ಟೀ ಮಾಡುವಾಗ ಕೊನೆಯಲ್ಲಿ ಈ ಎಲೆ ಸೇರಿಸಿ.. ಖಡಕ್ ಚಾಯ್ ರೆಡಿ
How to make perfect masala chai: ದಿನಾಲೂ ಒಂದೇ ತರಹದ ಚಹಾ ಕುಡಿದು ಬೇಜಾರಾಗಿದ್ಯಾ? ಹಾಗಾದ್ರೆ ಟೀ ಅಂಗಡಿ ಅಥವಾ ಡಾಬಾಗಳಲ್ಲಿ ಸಿಗೋ ತರಹದ್ದೇ ಸೂಪರ್ ಖಡಕ್ ಚಹಾವನ್ನು ಮನೆಯಲ್ಲೇ ಮಾಡೋಕೆ ಇಲ್ಲಿದೆ ಒಂದು ಸಿಂಪಲ್ ಸೀಕ್ರೆಟ್ ಟ್ರಿಕ್!
ಚಹಾದ ರುಚಿ ಮತ್ತು ಸುವಾಸನೆ ಎರಡೂ ಡಬ್ಬಲ್
ಕೈಗಾಡಿ, ಟೀ ಅಂಗಡಿ ಮತ್ತು ಡಾಬಾಗಳಲ್ಲಿ ಸಿಗುವ ಚಹಾ ಸೂಪರ್ ಖಡಕ್ ಆಗಿರುತ್ತದೆ. ನೀವು ಈಗ ಅದನ್ನೇ ಬಯಸಿದರೆ ಅಂತಹದ್ದೇ ಚಹಾವನ್ನು ಮನೆಯಲ್ಲಿಯೂ ತಯಾರಿಸಬಹುದು. ಹಾಗಾದರೆ ಬನ್ನಿ, ಇವತ್ತು ನಿಮಗೆ ಪರ್ಫೆಕ್ಟ್ ಚಹಾ ಮಾಡುವ ರೆಸಿಪಿಯನ್ನು ತಿಳಿಸಿಕೊಡುತ್ತೇವೆ. ಈ ರೆಸಿಪಿಯ ವಿಶೇಷತೆ ಏನೆಂದರೆ, ಚಹಾ ತಯಾರಾಗುವ ತೀರ ಕೊನೆಯಲ್ಲಿ ಒಂದು ಹಸಿರು ಎಲೆಯನ್ನು ಹಾಕಬೇಕು. ಇದು ಚಹಾದ ರುಚಿ ಮತ್ತು ಸುವಾಸನೆ ಎರಡನ್ನೂ ದುಪ್ಪಟ್ಟು ಮಾಡುತ್ತದೆ.
ಖಡಕ್ ಮಸಾಲಾ ಚಹಾ
ಭಾರತದಲ್ಲಿ ಚಹಾ ಕೇವಲ ಕುಡಿಯುವ ಪಾನೀಯವಲ್ಲ, ಅದೊಂದು ಎಮೋಷನ್. ಬೆಳಗ್ಗೆ ಇರಲಿ ಅಥವಾ ಸಂಜೆ ಇರಲಿ, ಯಾರಾದರೂ ಅತಿಥಿಗಳು ಬರಲಿ ಅಥವಾ ಗಂಭೀರವಾದ ಚರ್ಚೆ ನಡೆಯುತ್ತಿರಲಿ ಒಂದು ಕಪ್ ಖಡಕ್ ಚಹಾ ಪ್ರತಿಯೊಂದು ಸಂದರ್ಭವನ್ನು ವಿಶೇಷವಾಗಿಸುತ್ತದೆ. ಕೆಲವರು ಲೈಟ್ ಆಗಿ ಚಹಾ ಕುಡಿಯಲು ಇಷ್ಟಪಟ್ಟರೆ, ಇನ್ನು ಕೆಲವರಿಗೆ ಖಡಕ್ ಮಸಾಲಾ ಚಹಾ ಬೇಕಿರುತ್ತದೆ. ಮತ್ಯಾಕೆ ತಡ ಖಡಕ್ ಚಹಾ ಮಾಡುವುದು ಹೇಗೆಂದು ನೋಡೋಣ..
ಮೊದಲಿಗೆ ಹಾಲನ್ನು ಕುದಿಸಿ
ಚಹಾ ಮಾಡುವ ಪ್ರಕ್ರಿಯೆ ಹಾಲಿನಿಂದ ಆರಂಭವಾಗುತ್ತದೆ. ಇದಕ್ಕಾಗಿ ಮೊದಲಿಗೆ ಚಹಾ ಪಾತ್ರೆಯಲ್ಲಿ 2 ಕಪ್ ಹಾಲು ತಗೆದುಕೊಂಡು ಅದನ್ನು ಸಣ್ಣ ಅಥವಾ ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಾಯಲು ಇಡಿ. ಹಾಲನ್ನು ಮೊದಲೇ ಕಾಯಿಸುವುದರಿಂದ ಚಹಾದ ಟೆಕ್ಸ್ಚರ್ (ರಚನೆ) ತುಂಬಾ ಕೆನೆಯುಕ್ತ ಮತ್ತು ಅದ್ಭುತವಾಗಿ ಬರುತ್ತದೆ.
ಚಹಾಪುಡಿ ಹಾಕಲು ಸರಿಯಾದ ಸಮಯ
ಹಾಲಿನಲ್ಲಿ ಕುದಿ ಬರಲು ಆರಂಭಿಸಿದಾಗ, ಅದಕ್ಕೆ ಸುಮಾರು 2 ಸಣ್ಣ ಚಮಚ ಚಹಾಪುಡಿಯನ್ನು ಹಾಕಿ. ಇದನ್ನು ಸ್ವಲ್ಪ ಸಮಯದವರೆಗೆ ಕುದಿಯಲು ಬಿಡಿ, ಇದರಿಂದ ಚಹಾಪುಡಿಯ ಕಡು ಬಣ್ಣ ಹಾಲಿನಲ್ಲಿ ಸಂಪೂರ್ಣವಾಗಿ ಬೆರೆಯುತ್ತದೆ.
ಈಗ ಶುಂಠಿ ಹಾಕಿ
ಈಗ ಸುಮಾರು 1 ಇಂಚಿನಷ್ಟು ಶುಂಠಿ ತುಂಡನ್ನು ಜಜ್ಜಿ ಅಥವಾ ತುರಿದು ಹಾಕಿ ಮತ್ತು ಶುಂಠಿಯನ್ನು ಹಾಕಿ 2-3 ಕುದಿ ಬರುವವರೆಗೆ ಬೇಯಿಸಿ.
ಶುಂಠಿಯ ನಂತರ ಸಕ್ಕರೆ ಹಾಕಿ
ಶುಂಠಿ ಬೆಂದ ನಂತರವೇ ಚಹಾಕ್ಕೆ ನಿಮ್ಮ ರುಚಿಗೆ ತಕ್ಕಂತೆ ಸಕ್ಕರೆ ಹಾಕಿ. ನೆನಪಿರಲಿ, ಆರಂಭದಲ್ಲೇ ಸಕ್ಕರೆ ಹಾಕುವುದರಿಂದ ಚಹಾ ತೆಳುವಾಗಬಹುದು. ಆದ್ದರಿಂದ ಸಕ್ಕರೆಯನ್ನು ಯಾವಾಗಲೂ ಶುಂಠಿ ಬೆಂದ ನಂತರವೇ ಹಾಕಲಾಗುತ್ತದೆ.
ಕೊನೆಯಲ್ಲಿ ಹಾಕಿ ಈ ಸೀಕ್ರೆಟ್ ಎಲೆ
ಈಗ ಈ ರೆಸಿಪಿಯ ಅತ್ಯಂತ ಪ್ರಮುಖ ಮತ್ತು ಕೊನೆಯ ಹಂತ ಬರುತ್ತದೆ. ನಿಮ್ಮ ಚಹಾ ಸಂಪೂರ್ಣವಾಗಿ ಬೆಂದು, ಸೋಸಲು ಸಿದ್ಧವಾಗಿರುವಾಗ, ಗ್ಯಾಸ್ ಆಫ್ ಮಾಡುವ ತಕ್ಷಣ ಮುನ್ನ ಅದಕ್ಕೆ 6 ರಿಂದ 7 ತಾಜಾ ತುಳಸಿ ಎಲೆಗಳನ್ನು ಹರಿದು ಹಾಕಿ. ತುಳಸಿ ಎಲೆಗಳನ್ನು ಹಾಕಿದ ನಂತರ ಚಹಾವನ್ನು ಕೇವಲ 2 ರಿಂದ 3 ಬಾರಿ ಮಾತ್ರ ಕುದಿಸಿ. ಕುದ್ದ ನಂತರ ಗ್ಯಾಸ್ ಆಫ್ ಮಾಡಿ ಮತ್ತು ಚಹಾವನ್ನು ಕಪ್‌ಗೆ ಸೋಸಿಕೊಳ್ಳಿ. ಈ ಚಹಾದ ರುಚಿ ಸಾಮಾನ್ಯ ಚಹಾಕ್ಕಿಂತ 4 ಪಟ್ಟು ಹೆಚ್ಚು ಟೇಸ್ಟಿ ಆಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
