ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಗಂಡನ ಮನೆಗೆ ಅದೃಷ್ಟದ ದೇವತೆ
Lucky Birth Dates: ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ತಮ್ಮ ಗಂಡನ ಮನೆಗೆ ಅದೃಷ್ಟ ಮತ್ತು ಸಂಪತ್ತನ್ನು ತರುತ್ತಾರೆ. ಕುಟುಂಬದ ಆರ್ಥಿಕ ಸ್ಥಿತಿ ಮತ್ತು ಗೌರವವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಸಂಖ್ಯಾಶಾಸ್ತ್ರ
ಭಾರತೀಯ ಸಂಪ್ರದಾಯದಂತೆ, ಹುಡುಗಿ ಗಂಡನ ಮನೆಗೆ ಅದೃಷ್ಟ ತರುತ್ತಾಳೆ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಗಂಡನ ಕುಟುಂಬಕ್ಕೆ ಅದೃಷ್ಟ ತರುತ್ತಾರೆ. ಇವರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ. ಇವರು ಬರುವ ಮನೆಯಲ್ಲಿ ಸಂಪತ್ತಿನ ಕೊರತೆಯೇ ಇರಲ್ಲ.
ಸಂಖ್ಯೆ 1
ಯಾವುದೇ ತಿಂಗಳ 1, 10, 19, 28 ರಂದು ಜನಿಸಿದವರು ಸಂಖ್ಯೆ 1ಕ್ಕೆ ಸೇರುತ್ತಾರೆ. ಇವರಿಗೆ ನಾಯಕತ್ವದ ಗುಣಗಳಿರುತ್ತವೆ. ಮದುವೆ ನಂತರ ಗಂಡನ ಮನೆಯ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಿ, ಪತಿಯ ಬೆಳವಣಿಗೆಗೆ ಸಹಕರಿಸುತ್ತಾರೆ. ಈ ಮೂಲಾಂಕದ ಮಹಿಳೆಯರು ಕುಟುಂಬ ಆರ್ಥಿಕವಾಗಿ ಉತ್ತಮ ಮಟ್ಟ ತಲುಪಲು ಸಹಾಯ ಮಾಡುತ್ತಾರೆ.
ಸಂಖ್ಯೆ 2
ತಿಂಗಳ 2, 11, 20, 29 ರಂದು ಜನಿಸಿದವರು ಸೌಮ್ಯ ಸ್ವಭಾವದವರು. ಕುಟುಂಬದಲ್ಲಿ ಶಾಂತಿ, ಸಂತೋಷ ತರುತ್ತಾರೆ. ಹಾಗೆಯೇ 3, 12, 21, 30 ರಂದು ಜನಿಸಿದವರ ಮೇಲೆ ಗುರುಗ್ರಹದ ಪ್ರಭಾವವಿರುತ್ತದೆ. ಇವರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತೆ ಮತ್ತು ಕುಟುಂಬದ ಗೌರವ, ಖ್ಯಾತಿ ಹೆಚ್ಚಾಗುತ್ತದೆ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ಸಂಖ್ಯೆ 6
ತಿಂಗಳ 6, 15, 24 ರಂದು ಜನಿಸಿದವರ ಮೇಲೆ ಶುಕ್ರನ ಪ್ರಭಾವವಿರುತ್ತದೆ. ಇವರು ಕಾಲಿಟ್ಟ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ. ಹಾಗೆಯೇ 9, 18, 27 ರಂದು ಜನಿಸಿದವರು ಧೈರ್ಯವಂತರು. ಇವರು ಕುಟುಂಬಕ್ಕೆ ಆರ್ಥಿಕ ಸ್ಥಿರತೆ ತರುತ್ತಾರೆ. ಈ ಮೂಲಾಂಕದ ಮಹಿಳೆಯರು ಪ್ರವೇಶಿಸುವ ಮನೆಯಲ್ಲಿ ಭಾವನಾತ್ಮಕ ಸಂತೋಷ ಮತ್ತು ಸಂತೋಷ ಹೆಚ್ಚಾಗುತ್ತದೆ.
ಇದನ್ನೂ ಓದಿ: ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ
ಸಂಖ್ಯೆ 9
ಯಾವುದೇ ತಿಂಗಳ 9, 18 ಮತ್ತು 27 ನೇ ತಾರೀಖಿನಂದು ಜನಿಸಿದವರು 9 ನೇ ಸಂಖ್ಯೆಗೆ ಸೇರುತ್ತಾರೆ. ಈ ಹುಡುಗಿಯರು ಮಂಗಳ ಗ್ರಹದ ಪ್ರಭಾವಕ್ಕೆ ಒಳಗಾಗುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ತುಂಬಾ ಧೈರ್ಯಶಾಲಿಗಳಾಗಿದ್ದು, ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಕುಟುಂಬದ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅತ್ತೆ-ಮಾವನ ಪರವಾಗಿ ನಿಂತು ಕುಟುಂಬದ ಗೌರವ ಕಾಪಾಡುತ್ತಾರೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಇದನ್ನೂ ಓದಿ: ಈ ದಿನಾಂಕದಂದು ಜನಿಸಿದ ಹುಡುಗಿಯರು ಶಿವನ ಪರಮ ಭಕ್ತರು, ಮಹಾದೇವನ ವಿಶೇಷ ಅನುಗ್ರಹ ಅವರ ಮೇಲೆ

