Asianet Suvarna News Asianet Suvarna News

World Vegetarian Day 2022: ಸಸ್ಯಾಹಾರ ಸೇವನೆಯಿಂದ ಆರೋಗ್ಯಕ್ಕೆ ಸಿಗೋ ಪ್ರಯೋಜನ ಒಂದೆರಡಲ್ಲ

ವಿಶೇಷ ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರವೆಂದರೆ ಸಸ್ಯಾಹಾರ ಎಂದು ಹೇಳಬಹುದು. ಬಹಳಷ್ಟು ಜನರು ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳ ಜನರು ಸ್ವತಃ ಸಸ್ಯಾಹಾರದತ್ತ ಪರಿವರ್ತನೆ ಆಗುವುದನ್ನು ನಾವು ನೋಡಬಹುದು. ವಿಶ್ವ ಶಾಖಾಹಾರ ದಿನವಾದ ಇಂದು ಯಾವುದೆಲ್ಲಾ ತರಕಾರಿ ಸೇವನೆಯಿಂದ ಯಾವೆಲ್ಲಾ ರೀತಿ ಪ್ರಯೋಜನವಿದೆ ತಿಳಿಯೋಣ.

World Vegetarian Day 2022: Know the Five Health Benefits of a Plant-based Diet Vin
Author
First Published Oct 1, 2022, 10:44 AM IST

ಪ್ರತಿ ವರ್ಷ ಅಕ್ಟೋಬರ್ 1ರಂದು ವಿಶ್ವ ಶಾಖಾಹಾರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ ಜನರಿಗೆ ಸಸ್ಯಾಹಾರದ ಮಹತ್ವವನ್ನು ತಿಳಿಸುವುದಾಗಿದೆ. ತರಕಾರಿಯಿಂದಲೇ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಅದರಲ್ಲಿಯೂ ಮಾಂಸಾಹಾರಕ್ಕಿಂತ ಶಾಖಾಹಾರಮೇ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಸ್ಯಾಹಾರಿ ಆಹಾರ ನಮಗೆ ತರಕಾರಿ, ಧಾನ್ಯ, ದ್ವಿದಳ ಧಾನ್ಯಗಳು, ಹಣ್ಣುಗಳು, ಒಣ ಹಣ್ಣುಗಳಿಂದ ಸಿಗುತ್ತದೆ. ಈ ಜೀವನಶೈಲಿಯು ಲ್ಯಾಕ್ಟೋ-ಓವೊ ಸಸ್ಯಾಹಾರಿಗಳನ್ನು ಸಹ ಒಳಗೊಂಡಿದೆ. ಇವರು ಮೊಟ್ಟೆ, ಡೈರಿ ಮತ್ತು ಜೇನುತುಪ್ಪದಂತಹ ಪ್ರಾಣಿ ಉತ್ಪನ್ನಗಳನ್ನು ಸೇವಿಸುತ್ತಾರೆ. ನಿಜವಾದ ಸಸ್ಯಾಹಾರ ಸೇವಿಸುವ ವ್ಯಕ್ತಿ ಯಾವುದೇ ರೀತಿಯ ಪ್ರಾಣಿ ಉತ್ಪನ್ನಗಳನ್ನು ಸೇವಿಸುವುದಿಲ್ಲ.

ವಿಶ್ವ ಸಸ್ಯಾಹಾರಿಗಳ ದಿನದ ಆರಂಭ
1977ರಲ್ಲಿ ಉತ್ತರ ಅಮೇರಿಕಾ ವೆಜಿಟೇರಿಯನ್ ಸೊಸೈಟಿ, ಅಕ್ಟೋಬರ್ 1ರಂದು ವಿಶ್ವ ಶಾಖಾಹಾರ ದಿನವನ್ನು (World Vegetarian Day) ಆಚರಿಸಲು ನಿರ್ಧರಿಸಿತು. ಸಸ್ಯಾಹಾರದ ಮಹತ್ವ, ಅದರ ಅಗತ್ಯತೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ (Awareness) ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ವಿಶೇಷ ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರ (Food)ವೆಂದರೆ ಸಸ್ಯಾಹಾರ ಎಂದು ಹೇಳಬಹುದು. ಬಹಳಷ್ಟು ಜನರು ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳ ಜನರು ಸ್ವತಃ ಸಸ್ಯಾಹಾರದತ್ತ ಪರಿವರ್ತನೆ ಆಗುವುದನ್ನು ನಾವು ನೋಡಬಹುದು. ಯಾವುದೆಲ್ಲಾ ತರಕಾರಿ (Vegetable) ಸೇವನೆಯಿಂದ ಯಾವೆಲ್ಲಾ ರೀತಿ ಪ್ರಯೋಜನವಿದೆ ತಿಳಿಯೋಣ.

