ಸಸ್ಯಹಾರಿಗಳಾಗಿ ಬದಲಾದ ಬಾಲಿವುಡ್ ತಾರೆಯರು… ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Vegetarian: ತಮ್ಮ ಫಿಟ್ನೆಸ್ , ಆರೋಗ್ಯಕ್ಕಾಗಿ, ತಮ್ಮ ನೆಚ್ಚಿನ ಪ್ರಾಣಿಗಳಿಗಾಗಿ, ಪರಿಸರದ ಬಗ್ಗೆ ಅರಿವು ಮೂಡಿಸಲು ಹಾಗೂ ಆಧ್ಯಾತ್ಮಿಕ ಕಾರಣಕ್ಕಾಗಿ ಶುದ್ಧ ಸಸ್ಯಾಹಾರಿಗಳಾಗಿ ಮಾರ್ಪಟ್ಟ ಅನೇಕ ಬಾಲಿವುಡ್ ತಾರೆಯರಿದ್ದಾರೆ . ಇಲ್ಲಿದೆ ಕೆಲವು ತಾರೆಯರ ಲಿಸ್ಟ್ ಹಾಗೂ ಅವರು ಸಸ್ಯಹಾರಿಯಾಗಲು ಕಾರಣ.

ಸಸ್ಯಾಹಾರಿ ಬಾಲಿವುಡ್ ತಾರೆಯರು
ಸೆಲೆಬ್ರಿಟಿಗಳು ಯಾವಾಗಲೂ ಫಿಟ್ ಆಗಿರಲು ಇಷ್ಟ ಪಡುತ್ತಾರೆ. ಅದಕ್ಕಾಗಿ ವರ್ಕ್ ಔಟ್, ಸರಿಯಾದ ಆಹಾರಕ್ರಮಗಳನ್ನು ಪಾಲಿಸುತ್ತಾರೆ. ನಿಮಗೆ ಗೊತ್ತಾ ಬಾಲಿವುಡ್ ನ ಹಲವು ತಾರೆಯರು ವೆಜಿಟೇರಿಯನ್. ಹೌದು ಪ್ರಾಣಿಗಳ ಮೇಲಿನ ಪ್ರೀತಿ, ಪರಿಸರ ಜಾಗೃತಿ ಅಥವಾ ವೈದ್ಯಕೀಯ ಕಾರಣಗಳಿಂದ ಅವರು ಮಾಂಸ, ಡೈರಿ ಮತ್ತು ಪ್ರಾಣಿ ಉತ್ಪನ್ನಗಳನ್ನು ತ್ಯಜಿಸಿದ್ದಾರೆ. ಸಸ್ಯಾಹಾರಿಗಳಾಗಿ ಮಾರ್ಪಟ್ಟ ಕೆಲವು ಬಾಲಿವುಡ್ ನಟರು ಯಾರ್ಯಾರು ನೋಡೋಣ. .
ಕಾರ್ತಿಕ್ ಆರ್ಯನ್
ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ 2018 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಲವ್ ಆಜ್ ಕಲ್ ನಟ ಸಂಪೂರ್ಣವಾಗಿ ವೆಜಿಟೇರಿಯನ್.
ಆಲಿಯಾ ಭಟ್
ಸಸ್ಯಾಹಾರಿ ಆಹಾರವು ಆರೋಗ್ಯಕರ ಜೀವನ ವಿಧಾನವಾಗಿದೆ. ಅದಕ್ಕಾಗಿ ಸರಿಯಾದ ಆಹಾರವನ್ನು ಸೇವಿಸುವುದು ಅತ್ಯಗತ್ಯ ಎನ್ನುತ್ತಾರೆ ಆಲಿಯಾ ಭಟ್. ತನ್ನ ಜೀವನಶೈಲಿಯನ್ನು ಬೆಂಬಲಿಸುವ ಸಲುವಾಗಿ, ಆಲಿಯಾ 2013 ರಲ್ಲಿ ನಿರಾಶ್ರಿತ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಲು ಪೆಟಾ ಅಭಿಯಾನದಲ್ಲಿ ಭಾಗವಹಿಸಿದರು.
ಪರಿಣಿತಿ ಚೋಪ್ರಾ
"ನಾನು ಎಂದಿಗೂ ಮಾಂಸವನ್ನು ಅತಿಯಾಗಿ ಸೇವಿಸಿಲ್ಲ, ಈಗ ನಾನು ಸಸ್ಯಾಹಾರಿಯಾಗಿದ್ದೇನೆ. ನಾನು ಇದನ್ನು ನನ್ನ ಸ್ವಂತ ವೈಯಕ್ತಿಕ ಮತ್ತು ಆಧ್ಯಾತ್ಮಿಕ ಉದ್ದೇಶಕ್ಕಾಗಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಮಾಡುತ್ತೇನೆ. ಸಸ್ಯಾಹಾರಿಯಾಗುವುದು ನನ್ನೊಳಗೆ ನಾನು ಹಲವಾರು ಬದಲಾವಣೆಗಳನ್ನು ಅನುಭವಿಸಿದ್ದೇನೆ ಎಂದು ಪರಿಣಿತಿ ಹೇಳಿದ್ದರು.
