- Home
- Life
- Food
- ಅಡುಗೆ ಮಾಡುವಾಗ ಬಿಸಿ ನೀರು ಬಳಸೋದ್ಯಾಕೆ? ತಲೆಮಾರುಗಳಿಂದ ನಡೆದು ಬಂದಿರುವ ಈ ಪದ್ಧತಿ ಹಿಂದಿನ ಸೀಕ್ರೆಟ್ ಇದೇ
ಅಡುಗೆ ಮಾಡುವಾಗ ಬಿಸಿ ನೀರು ಬಳಸೋದ್ಯಾಕೆ? ತಲೆಮಾರುಗಳಿಂದ ನಡೆದು ಬಂದಿರುವ ಈ ಪದ್ಧತಿ ಹಿಂದಿನ ಸೀಕ್ರೆಟ್ ಇದೇ
Why Use Hot Water in Cooking: ಹಿರಿಯರು ಅಡುಗೆ ಮಾಡುವಾಗ ಅನುಸರಿಸುತ್ತಿದ್ದ ಕೆಲವು ಸಣ್ಣ ಪುಟ್ಟ ರೂಢಿಗಳ ಹಿಂದೆ ದೊಡ್ಡ ವೈಜ್ಞಾನಿಕ ಕಾರಣಗಳಿರುತ್ತವೆ. ಅಂತಹದ್ದೇ ಒಂದು ಕುತೂಹಲಕಾರಿ ವಿಷಯವೆಂದರೆ ಅಡುಗೆಯ ಮಧ್ಯದಲ್ಲಿ ಬಿಸಿ ನೀರನ್ನು ಸೇರಿಸುವುದು. ಇದು ಕೇವಲ ಅಭ್ಯಾಸವಲ್ಲ, ಮತ್ತೇ?
ಇದರ ಹಿಂದಿರುವ ಕಾರಣವೇ ಬೇರೆ
ಇದರ ಹಿಂದಿರುವ ಕಾರಣವೇ ಬೇರೆ
ಅನೇಕ ಮನೆಗಳಲ್ಲಿ ಅಮ್ಮ ಅಥವಾ ಅಜ್ಜಿ ಅಡುಗೆ ಮಾಡುವಾಗ ಸಾರು ಅಥವಾ ಗ್ರೇವಿಗೆ ಹೆಚ್ಚಿನ ನೀರು ಬೇಕಾದಲ್ಲಿ, ಬದಿಗಿಟ್ಟ ಬಿಸಿ ನೀರನ್ನೇ ಬಳಸುವುದನ್ನು ನಾವು ಗಮನಿಸಿರುತ್ತೇವೆ. ಇದನ್ನು ಬಾಲ್ಯದಿಂದಲೂ ನೋಡುತ್ತಾ ಬಂದಿರುತ್ತೇವೆ. ಅದು ಕೇವಲ ಒಂದು ದಿನನಿತ್ಯದ ಕೆಲಸ ಎಂದುಕೊಂಡಿದ್ದೀರಾ? ಆದರೆ, ನಿಮ್ಮ ಊಹೆ ತಪ್ಪು. ಏಕೆಂದರೆ ಇದರ ಹಿಂದಿರುವ ಕಾರಣವೇ ಬೇರೆಯಿದ್ದು, ಇದನ್ನು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ.
ಪದಾರ್ಥವು ಬೇಯುವ ಪ್ರಕ್ರಿಯೆ ನಿಧಾನವಾಗುತ್ತೆ
ಪದಾರ್ಥವು ಬೇಯುವ ಪ್ರಕ್ರಿಯೆ ನಿಧಾನವಾಗುತ್ತೆ
ಹೌದು. ಅಡುಗೆ ಮಾಡುವಾಗ ಕುದಿಯುತ್ತಿರುವ ಪದಾರ್ಥಕ್ಕೆ ಬಿಸಿ ನೀರನ್ನೇ ಏಕೆ ಸೇರಿಸಬೇಕು ಎಂಬ ಪ್ರಶ್ನೆಗೆ ಪ್ರಮುಖ ಕಾರಣ ಉಷ್ಣತೆಯ ಸ್ಥಿರತೆ (Steady Temperature). ನಾವು ಒಲೆಯ ಮೇಲೆ ಕುದಿಯುತ್ತಿರುವ ಆಹಾರಕ್ಕೆ ದಿಢೀರನೆ ತಣ್ಣೀರನ್ನು ಸುರಿದಾಗ, ಆ ಪಾತ್ರೆಯಲ್ಲಿರುವ ಉಷ್ಣತೆಯು ಒಮ್ಮೆಲೇ ಕೆಳಮಟ್ಟಕ್ಕೆ ಇಳಿಯುತ್ತದೆ. ಇದರಿಂದ ಪದಾರ್ಥವು ಬೇಯುವ ಪ್ರಕ್ರಿಯೆ (Cooking process) ಅರ್ಧಕ್ಕೆ ನಿಂತುಹೋಗುತ್ತದೆ ಅಥವಾ ನಿಧಾನವಾಗುತ್ತದೆ.