ಒಂದು ವಾರ ಸಸ್ಯಾಹಾರಿಯಾದ್ರೆ ನಾಲ್ಕುವರೆ ಕೇಜಿ ತೂಕ ಇಳಿಸ್ಬಹುದು! ಇಲ್ಲಿದೆ ಫುಡ್ ಟಿಪ್ಸ್

ಟೊಮೇಟೋ
ಟೊಮೇಟೋ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು (Immunity power) ಹೆಚ್ಚಿಸುವುದರಿಂದ ಹಿಡಿದು ತೂಕ ಇಳಿಸುವವರೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಯಾಕೆಂದರೆ ಟೊಮೇಟೋಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ರಂಜಕ, ವಿಟಮಿನ್ ಎ, ಥಯಾಮಿನ್, ರೈಬೋಫ್ಲಾವಿನ್, ವಿಟಮಿನ್ ಸಿ, ವಿಟಮಿನ್ ಕೆ ಸಮೃದ್ಧವಾಗಿದೆ. ಹೀಗಾಗಿ ಟೊಮೆಟೊ ತಿನ್ನುವುದರಿಂದ ರಕ್ತ ಶುದ್ಧವಾಗುತ್ತದೆ. ನರಗಳು ಬಲಗೊಳ್ಳುತ್ತವೆ. ಇದು ರಕ್ತಹೀನತೆಯನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಟೊಮ್ಯಾಟೋಸ್ ಚರ್ಮದ ಆರೈಕೆಯಾಗಿಯೂ ಉಪಯುಕ್ತವಾಗಿದೆ. ಇದು ಅನೇಕ ಚರ್ಮ ರೋಗಗಳನ್ನು(Skin problem) ಕಡಿಮೆ ಮಾಡುತ್ತದೆ.

ಸೊಪ್ಪು
ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ದೇಹಕ್ಕೆ (Body) ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಉಸಿರಾಟದ ತೊಂದರೆಗಳನ್ನು ನಿಯಂತ್ರಣದಲ್ಲಿಡಬಹುದು. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶವೂ ಅಧಿಕವಾಗಿದೆ. ಇದನ್ನು ತಿಂದರೆ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ಉತ್ಕರ್ಷಣ ನಿರೋಧಕ, ಖನಿಜ, ಪ್ರೋಟೀನ್ ಮತ್ತು ಫೈಬರ್ ಅಂಶದಿಂದಾಗಿ ಪಾಲಕ್ ಜೀರ್ಣಕ್ರಿಯೆಗೆ ಒಳ್ಳೆಯದು. ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಂಧಿವಾತದಿಂದ ಬಳಲುತ್ತಿದ್ದೀರಾ ? ಹಾಗಿದ್ರೆ ಸಸ್ಯಾಹಾರ ಮಾತ್ರ ಸೇವಿಸಿ

ಎಲೆಕೋಸು
ಎಲೆಕೋಸು ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಎಲೆಕೋಸಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ2 ಮತ್ತು ವಿಟಮಿನ್ ಸಿ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಕಬ್ಬಿಣ, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಸಲ್ಫರ್ ಸಮೃದ್ಧವಾಗಿದೆ. ಎಲೆಕೋಸು ತಿನ್ನುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲು (Hair) ದಪ್ಪ ಮತ್ತು ಗಾಢವಾಗುತ್ತದೆ. ಇದು ಕಣ್ಣಿನ ದೃಷ್ಟಿಯನ್ನೂ ಸುಧಾರಿಸುತ್ತದೆ.

ಪಪ್ಪಾಯಿ
ಪಪ್ಪಾಯಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಇವುಗಳನ್ನು ತಿನ್ನುವುದರಿಂದ ಅನೇಕ ರೀತಿಯ ಚರ್ಮ ರೋಗಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಪಪ್ಪಾಯಿಯನ್ನು ಕರಿ ಅಥವಾ ಜ್ಯೂಸ್ ಆಗಿ ಮಾಡಬಹುದು. ಮಧುಮೇಹಿಗಳು (Diabetes) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಪಪ್ಪಾಯಿ ರಸವನ್ನು ಕುಡಿಯುತ್ತಾರೆ.

Follow Us:
Download App:
  • android
  • ios