MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Astrology
  • Festivals
  • ಹುಣಿಸೆ ಹಣ್ಣನ್ನು ಈ ರೀತಿ ಬಳಸಿದ್ರೆ ಧನ ಲಾಭವಾಗುತ್ತಂತೆ!

ಹುಣಿಸೆ ಹಣ್ಣನ್ನು ಈ ರೀತಿ ಬಳಸಿದ್ರೆ ಧನ ಲಾಭವಾಗುತ್ತಂತೆ!

ಹುಣಸೆಹಣ್ಣನ್ನು ಅಡುಗೆಯಲ್ಲಿ ಮಾತ್ರವಲ್ಲ, ಜ್ಯೋತಿಷ್ಯದಲ್ಲಿ, ಕೆಲವು ದೋಷಗಳನ್ನು ನಿವಾರಿಸಲು ಸಹ ಬಳಕೆ ಮಾಡಲಾಗುತ್ತದೆ. ಈ ಪರಿಹಾರಗಳಿಂದ ಹಣದ ಸಹಾಯ ಕೂಡ ದೊರೆಯುತ್ತದೆ, ಅಲ್ಲದೇ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಸಹ ಈ ಪರಿಹಾರಗಳನ್ನು ಬಳಸಿಕೊಳ್ಳಬಹುದು. ಅವುಗಳ ಬಗ್ಗೆ ತಿಳಿಯೋಣ.  

2 Min read
Author : Suvarna News
| Updated : Feb 28 2023, 11:16 AM IST
Share this Photo Gallery
  • FB
  • TW
  • Linkdin
  • Whatsapp
16

ಹುಣಸೆಹಣ್ಣನ್ನು (tamarind) ಅನೇಕ ಮನೆಕೆಲಸಗಳಲ್ಲಿ ಬಳಸಲಾಗುತ್ತದೆ, ಅದು ಆಹಾರದ ರುಚಿಯನ್ನು ಹೆಚ್ಚಿಸಲು ಅಥವಾ ಚರ್ಮವನ್ನು ಹೊಳೆಯುವಂತೆ ಮಾಡಲು ಸಹ ಇದನ್ನ ಬಳಕೆ ಮಾಡಲಾಗುತ್ತೆ. ಇದಲ್ಲದೆ, ಹುಣಸೆಹಣ್ಣಿಗೆ ಸಂಬಂಧಿಸಿದ ಬಾಲ್ಯದ ನೆನಪುಗಳು ಸಹ ತುಂಬಾ ಸವಿಯಾಗಿರುತ್ತೆ. ಹುಣಸೆಹಣ್ಣು ಅಡುಗೆಮನೆ ಅಥವಾ ಬಾಲ್ಯದ ನೆನಪುಗಳಿಗೆ ಸೀಮಿತವಾಗಿಲ್ಲ, ಜ್ಯೋತಿಷ್ಯದಲ್ಲಿ ಇದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಹೌದು, ಜ್ಯೋತಿಷ್ಯದಲ್ಲಿ ಹುಣಸೆ ಹಣ್ಣಿನ ಅನೇಕ ಪರಿಹಾರಗಳಿವೆ, ಈ ಉಪಾಯದಿಂದ ನೀವು ಹಣ ಗಳಿಸುತ್ತೀರಿ, ಸಂಪತ್ತನ್ನು ಹೆಚ್ಚಿಸುತ್ತೀರಿ ಮತ್ತು ಆರ್ಥಿಕ ಸಮಸ್ಯೆಗಳನ್ನು (money problem)ತೊಡೆದುಹಾಕುತ್ತೀರಿ. ಬನ್ನಿ ಅವುಗಳ ಬಗ್ಗೆ ತಿಳಿಯೋಣ. 

36

ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚುತ್ತೆ: ನಿಮ್ಮ ಮಗು ಅಧ್ಯಯನದಲ್ಲಿ ದುರ್ಬಲವಾಗಿದ್ದರೆ (weak in education) ಅಥವಾ ನೀವೇ ವಿದ್ಯಾರ್ಥಿಯಾಗಿದ್ದರೆ, ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯಲು ಮತ್ತು ಉತ್ತಮಗೊಳ್ಳಲು ಗುರುವಾರ ನಿಮ್ಮ ಪುಸ್ತಕದಲ್ಲಿ ಹುಣಸೆ ಎಲೆಯನ್ನು ಇರಿಸಿ. ಇದನ್ನು ಮಾಡುವುದರಿಂದ, ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಾಗುವುದು ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತೆ. ಅಲ್ಲದೆ, ಇಷ್ಟಪಟ್ಟ ಕೆಲಸವನ್ನು ಪಡೆಯಲು ಈ ಪರಿಹಾರವು ಪರಿಣಾಮಕಾರಿ .
 

