MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಕರ್ನಾಟಕದ ಈ ಊರಿನ ಪಾನಿಪೂರಿ ಎಷ್ಟು ಫೇಮಸ್ ಅಂದ್ರೆ ಇಲ್ಲಿಗೆ ಬಂದೋರು ಬರಿಗೈಲಿ ಹೋಗೋದಿಲ್ಲ!

ಕರ್ನಾಟಕದ ಈ ಊರಿನ ಪಾನಿಪೂರಿ ಎಷ್ಟು ಫೇಮಸ್ ಅಂದ್ರೆ ಇಲ್ಲಿಗೆ ಬಂದೋರು ಬರಿಗೈಲಿ ಹೋಗೋದಿಲ್ಲ!

Golgappa: ದೇಶದ ವಿವಿಧ ರಾಜ್ಯಗಳಲ್ಲಿ ಗೋಲ್‌ಗಪ್ಪ ಅನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಇದನ್ನು 'ಪಾನಿಪೂರಿ' ಎಂದು ಕರೆದರೆ, ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ ಇದಕ್ಕೆ ವಿಚಿತ್ರ ಹೆಸರುಗಳಿವೆ, ಅವುಗಳನ್ನು ಕೇಳಿದರೆ ನಿಮಗೂ ನಗು ಬರಬಹುದು.

1 Min read
Author : Ashwini HR
Published : May 28 2026, 03:16 PM IST
Share this Photo Gallery
  • FB
  • TW
  • Linkdin
  • Whatsapp
15
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಫೇಮಸ್
Image Credit : our own

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಫೇಮಸ್

ಖಾದ್ಯ ಪ್ರಿಯರು ದೇಶಾದ್ಯಂತ ಪ್ರಸಿದ್ಧವಾಗಿರುವ ತಿಂಡಿಗಳನ್ನು ಸವಿಯಲು ಇಷ್ಟಪಡುತ್ತಾರೆ. ಅದು ಸಿಹಿಯಾಗಿರಲಿ ಅಥವಾ ಫಾಸ್ಟ್ ಫುಡ್ ಆಗಿರಲಿ, ಒಂದೊಂದು ಊರಿನ ರುಚಿ ಒಂದೊಂದು ರೀತಿ ಇರುತ್ತದೆ. ಅದರಲ್ಲೂ ಕರ್ನಾಟಕದ ಒಂದು ವಿಶೇಷ ಪಾನಿಪೂರಿಯ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ಅದುವೇ ಬಂಗಾರಪೇಟೆ ಪಾನಿಪೂರಿ! ಬಂಗಾರಪೇಟೆ ಮಾರ್ಗವಾಗಿ ಸಂಚರಿಸುವವರು ಇಲ್ಲಿನ ಪಾನಿಪೂರಿಯ ರುಚಿ ನೋಡದೆ ಹೋಗುವುದೇ ಇಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇದು ವಿವಿಧ ಹೆಸರುಗಳಿಂದ ಪ್ರಖ್ಯಾತವಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ದೇಶದ ಇನ್ಯಾವುದೇ ಭಾಗದ ಪಾನಿಪೂರಿಗಿಂತ ತೀರಾ ವಿಭಿನ್ನ
Image Credit : youtube

