ಈ ಸಂಖ್ಯೆಯಲ್ಲಿ ಹುಟ್ಟಿದವರಿಗೆ ದೈಹಿಕ ಸಂಬಂಧ ಮೇಲೆ ಇಂಟರೆಸ್ಟ್ ಜಾಸ್ತಿ
Numerology and Physical Relationships ಸಂಖ್ಯಾಶಾಸ್ತ್ರ ಪ್ರಕಾರ, ಪ್ರತಿಯೊಬ್ಬರ ಜೀವನ ಸಂಖ್ಯೆಯು ಅವರ ಪ್ರೀತಿ, ಆಕರ್ಷಣೆ, ದೈಹಿಕ ಇಚ್ಛೆ ಹಾಗೂ ಸಂಬಂಧದ ತೀವ್ರತೆಯನ್ನು ಸೂಚಿಸುತ್ತದೆ. ಕೆಲವು ಸಂಖ್ಯೆಗಳಿ ಇದರಲ್ಲಿ ಹೆಚ್ಚು ಪ್ಯಾಷನ್ ಇರುತ್ತದೆ.

ಲೈಫ್ ಪಾಥ್ 5
ಲೈಫ್ ಪಾಥ್ 5 ಅಂದರೆ ತಿಂಗಳ 5, 14, 23 ರಂದು ಹುಟ್ಟಿದವರಿಗೆ ಪ್ಯಾಷನ್ & ತೀವ್ರ ಆಕರ್ಷಣೆ ಜಾಸ್ತಿ. ತುಂಬಾ ಆಕರ್ಷಕ ಮತ್ತು ಮ್ಯಾಗ್ನೆಟಿಕ್ ವ್ಯಕ್ತಿತ್ವವನ್ನು ಹೊಂದಿರುವವರು. ಪ್ರೀತಿ ಮತ್ತು ದೈಹಿಕ ಸಂಬಂಧಗಳಲ್ಲಿ ತೀವ್ರ ಉತ್ಸಾಹ, ಹೊಸ ಅನುಭವಗಳಿಗೆ ಸದಾ ಸಿದ್ಧ ಇರುತ್ತಾರೆ. ಬೇಗನೆ ಸಂಬಂಧದಲ್ಲಿ ಬೋರ್ ಆಗುತ್ತಾರೆ.
ಸಂಖ್ಯೆ 1
ಸಂಖ್ಯೆ 1 — ಪ್ರೀತಿಯಲ್ಲಿ ನಾಯಕರು. ಯಾವುದೇ ತಿಂಗಳ 1, 10, 19, 28ರಂದು ಜನಿಸಿದವರು ಈ ರಾಡಿಕ್ಸ್ ಸಂಖ್ಯೆಗೆ ಬರುತ್ತಾರೆ. ಇವರಿಗೆ ಪಡೆಯುವ ಆಸೆ ಹೆಚ್ಚು. ಇವರು ತುಂಬಾ ಶಕ್ತಿಯುತ, ಪ್ಯಾಷನೇಟ್ ಲವರ್. ಆರಂಭದಲ್ಲಿ ಸಂಬಂಧ ಬದ್ಧತೆ ಕಷ್ಟವಾಗಬಹುದು. ಕೆಲವೊಮ್ಮೆ ಹಠಮಾರಿ, ಅಹಂಕಾರಿ ಮತ್ತು ಅತಿಯಾದ ನಿಯಂತ್ರಣ (dominating) ಸ್ವಭಾವವನ್ನು ತೋರಬಹುದು. ಸ್ವತಂತ್ರ ಮನಸ್ಥಿತಿ ಹೆಚ್ಚು
ಸಂಖ್ಯೆ 6
ಸಂಖ್ಯೆ 6 — ಮಮತೆ & ಕುಟುಂಬದ ಮೇಲೆ ಪ್ರೀತಿ ಜಾಸ್ತಿ, ಪ್ರೀತಿ, ಮದುವೆ, ಕುಟುಂಬಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಇವರಿಗೆ ಆಳವಾದ ಭಾವನಾತ್ಮಕ ಸಂಪರ್ಕ ಬೇಕು. ಕಾಳಜಿ, ನಂಬಿಕೆ, ನಿಷ್ಠೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಸಂಖ್ಯಾಶಾಸ್ತ್ರದ ಪ್ರಕಾರ 6 ನೇ ಸಂಖ್ಯೆ ಹೊಂದಿರುವ ಜನರು ಗಮನಾರ್ಹವಾದ ಮೋಡಿ ಹೊಂದಿರುತ್ತಾರೆ. ಶುಕ್ರ ಗ್ರಹದ ಪ್ರಭಾವದಡಿಯಲ್ಲಿ, ಈ ವ್ಯಕ್ತಿಗಳು ಸುಂದರ ಮತ್ತು ಆಕರ್ಷಕವಾಗಿರುವುದರಿಂದ ಇತರರತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ. ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದವರು 6 ರ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ.
ಜೋಡಿ
ಅತ್ಯುತ್ತಮ ಜೋಡಿ ಹೊಂದಾಣಿಕೆ 1 & 8 — ವಿರುದ್ಧ ಗುಣಗಳ ಆಕರ್ಷಣೆ, 5 & 1 ಅಥವಾ 6 — ಪ್ಯಾಷನ್ + ಸ್ಥಿರತೆ, 6 & 9 — ಕುಟುಂಬ & ದೀರ್ಘಕಾಲದ ಬಂಧ