ಮಾಂಸವು ಮೃದುತ್ವವನ್ನು ಕಳೆದುಕೊಳ್ಳಲ್ಲ
ಮಾಂಸವು ಮೃದುತ್ವವನ್ನು ಕಳೆದುಕೊಳ್ಳಲ್ಲ
ವಿಶೇಷವಾಗಿ ಮಾಂಸಾಹಾರ ಅಥವಾ ಬೇಳೆಕಾಳುಗಳನ್ನು ಬೇಯಿಸುವಾಗ ಈ ತಂತ್ರ ಬಹಳ ಮುಖ್ಯವಾಗಿ ಕೆಲಸ ಮಾಡುತ್ತದೆ. ಕುದಿಯುತ್ತಿರುವ ಮಾಂಸಕ್ಕೆ ತಣ್ಣೀರು ಹಾಕಿದಾಗ, ಮಾಂಸದ ತಂತುಗಳು (Fibers) ಒಮ್ಮೆಲೇ ಸಂಕುಚಿತಗೊಳ್ಳುತ್ತವೆ. ಇದನ್ನು ವೈಜ್ಞಾನಿಕವಾಗಿ ಕೋಲ್ಡ್ ಶಾಕ್ (Cold Shock) ಎಂದು ಕರೆಯಬಹುದು. ಹೀಗಾದಾಗ ಮಾಂಸವು ಗಟ್ಟಿಯಾಗುತ್ತದೆ (Tough) ಮತ್ತು ತಿನ್ನಲು ಮೃದುವಾಗಿರುವುದಿಲ್ಲ. ಬದಲಾಗಿ, ನೀವು ಮೊದಲೇ ಕಾಯಿಸಿದ ಬಿಸಿ ನೀರನ್ನು ಸೇರಿಸಿದರೆ, ಮಾಂಸವು ತನ್ನ ಮೃದುತ್ವವನ್ನು ಕಳೆದುಕೊಳ್ಳುವುದಿಲ್ಲ ಮತ್ತು ಸಮನಾಗಿ ಬೇಯುತ್ತದೆ.
ಮುಂದೆ ಈ ಸರಳ ಸೂತ್ರ ನೆನಪಿಡಿ
ಮುಂದೆ ಈ ಸರಳ ಸೂತ್ರ ನೆನಪಿಡಿ
ಬಿಸಿ ನೀರು ಬಳಸುವುದರಿಂದ ಅಡುಗೆಯ ಸಮಯವೂ ಉಳಿತಾಯವಾಗುತ್ತದೆ ಮತ್ತು ಆಹಾರದ ನೈಸರ್ಗಿಕ ರುಚಿ ಹಾಳಾಗುವುದಿಲ್ಲ. ಹೀಗೆ ತಲೆಮಾರುಗಳಿಂದ ನಡೆದು ಬಂದಿರುವ ಈ ಒಂದು ಪುಟ್ಟ ಬದಲಾವಣೆ ಅಥವಾ ಸರಳ ಉಪಾಯವು ಅಡುಗೆಯ ಗುಣಮಟ್ಟವನ್ನು ಮತ್ತು ರುಚಿಯನ್ನು ಎಷ್ಟು ಹೆಚ್ಚಿಸುತ್ತದೆ ಎಂಬುದು ನಿಜಕ್ಕೂ ಅದ್ಭುತ. ಇನ್ನು ಮುಂದೆ ನೀವು ಅಡುಗೆ ಮಾಡುವಾಗ ಈ ಸರಳ ಸೂತ್ರವನ್ನು ನೆನಪಿಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.