ದೇಶದ ಇನ್ಯಾವುದೇ ಭಾಗದ ಪಾನಿಪೂರಿಗಿಂತ ತೀರಾ ವಿಭಿನ್ನ

ಕರ್ನಾಟಕದಲ್ಲಿ ಸಣ್ಣ ತಳ್ಳುಗಾಡಿಯಿಂದ ಹಿಡಿದು ದೊಡ್ಡ ರೆಸ್ಟೋರೆಂಟ್ ವರೆಗೂ ಗೋಲ್‌ಗಪ್ಪವನ್ನು 'ಪಾನಿಪೂರಿ' ಎಂದೇ ಕರೆಯಲಾಗುತ್ತದೆ. ಅದರಲ್ಲೂ ಕರ್ನಾಟಕದ ಬಂಗಾರಪೇಟೆ ಪಾನಿಪೂರಿಗಾಗಿಯೇ ಹೆಸರುವಾಸಿ. ಇಲ್ಲಿ ಬಿಳಿ ಬಣ್ಣದ ಪಾನಿಯನ್ನು ಬಳಸುವ ಪಾನಿಪೂರಿ ಸಿಗುತ್ತದೆ. ಇದರ ರುಚಿ ದೇಶದ ಇನ್ಯಾವುದೇ ಭಾಗದ ಪಾನಿಪೂರಿಗಿಂತ ತೀರಾ ವಿಭಿನ್ನ. ಇಲ್ಲಿನ ಪಾನಿಪೂರಿಯ ಒಳಗೆ ಬೇಯಿಸಿದ ಆಲೂಗಡ್ಡೆ ಮತ್ತು ಸಣ್ಣದಾಗಿ ಹೆಚ್ಚಿದ ಈರುಳ್ಳಿಯ ಸ್ಟಫಿಂಗ್ (Stuffing) ಇರುತ್ತದೆ.

Related Articles

Related image1
ಹಳೆಯ ಕೋಟೆಗಳಲ್ಲಿ ನಾಗರಹಾವಿನ ಕಾವಲು.. ತಲೆಮಾರುಗಳಿಂದ ಕಾಡುತ್ತಿರುವ ನಿಗೂಢ ಪ್ರಶ್ನೆಗೆ ಇಲ್ಲಿದೆ ಉತ್ತರ!
Related image2
ಜೀನ್ಸ್ ಪ್ಯಾಂಟ್‌ನ ಜಿಪ್‌ನಲ್ಲಿ ಸಣ್ಣ ರಂಧ್ರ ಏಕೆ ಇದೆ? ವಿಷ್ಯ ಬೇರೇನೇ ಇದೆ ಎಂದು Chatgpt ನೀಡಿತು ಅಚ್ಚರಿಯ ಉತ್ತರ
35
ಪಶ್ಚಿಮ ಬಂಗಾಳದಲ್ಲಿ ಏನಂತಾರೆ?
Image Credit : our own

ಪಶ್ಚಿಮ ಬಂಗಾಳದಲ್ಲಿ ಏನಂತಾರೆ?

ನಾವು ಪಶ್ಚಿಮ ಬಂಗಾಳದ ವಿಷಯಕ್ಕೆ ಬಂದರೆ, ಅಲ್ಲಿ ಪಾನಿಪೂರಿಯನ್ನು 'ಪುಚ್ಕಾ' ಎಂಬ ಹೆಸರಿನಿಂದ ಕರೆಯುತ್ತಾರೆ. ಇದರ ರುಚಿ ಮತ್ತು ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಪುಚ್ಕಾಗಳು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದು, ಬಣ್ಣದಲ್ಲಿ ಸ್ವಲ್ಪ ಕಪ್ಪಾಗಿರುತ್ತವೆ. ಇದರಲ್ಲಿ ಬೇಯಿಸಿದ ಆಲೂಗಡ್ಡೆಯ ಹೂರಣವಿರುತ್ತದೆ ಮತ್ತು ಇಲ್ಲಿನ ಚಟ್ನಿ ಸಿಹಿಯಾಗಿರುವುದಕ್ಕಿಂತ ಹೆಚ್ಚಾಗಿ ಖಾರವಾಗಿರುತ್ತದೆ. ಜನರು ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

45
ಗುಜರಾತ್‌ನಲ್ಲಿ ಇದರ ಹೆಸರೇನು?
Image Credit : our own

ಗುಜರಾತ್‌ನಲ್ಲಿ ಇದರ ಹೆಸರೇನು?

ಇನ್ನು ಗುಜರಾತ್‌ನ ಕೆಲವು ಭಾಗಗಳಲ್ಲಿ ಇದನ್ನು 'ಪಕೋಡಿ' ಎಂದು ಕರೆಯಲಾಗುತ್ತದೆ. ಇದರಲ್ಲಿ ಸೇವ್ ಮತ್ತು ಈರುಳ್ಳಿಯನ್ನು ಬಳಸಲಾಗುತ್ತದೆ. ಇಲ್ಲಿನ ಪಾನಿಯನ್ನು ಪುದೀನಾ ಮತ್ತು ಹಸಿಮೆಣಸಿನಕಾಯಿ ಬಳಸಿ ಅತಿ ಹೆಚ್ಚು ಖಾರವಾಗಿ ತಯಾರಿಸುತ್ತಾರೆ. ಪಕೋಡಿಯಲ್ಲಿ ಹೂರಣ (Stuffing) ಕೂಡ ಜಾಸ್ತಿ ಇರುತ್ತದೆ.

55
ಒಡಿಶಾದಲ್ಲಿ ಅತಿ ಮಜಾ ಹೆಸರು!
Image Credit : our own

ಒಡಿಶಾದಲ್ಲಿ ಅತಿ ಮಜಾ ಹೆಸರು!

ಒಡಿಶಾ ಮತ್ತು ಹೈದರಾಬಾದ್ ಭಾಗಗಳಲ್ಲಿಗೋಲ್‌ಗಪ್ಪಕ್ಕೆ ಒಂದು ವಿಚಿತ್ರ ಹೆಸರಿದೆ. ಅಲ್ಲಿ ಇದನ್ನು 'ಗುಪ್ ಚುಪ್' ಎಂದು ಕರೆಯುತ್ತಾರೆ. ಇದನ್ನು ಬಾಯಲ್ಲಿ ಇಟ್ಟಾಗ ಅದು ಒಡೆದು ಶಬ್ದ ಬರುವುದರಿಂದ ಇದಕ್ಕೆ ಈ ಹೆಸರು ಬಂದಿದೆ ಎಂಬ ತರ್ಕವಿದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಆಹಾರ
ಪ್ರವಾಸ

Latest Videos
Recommended Stories
Recommended image1
ಎಕ್ಸ್‌ಪೈರ್ ಆದ, ಅಡುಗೆಗೆ ಪದೇ ಪದೇ ಬಳಸಿದ ಎಣ್ಣೆ ಉಳಿತಾ? ಮರುಬಳಕೆಗೆ ಇಲ್ಲಿದೆ 7 ಸ್ಮಾರ್ಟ್ ಐಡಿಯಾ
Recommended image2
ಬಕ್ರೀದ್ ಸ್ಪೆಷಲ್: ಅಜ್ಜಿ-ಮುತ್ತಜ್ಜಿಯರ ಕಾಲದ ಸಾಂಪ್ರದಾಯಿಕ ಶೈಲಿಯ ಮಸಾಲಾ ಮಟನ್ ಫ್ರೈ
Recommended image3
How to grow Grapes: ಮನೆಯ ಪಾಟ್‌ನಲ್ಲೇ ದ್ರಾಕ್ಷಿ ಬೆಳೆಯಬಹುದು! ಈ ಟ್ರಿಕ್ಸ್‌ ಗೊತ್ತಿರಬೇಕು ಅಷ್ಟೇ!
Related Stories
Recommended image1
ಹಳೆಯ ಕೋಟೆಗಳಲ್ಲಿ ನಾಗರಹಾವಿನ ಕಾವಲು.. ತಲೆಮಾರುಗಳಿಂದ ಕಾಡುತ್ತಿರುವ ನಿಗೂಢ ಪ್ರಶ್ನೆಗೆ ಇಲ್ಲಿದೆ ಉತ್ತರ!
Recommended image2
ಜೀನ್ಸ್ ಪ್ಯಾಂಟ್‌ನ ಜಿಪ್‌ನಲ್ಲಿ ಸಣ್ಣ ರಂಧ್ರ ಏಕೆ ಇದೆ? ವಿಷ್ಯ ಬೇರೇನೇ ಇದೆ ಎಂದು Chatgpt ನೀಡಿತು ಅಚ್ಚರಿಯ ಉತ್ತರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved