- Home
- Life
- Food
- ಬೆಂಡೆಕಾಯಿ ಲೋಳೆ ಯಾಕೆ ಇಷ್ಟ ಆಗಲ್ಲ? ವೈದ್ಯರು ಹೇಳಿದ ಈ ಮೂರು ಸಿಕ್ರೇಟ್ ಗೊತ್ತಾದ್ರೆ ಡೇಲಿ ಅದನ್ನೇ ತಿಂತೀರಿ
ಬೆಂಡೆಕಾಯಿ ಲೋಳೆ ಯಾಕೆ ಇಷ್ಟ ಆಗಲ್ಲ? ವೈದ್ಯರು ಹೇಳಿದ ಈ ಮೂರು ಸಿಕ್ರೇಟ್ ಗೊತ್ತಾದ್ರೆ ಡೇಲಿ ಅದನ್ನೇ ತಿಂತೀರಿ
ಬೆಂಡೆಕಾಯಿ (Okra Vegetable) ಜನಪ್ರಿಯ ತರಕಾರಿ. ತುಂಬಾ ಟೇಸ್ಟು. ಆದರೆ ಅದರಲ್ಲಿರುವ ಲೋಳೆ ಬಹುತೇಕರಿಗೆ ಇಷ್ಟ ಆಗಲ್ಲ. ಈ ವಿಶೇಷ ತರಕಾರಿಯಿಂದ ಬಿಡುಗಡೆ ಆಗುವ ಲೋಳೆ ಮೇಲೆ ಈಗ ಅಧ್ಯಯನವೊಂದ ನಡೆದಿದೆ.

ಆರೋಗ್ಯ ಕಾಪಾಡಲು ಎತ್ತಿದ ಕೈ
ಲೋಳೆ ಅನ್ನೋ ಕಾರಣಕ್ಕೆ ಬೆಂಡೆಕಾಯಿಯನ್ನು ತಿನ್ನೋದೇ ಬಿಟ್ಟರೆ.. ನೀವು ಓದಲೇಬೇಕಾದ ಸ್ಟೋರಿ ಇದು. ಈ ಬೆಂಡೆಕಾಯಿ ಹಾರ್ವರ್ಡ್, ಸ್ಟ್ಯಾನ್ಫೋರ್ಡ್ ಮತ್ತು ಏಮ್ಸ್ ತರಬೇತಿ ಪಡೆದಿರುವ ಬೋರ್ಡ್ ಪ್ರಾಮಾಣಿಕೃತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಸೌರಭ್ ಸೇಥಿ ಅವರು ಬೆಂಡೆಕಾಯಿ ಲೋಳೆ ಮೇಲೆ ವಿಶೇಷ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಬೆಂಡೆಕಾಯಿಯಲ್ಲಿರುವ ಫೈಬರ್, ಕರುಳಿನ ಆರೋಗ್ಯವನ್ನು ಹೇಗೆ ಕಾಪಾಡುತ್ತದೆ ಎಂಬುದನ್ನು ಅವರು ತಿಳಿಸಿದ್ದಾರೆ.
ಕರುಳಿಗೆ ಹೇಗೆ ಸಹಕಾರಿ?
ಬೆಂಡೆಕಾಯಿ ಲೋಳೆಯಿಂದ ಕೂಡಿರುತ್ತದೆ. ಇದು ನೀರಿನ ಸಂಪರ್ಕಕ್ಕೆ ಬಂದಾಗ ಕರಗುವ ನಾರು ಜೆಲ್ ರೂಪದಲ್ಲಿ ಸಿಗುತ್ತದೆ. ತುಂಬಾ ಲೋಳೆ ಎಂಬ ಕಾರಣಕ್ಕೆ ಜನರು ಅದನ್ನು ತಿರಸ್ಕರಿಸುತ್ತಾರೆ. ಆದರೆ ಉಪಯೋಗ ನೂರೆಂಟು ಎಂದು ಡಾ.ಸೇಥಿ ತಿಳಿಸಿದ್ದಾರೆ. ಅವರ ಪ್ರಕಾರ.. ಇದು ಕರುಳಿನ ಜೀರ್ಣಕ್ರಿಯೆ ಮೇಲೆ ತುಂಬಾ ಪ್ರಭಾವ ಬೀರಿ.. ನಿಮ್ಮ ಕರುಳಿನ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಅನ್ನೋದು ವೈದ್ಯರ ಸೂಚನೆ.
ಕೊಲೆಸ್ಟ್ರಾಲ್ಗೆ ಮದ್ದು
ಬೆಂಡೆಕಾಯಿ ನಮ್ಮ ದೇಹದಲ್ಲಿ ಬೆಳೆದಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಈ ಬೆಂಡೆಕಾಯಿ ಪಿತ್ತರಸ ಆಮ್ಲಗಳ ಮೇಲೆ ಪ್ರಭಾವ ಬೀರುತ್ತದೆ. ನಂತರ ಯಕೃತ್ತು ಹೆಚ್ಚು ಪಿತ್ತರಸ ಆಮ್ಲಗಳನ್ನು ಉತ್ಪಾದಿಸಲು ಕೊಲೆಸ್ಟ್ರಾಲ್ ಅನ್ನು ಬಳಸುತ್ತದೆ. ಈ ಪ್ರಕ್ರಿಯೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅನ್ನೋದು ವೈದ್ಯರ ವಾದವಾಗಿದೆ.
ಬೆಂಡೆಕಾಯಿ ಕರಗುವ ನಾರಿನ ಮೂಲ
ಅಡುಗೆ ಮಾಡುವಾಗ ಲೋಳೆ ಬಂದರೆ.. ಅದು ತರಕಾರಿಯ ಅನಗತ್ಯ ಲಕ್ಷಣ ಅಲ್ಲ. ಎಲ್ಲರೂ ಅದನ್ನು ತನ್ನಬೇಕು. ನಿಮ್ಮ ಕರಳು ಚೆನ್ನಾಗಿದ್ದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ. ಬೆಂಡೆಕಾಯಿ ಕರಗುವ ನಾರಿನ ಮೂಲ. ಪಿತ್ತರಸ ಆಮ್ಲ ವಿಸರ್ಜನೆ ಪರೀಕ್ಷಿಸುವ ಸಂಶೋಧನೆಯಲ್ಲಿ ಬೆಂಡೆಕಾಯಿ ಲೋಳೆ ತುಂಬಾನೇ ಪರಿಣಾಮಾರಿ ಆಗಿದೆ ಎಂದು ವೈದ್ಯ ಸೇಥಿ ತಿಳಿಸಿದ್ದಾರೆ.
ಬೆಂಡೆಕಾಯಿಯಿಂದ ಏನೆಲ್ಲ ಪ್ರಯೋಜನ?
- ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
- ಸರಿಯಾಗಿ ದೇಹದ ತೂಕ ಮೆಂಟೇನ್ ಮಾಡಲು ಸಹಕಾರಿ
- ಗರ್ಭಿಣಿಯರ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- ಹೃದಯದ ಆರೋಗ್ಯವನ್ನು ಕಾಪಾಡುತ್ತೆ
- ಜೀರ್ಣಕ್ರಿಯೆ ಸುಧಾರಣೆ
- ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಂಟ್ರೋಲ್ನಲ್ಲಿ ಇಡಲು ಬೆಂಡೆಕಾಯಿ ಸಹಕಾರಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

