Rahu-Kuja Transit: ರಾಹು-ಕುಜ ಸಂಚಾರ + ಸಮಸಪ್ತಕ ಯೋಗ, ಈ 4 ರಾಶಿಗೆ 17 ದಿನದಲ್ಲಿ ಗುಡ್ ನ್ಯೂಸ್
ಜ್ಯೋತಿಷ್ಯದ ಪ್ರಕಾರ, ಕುಜ ಗ್ರಹವು ಸೆಪ್ಟೆಂಬರ್ 18ರವರೆಗೆ ಮಿಥುನ ರಾಶಿಯಲ್ಲಿ ಇರುತ್ತಾನೆ. ರಾಹು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕುಜ ಮತ್ತು ರಾಹು ಪರಸ್ಪರ 180 ಡಿಗ್ರಿ ದೂರದಲ್ಲಿರುವುದರಿಂದ 'ಸಮಸಪ್ತಕ ಯೋಗ' ಉಂಟಾಗಿದೆ. ಇದು 4 ರಾಶಿಗಳಿಗೆ ಅದೃಷ್ಟ ತರಲಿದೆ.

ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಕುಜ. ಈ ಸಂಚಾರದಿಂದ ನಿಮ್ಮ ಧೈರ್ಯ ಹೆಚ್ಚಲಿದೆ. ಬಾಕಿ ಉಳಿದಿದ್ದ ಕೆಲಸಗಳನ್ನು ನೀವು ಪೂರ್ಣಗೊಳಿಸುತ್ತೀರಿ. ಉದ್ಯೋಗದಲ್ಲಿ ನಿಮ್ಮ ನಾಯಕತ್ವದ ಗುಣ ಬೆಳೆಯುತ್ತದೆ. ಹೊಸ ಜವಾಬ್ದಾರಿಗಳು ಸಿಗಬಹುದು. ವ್ಯಾಪಾರಿಗಳಿಗೆ ಲಾಭವಾಗಲಿದೆ.
ಮಿಥುನ ರಾಶಿ
ಕುಜ ಗ್ರಹವು ಸದ್ಯ ಮಿಥುನ ರಾಶಿಯಲ್ಲೇ ಸಂಚರಿಸುತ್ತಿದ್ದಾನೆ. ಹಾಗಾಗಿ ಈ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿದೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಉದ್ಯೋಗದಲ್ಲಿ ಬಡ್ತಿ, ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಲಾಭವೂ ಉಂಟಾಗಲಿದೆ. ಆದರೆ, ಅವಸರದಲ್ಲಿ ದೊಡ್ಡ ಹೂಡಿಕೆ ಮಾಡಬೇಡಿ.
ತುಲಾ ರಾಶಿ
ತುಲಾ ರಾಶಿಯವರು ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ಕುಜ-ರಾಹು ಸಂಯೋಗವು ಹಣಕಾಸಿನ ವಿಚಾರದಲ್ಲಿ ಸಕಾರಾತ್ಮಕ ಬದಲಾವಣೆ ತರಲಿದೆ. ವ್ಯಾಪಾರಿಗಳಿಗೆ ಹಳೆಯ ಸಂಪರ್ಕಗಳಿಂದ ಲಾಭವಾಗಲಿದೆ. ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ ಜೊತೆಗೆ ಹಣಕಾಸಿನ ಅನುಕೂಲ ಸಿಗಲಿದೆ. ಆದರೆ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಿ.
ಕುಂಭ ರಾಶಿ
ಕುಂಭ ರಾಶಿಯವರ ಮೇಲೆ ಅಂಗಾರಕನ ಪ್ರಭಾವ ಇರುತ್ತದೆ. ಇದು ನಿಮ್ಮ ಕಠಿಣ ಪರಿಶ್ರಮ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗ, ವ್ಯಾಪಾರದಲ್ಲಿ ಹೊಸ ಅವಕಾಶಗಳು ಸಿಗಬಹುದು. ಆಕಸ್ಮಿಕ ಧನಲಾಭದ ಯೋಗವಿದೆ. ವ್ಯಾಪಾರಿಗಳು ವ್ಯಾಪಾರ ವಿಸ್ತರಣೆಗೆ ಅವಕಾಶ ಪಡೆಯಬಹುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.