- Home
- Life
- Food
- ಒಗ್ಗರಣೆಗಷ್ಟೇ ಅಲ್ಲ ಕರಿಬೇವು; ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ನೀರು ಕುಡಿದರೆ ಏನಾಗುತ್ತೆ? ಇಲ್ಲಿದೆ ಮ್ಯಾಜಿಕ್ ರಿಸಲ್ಟ್!
ಒಗ್ಗರಣೆಗಷ್ಟೇ ಅಲ್ಲ ಕರಿಬೇವು; ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ನೀರು ಕುಡಿದರೆ ಏನಾಗುತ್ತೆ? ಇಲ್ಲಿದೆ ಮ್ಯಾಜಿಕ್ ರಿಸಲ್ಟ್!
ರುಚಿ ಮತ್ತು ಸುವಾಸನೆಗೆ ಮಾತ್ರವಲ್ಲ, ಕರಿಬೇವು ಸಾಕಷ್ಟು ಪೌಷ್ಟಿಕಾಂಶದ ಗುಣಗಳನ್ನು ಹೊಂದಿದೆ. ವಿಟಮಿನ್‌ಗಳು, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕರಿಬೇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಖಾಲಿ ಹೊಟ್ಟೆಯಲ್ಲಿ ಕರಿಬೇವು ಕುದಿಸಿದ ನೀರು ಕುಡಿದರೆ ಏನಾಗುತ್ತೆ?
ರುಚಿ ಮತ್ತು ಸುವಾಸನೆಗೆ ಮಾತ್ರವಲ್ಲ, ಕರಿಬೇವು ಸಾಕಷ್ಟು ಪೋಷಕಾಂಶಗಳನ್ನು ನೀಡುತ್ತದೆ. ವಿಟಮಿನ್, ಖನಿಜ, ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕರಿಬೇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ಕುದಿಸಿದ ನೀರು ಕುಡಿಯುವುದರಿಂದ ಹಲವು ರೋಗಗಳನ್ನು ದೂರವಿಡಬಹುದು.
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದು ಜೀರ್ಣಕ್ರಿಯೆ ಒಳ್ಳೆಯದು
ಕರಿಬೇವಿನ ನೀರು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಮಲಬದ್ಧತೆ, ಎದೆ ಉರಿ, ಗ್ಯಾಸ್ ಸಾಧ್ಯತೆ ಕಡಿಮೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತೆ
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಕರಿಬೇವಿನ ನೀರು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ಪ್ರಯೋಜನಕಾರಿ. ಮಧುಮೇಹಿಗಳು ಪ್ರತಿದಿನ ಕರಿಬೇವಿನ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯವಾಗುತ್ತದೆ.
ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಶೇಖರಣೆ ತಡೆಯುತ್ತದೆ.
ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಶೇಖರಣೆಯನ್ನು ತಡೆಯುತ್ತದೆ. ಹೃದಯದ ಕಾರ್ಯವನ್ನು ಬೆಂಬಲಿಸುತ್ತದೆ. ಕಾರ್ಬಜೋಲ್ ಆಲ್ಕಲಾಯ್ಡ್‌ಗಳು, ಆ್ಯಂಟಿಆಕ್ಸಿಡೆಂಟ್‌ಗಳಂತಹ ಸಂಯುಕ್ತಗಳು ಕೆಟ್ಟ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಕರಿಬೇವಿನ ನೀರು ದೇಹದ ತೂಕ ಇಳಿಸಲು ಸಹಾಯ
ಚಯಾಪಚಯವನ್ನು ಹೆಚ್ಚಿಸುವ ಮೂಲಕ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಕೊಬ್ಬು ಶೇಖರಣೆಯನ್ನು ತಡೆಯುತ್ತದೆ. ಕರಿಬೇವಿನ ನೀರು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕರಿಬೇವಿನ ಹೇರ್ ಪ್ಯಾಕ್‌ಗಳು ಕೂದಲನ್ನು ಬಲಪಡಿಸುತ್ತವೆ.
ಕರಿಬೇವಿನ ವಿಟಮಿನ್‌ಗಳು (ಎ, ಬಿ, ಸಿ, ಇ), ಖನಿಜಗಳು (ಕಬ್ಬಿಣ, ಕ್ಯಾಲ್ಸಿಯಂ) ನೆತ್ತಿಯ ರಕ್ತ ಪರಿಚಲನೆ ಸುಧಾರಿಸಿ, ಕೂದಲು ಉದುರುವಿಕೆ, ತಲೆಹೊಟ್ಟು ಕಡಿಮೆ ಮಾಡಿ ಕೂದಲನ್ನು ದಪ್ಪ, ಬಲ ಮತ್ತು ಹೊಳೆಯುವಂತೆ ಮಾಡುತ್ತದೆ.
ಮುಖದ ಕಪ್ಪು ಕಲೆ, ಒಣ ಚರ್ಮ, ಕಪ್ಪಾ ತಡೆಯಲು ಕರಿಬೇವಿನ ನೀರು ಸಹಕಾರಿ
ಕರಿಬೇವು ಚರ್ಮಕ್ಕೆ ಪ್ರಯೋಜನಕಾರಿ. ಮುಖದ ಕಪ್ಪು ಕಲೆ, ಒಣ ಚರ್ಮ, ಕಪ್ಪಾಗುವುದನ್ನು ತಡೆಯಲು ಕರಿಬೇವಿನ ನೀರು ಸಹಕಾರಿ. ಆ್ಯಂಟಿಆಕ್ಸಿಡೆಂಟ್‌ಗಳು ಪಿಗ್ಮೆಂಟೇಶನ್, ಕಪ್ಪು ಕಲೆಗಳನ್ನು ಕಡಿಮೆ ಮಾಡಿ ಚರ್ಮದ ಬಣ್ಣ ಮತ್ತು ವಿನ್ಯಾಸವನ್ನು ಸುಧಾರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

