕ್ಕಿ ಹೆಚ್ಚಿನ ಗ್ಲೈಸೆಮಿಕ್ ಹೊಂದಿದೆ. ಆದ್ರೆ ಅದನ್ನು ಸಂಪೂರ್ಣ ತ್ಯಜಿಸಬೇಕಾಗಿಲ್ಲ. ಒಂದೇ ಊಟದಲ್ಲಿ ಬಹು ಕಾರ್ಬೋಹೈಡ್ರೇಟ್ ತಿನ್ನಬಾರದು. ಇದ್ರ ಜೊತೆ ಮೊಸರು, ದ್ವಿದಳ ಧಾನ್ಯ ಮತ್ತು ಫೈಬರ್ ಭರಿತ ತರಕಾರಿ ತಿನ್ನಬೇಕು. ಮಧುಮೇಹಿಗಳು ಫೈಬರ್ ಮತ್ತು ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಬೇಕು. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಕರುಳಿನ ಆರೋಗ್ಯ, ಫೈಬರ್ ಸೇವನೆ ಮತ್ತು ಊಟದಲ್ಲಿ ಪ್ರೋಟೀನ್ ಸೇರಿಸುವುದು ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