46

ದೃಷ್ಟಿ ಬೀಳದಂತೆ: ನಿಮ್ಮ ಮಗು ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದರೆ, ಅಥವಾ ಬಿದ್ದಿದೆ ಎಂದು ನಿಮಗೆ ಅನಿಸಿದರೆ, ನೀವು ಕೆಲವು ಹುಣಸೆ ತುಂಡುಗಳನ್ನು ತೆಗೆದುಕೊಂಡು ಕುಟುಂಬದಲ್ಲಿ ಯಾರ ಮೇಲೆ ದೃಷ್ಟಿಯಾಗಿದೆ ಅವರಿಗೆ ಮೂರು ಸುತ್ತು ಸುತ್ತಬೇಕು. ನಂತರ ಹುಣಸೆ ತುಂಡುಗಳನ್ನು ಸುಟ್ಟು ಮನೆಯಿಂದ ಹೊರಹಾಕಬೇಕು. ಇದು ದೃಷ್ಟಿ ದೋಷವನ್ನು ತೆಗೆದುಹಾಕುತ್ತದೆ ಮತ್ತು ಮನೆಯ ನಕಾರಾತ್ಮಕತೆಯನ್ನು ಸಹ ಸುಲಭವಾಗಿ ತೆಗೆದುಹಾಕುತ್ತದೆ. 

56

ವೈವಾಹಿಕ ಜೀವನಕ್ಕಾಗಿ: ನಿಮ್ಮ ವೈವಾಹಿಕ ಜೀವನವು (married life) ದುಃಖದಿಂದ ತುಂಬಿದ್ದರೆ ಅಥವಾ ಗಂಡ ಮತ್ತು ಹೆಂಡತಿಯ ನಡುವಿನ ಜಗಳ ತುಂಬಿದ್ದರೆ, ನೀವು ಶನಿವಾರ 12 ಹುಣಸೆ ಕಾಳುಗಳನ್ನು ತೆಗೆದುಕೊಂಡು ನಿಮ್ಮ ಮಲಗುವ ಕೋಣೆಯಲ್ಲಿ ಹಾಸಿಗೆಯ ಕೆಳಗೆ ಇಡಬೇಕು ಮತ್ತು ಮರುದಿನ ಭಾನುವಾರ ಬೆಳಿಗ್ಗೆ ಅರಳಿ ಮರದ ಕೆಳಗೆ ಹೂಳಬೇಕು. ಇದರಿಂದ ವೈವಾಹಿಕ ಜೀವನದ ಸಮಸ್ಯೆಗಳು ನಿವಾರಣೆಯಾಗುತ್ತೆ. 

66

ಹಣದ ನಷ್ಟ, ಅಧಿಕ ಖರ್ಚು, ಸಾಲದ ಹೊರೆ , ಕಳೆದುಹೋದ ಹಣ, ಸಿಕ್ಕಿಹಾಕಿಕೊಂಡ ಹಣ, ಮನೆಯಲ್ಲಿ ಹಣದ ಕೊರತೆ, ಹೀಗೆ ಹಣಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳನ್ನು (financial problem) ನೀವು ಹೊಂದಿದ್ದರೆ ನೀವು 7 ಹುಣಸೆ ಎಲೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ಕುಂಕುಮದೊಂದಿಗೆ ಸ್ವಸ್ತಿಕವನ್ನು ಮಾಡಬೇಕು. ಅದರ ಮೇಲೆ ಒಂದು ರೂಪಾಯಿಯ ನಾಣ್ಯಗಳನ್ನು ಇಟ್ಟು, ಅವುಗಳನ್ನು ಜೊತೆಯಾಗಿ ತಿಜೋರಿಯಲ್ಲಿ ಇಡಬೇಕು.  

About the Author

SN
Suvarna News
ಹಬ್ಬ
ಮದುವೆ

Latest Videos
Recommended Stories
Recommended image1
Sri Krishna Janmashtami: ಜನ್ಮಾಷ್ಟಮಿ ರಾತ್ರಿ ನವಿಲುಗರಿಯ ಈ ಉಪಾಯ ಮಾಡಿ ಅದೃಷ್ಟವೇ ಬದಲಾಗುತ್ತೆ
Recommended image2
ಕೃಷ್ಣ ಜನ್ಮಾಷ್ಟಮಿಗೆ ಮುನ್ನ ಈ ವಸ್ತು ಮನೆಗೆ ತಂದ್ರೆ ಮಾತ್ರ ಪೂಜೆ ಸಂಪೂರ್ಣ
Recommended image3
Rahu-Kuja Transit: ರಾಹು-ಕುಜ ಸಂಚಾರ + ಸಮಸಪ್ತಕ ಯೋಗ, ಈ 4 ರಾಶಿಗೆ 17 ದಿನದಲ್ಲಿ ಗುಡ್ ನ್ಯೂಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved