ಅಸಲಿ ಹಿಲ್ಸಾ ಮೀನನ್ನು ಗುರುತಿಸಲು, ಮುಖ್ಯವಾಗಿ ಅದರ ದೇಹದ ಆಕಾರ, ಹೊಳೆಯುವ ಬೆಳ್ಳಿಯ ಹುರುಪೆಗಳು, ಚಿಕ್ಕ ಕಣ್ಣುಗಳ, ವಿಶಿಷ್ಟ ಸುವಾಸನೆಯನ್ನು ಗಮನಿಸಬೇಕು.
Image credits: our own
Kannada
ದೇಹದ ರಚನೆ ಮತ್ತು ಆಕಾರ
ಭೂತಾಯಿ/ಮತ್ತಿ ಮೀನು ಹಿಲ್ಸಾ ಎಂದು ಮಾರಾಟ ಮಾಡಲಾಗುತ್ತದೆ. ಅಸಲಿ ಹಿಲ್ಸಾ ಮೀನಿನ ಹೊಟ್ಟೆಯ ಭಾಗವು ದಪ್ಪವಾಗಿದ್ದು, ತಲೆ ಮತ್ತು ಬಾಲದ ಕಡೆಗೆ ಕ್ರಮೇಣ ಚೂಪಾಗಿರುತ್ತದೆ.
Image credits: our own
Kannada
ಬೆನ್ನು ಮತ್ತು ಹೊಟ್ಟೆಯ ಆಕಾರ
ಅಸಲಿ ಹಿಲ್ಸಾ ಮೀನಿನ ಹೊಟ್ಟೆ ಮತ್ತು ಬೆನ್ನು ಎರಡೂ ಭಾಗಗಳು ಸಮಾನವಾಗಿ ಬಾಗಿರುತ್ತವೆ. ಆದರೆ ಮತ್ತಿ ಮೀನಿನ ಹೊಟ್ಟೆಯ ಭಾಗವು ಬೆನ್ನಿಗಿಂತ ಹೆಚ್ಚು ಚಪ್ಪಟೆಯಾಗಿರುತ್ತದೆ ಅಥವಾ ಹೆಚ್ಚು ಬಾಗಿರುತ್ತದೆ.
Image credits: our own
Kannada
ಕಣ್ಣಿನ ಗಾತ್ರ ಮತ್ತು ಬಣ್ಣ
ಅಸಲಿ ಹಿಲ್ಸಾ ಮೀನಿನ ಕಣ್ಣುಗಳು ಚಿಕ್ಕದಾಗಿರುತ್ತವೆ.ಕಣ್ಣಿನೊಳಗೆ ತಿಳಿ ಕೆಂಪು ಬಣ್ಣದ ಛಾಯೆ ಇರುತ್ತದೆ. ಭೂತಾಯಿ ಮೀನಿನ ಕಣ್ಣುಗಳು ದೊಡ್ಡದಾಗಿದ್ದು, ಕೆಂಪು ಛಾಯೆ ಇರುವುದಿಲ್ಲ.
Image credits: Getty
Kannada
ಸೂಕ್ಷ್ಮವಾದ ಹುರುಪೆಗಳು
ಅಸಲಿ ಹಿಲ್ಸಾ ಮೀನಿನ ಮೈಮೇಲಿನ ಬೆಳ್ಳಿಯ ಹುರುಪೆಗಳು ತುಂಬಾ ಸೂಕ್ಷ್ಮವಾಗಿದ್ದು, ಸುಲಭವಾಗಿ ಕಿತ್ತು ಬರುತ್ತವೆ. ನಕಲಿ ಹಿಲ್ಸಾ ಮೀನಿನ ಹುರುಪೆಗಳು ದೊಡ್ಡದಾಗಿ ಮತ್ತು ಒರಟಾಗಿರುತ್ತವೆ.
Image credits: our own
Kannada
ವಿಶಿಷ್ಟವಾದ ಸುವಾಸನೆ
ಹಸಿ ಹಿಲ್ಸಾ ಮೀನನ್ನು ಮೂಗಿನ ಬಳಿ ಹಿಡಿದರೆ, ಅದಕ್ಕೇ ವಿಶಿಷ್ಟವಾದ, ಸಿಹಿಯಾದ ಸಮುದ್ರದ ಸುವಾಸನೆ ಬರುತ್ತದೆ. ಚಂದನಾ, ಸಾರ್ಡಿನ್ ಅಥವಾ ಖೊಯ್ರಾ ಮೀನುಗಳಲ್ಲಿ ಹಿಲ್ಸಾದ ಈ ಪರಿಚಿತ ವಾಸನೆ ಇರುವುದಿಲ್ಲ.
Image credits: our own
Kannada
ಯಾವುದು ರುಚಿ
ಮಂಗಳೂರು ಸೇರಿ ಹಲವು ಭಾಗದಲ್ಲಿ ಭೂತಾಯಿ ಇಷ್ಟಪಡುತ್ತಾರೆ, ಬಂಗಾಳದಲ್ಲಿ ಹಿಲ್ಸಾ ಮೀನಿಗೆ ಮುಗಿ ಬೀಳುತ್ತಾರೆ. ಎರಡು ರುಚಿಕರ ಮೀನು.