ಶಾಹಿದ್ ಕಪೂರ್
ಶಾಹಿದ್ ಕಪೂರ್ ಒಂದು ದಶಕದ ಹಿಂದೆ ಸಸ್ಯಾಹಾರಿಯಾದರು, ಅವರ ತಂದೆ ಅವರಿಗೆ ಉಡುಗೊರೆಯಾಗಿ ನೀಡಿದ ಬ್ರಿಯಾನ್ ಹೈನ್ಸ್ ಅವರ "ಲೈಫ್ ಈಸ್ ಫೇರ್" ಪುಸ್ತಕವನ್ನು ಓದಿದ ನಂತರ ಅವರು ಈ ನಿರ್ಧಾರ ತೆಗೆದುಕೊಂಡರು.
ಅನುಷ್ಕಾ ಶರ್ಮಾ
ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ವಿರಾಟ್ ಕೊಹ್ಲಿ ವೆಜಿಟೇರಿಯನ್. NH10 ನಟಿ ಹಲವಾರು ಸಂದರ್ಭಗಳಲ್ಲಿ ಮಾಂಸಾಹಾರವನ್ನು ತಿನ್ನದೇ ಇರುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಹಲವಾರು ವರ್ಷಗಳ ಹಿಂದೆ ಮಾಂಸಾಹಾರವನ್ನು ತ್ಯಜಿಸಿದರು. ಸಿರೋಸಿಸ್ ಸೇರಿದಂತೆ ಆರೋಗ್ಯ ಕಾರಣಗಳಿಂದಾಗಿ ಈ ಬದಲಾವಣೆ ಮಾಡಿಕೊಂಡಿದ್ದಾರೆ. ಅವರ ಆಹಾರವು ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ ಅನ್ನು ಒಳಗೊಂಡಿರುತ್ತದೆ.
ಭೂಮಿ ಪೆಡ್ನೇಕರ್
ಲಾಕ್‌ಡೌನ್ ಸಮಯದಲ್ಲಿ ಭೂಮಿ ಪೆಡ್ನೇಕರ್ ಸಸ್ಯಾಹಾರಿಯಾದರು, ಏಕೆಂದರೆ ಇತರ ಪ್ರಾಣಿಗಳ ಬಗ್ಗೆ ಅವರಿಗಿದ್ದ ಕರುಣೆ ಅವರನ್ನು ಸಸ್ಯಹಾರಿಯನ್ನಾಗಿ ಮಾಡಿತು. ಅವರು ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ಒಳಗೊಂಡಂತೆ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾ, ಇವರು ದೈಹಿಕವಾಗಿ ಸಹ ಸ್ಟ್ರಾಂಗ್ ಆಗಿದ್ದಾರೆ.
ತಮನ್ನಾ ಭಾಟಿಯಾ
ಬಾಹುಬಲಿ ನಟಿ ಮೊದಲು ಮಾಂಸಹಾರಿಯಾಗಿದ್ದರು. ಇವರ ಫೇವರಿಟ್ ಫುಡ್ ಚಿಕನ್ ಬಿರಿಯಾನಿಯಾಗಿತ್ತು. ಆದರೆ ತಮನ್ನಾ ಅವರ ನಾಯಿ ಪೆಬಲ್ ತೀವ್ರ ಪಾರ್ಶ್ವವಾಯುವಿಗೆ ತುತ್ತಾಗಿ ತುಂಬಾ ಅಸ್ವಸ್ಥರಾದ ನಂತರ ಸಸ್ಯಾಹಾರಿಯಾಗಲು ನಿರ್ಧರಿಸಿದರು. ಅವರು ಪ್ರಾಣಿಗಳು ಮತ್ತು ಆಹಾರವನ್ನು ತುಂಬಾ ಪ್ರೀತಿಸುತ್ತಾರೆ, ಮಾಂಸವನ್ನು ತ್ಯಜಿಸುವುದು ಅವರಿಗೆ ಕಷ್ಟಕರವಾಗಿರಲಿಲ್ಲ.
ಕಂಗನಾ ರನೌತ್
ಮಾಂಸಾಹಾರಿಯಾಗಿದ್ದ ಕಂಗನಾ ರನೌತ್ ಸಸ್ಯಾಹಾರಿಯಾಗಲು ನಂತರ ನಿರ್ಧರಿಸಿದರು. ಸಸ್ಯಾಹಾರಿಯಾಗುವುದು ತನಗೆ ದೈಹಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

