MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಗಂಡನ ಮೇಲೆ ಸವಾರಿ ಮಾಡುವ ಹೆಂಡ್ತಿಯ ರಾಶಿ ಯಾವುದು? ಇವರ ಮುಂದೆ ಗಂಡಂದಿರು ಟುಸ್ ಪಟಾಕಿ

ಗಂಡನ ಮೇಲೆ ಸವಾರಿ ಮಾಡುವ ಹೆಂಡ್ತಿಯ ರಾಶಿ ಯಾವುದು? ಇವರ ಮುಂದೆ ಗಂಡಂದಿರು ಟುಸ್ ಪಟಾಕಿ

ಕೆಲವು ಮನೆಗಳಲ್ಲಿ ಹೆಂಡತಿಯದ್ದೇ ದರ್ಬಾರು. ಸಂಸಾರದ ಜವಾಬ್ದಾರಿ ಹೊರುವ ಇವರು, ಗಂಡನನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತಾರೆ. ಇದರ ಹಿಂದೆ ನವಗ್ರಹಗಳ ಪ್ರಭಾವವಿದೆ ಎನ್ನುತ್ತೆ ಜ್ಯೋತಿಷ್ಯ. ಹಾಗಾದ್ರೆ ಗಂಡನನ್ನೇ ಆಳುವ ಆ ರಾಶಿಯ ಹೆಣ್ಣುಮಕ್ಕಳು ಯಾರು ಗೊತ್ತಾ?

2 Min read
Author : Mahmad Rafik
| Updated : Jun 29 2026, 01:51 PM IST
Share this Photo Gallery
  • FB
  • TW
  • Linkdin
  • Whatsapp
17
ಗಂಡನನ್ನು ಕಂಟ್ರೋಲ್‌ನಲ್ಲಿಡುವ 6 ರಾಶಿಯ ಮಹಿಳೆಯರು!
Image Credit : Getty

ಗಂಡನನ್ನು ಕಂಟ್ರೋಲ್‌ನಲ್ಲಿಡುವ 6 ರಾಶಿಯ ಮಹಿಳೆಯರು!

ಸಂಸಾರ ಅನ್ನೋದು ಎರಡು ಚಕ್ರಗಳು ಸೇರಿ ಸಾಗುವ ಸುಂದರ ವಾಹನ. ಇದರಲ್ಲಿ ಗಂಡ-ಹೆಂಡತಿ ನಡುವಿನ ಮುನಿಸು, ಅಧಿಕಾರದ ಪೈಪೋಟಿಗಳು ಸಹಜ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಬಿಟ್ಟುಕೊಡದ ಗುಣ ಮತ್ತು ಗಂಡನನ್ನು ತಮ್ಮ ದಾರಿಗೆ ತರುವ ನಾಯಕತ್ವ ಸ್ವಭಾವತಃ ಹೆಚ್ಚು. ಪ್ರೀತಿ ಮತ್ತು ಅಧಿಕಾರದಿಂದ ಗಂಡನನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಆ 6 ರಾಶಿಯ ಮಹಿಳೆಯರ ಬಗ್ಗೆ ಇಲ್ಲಿದೆ ನೋಡಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
1. ಮೇಷ (Aries) - ದಿಟ್ಟ ರಾಣಿ
Image Credit : SOCIAL MEDIA

1. ಮೇಷ (Aries) - ದಿಟ್ಟ ರಾಣಿ

ಮಂಗಳನ ಪ್ರಭಾವದಲ್ಲಿ ಜನಿಸಿದ ಮೇಷ ರಾಶಿಯ ಮಹಿಳೆಯರು ಯಾವುದಕ್ಕೂ ಅಂಜದ ಧೈರ್ಯವಂತರು. ಗಂಡ ತಪ್ಪು ಮಾಡಿದರೆ, ಮುಖಕ್ಕೆ ಹೊಡೆದಂತೆ ನೇರವಾಗಿ ನ್ಯಾಯ ಕೇಳುತ್ತಾರೆ. ಇವರ ಮುಂದೆ ಬಗ್ಗಿದರೆ ಮಾತ್ರ ಗಂಡಂದಿರಿಗೆ ಪಾರಾಗಲು ಸಾಧ್ಯ. ಮೇಷ ರಾಶಿಯ ಹೆಂಡತಿಯೊಂದಿಗೆ ವಾದಿಸುವ ಬದಲು, ಅವರ ಕೋಪದ ಹಿಂದಿನ ನ್ಯಾಯವನ್ನು ಅರ್ಥಮಾಡಿಕೊಂಡರೆ ಸಂಸಾರದಲ್ಲಿ ಶಾಂತಿ ನೆಲೆಸುತ್ತದೆ.

Related Articles

Related image1
ಜೂನ್ 29 ರಿಂದ ಜುಲೈ 5, 2026 ರವರೆಗೆ ಹಂಸ ರಾಜಯೋಗ, ಮೇಷ ಮತ್ತು ಕರ್ಕ ರಾಶಿ ಸೇರಿದಂತೆ 5 ರಾಶಿಗೆ ಲಾಭ
Related image2
ಜುಲೈ ಆರಂಭದಲ್ಲಿ ಅಶುಭ 'ವ್ಯತಿಪತ್ ಯೋಗ' ಸಂಭವ, 'ಈ' 5 ರಾಶಿಗಳು ಎಚ್ಚರಿಕೆ ವಹಿಸಬೇಕು
37
ಸಿಂಹ (Leo) - ಗಂಭೀರ ನಾಯಕಿ
Image Credit : SOCIAL MEDIA

ಸಿಂಹ (Leo) - ಗಂಭೀರ ನಾಯಕಿ

ಸೂರ್ಯನ ಆಳ್ವಿಕೆಗೆ ಸೇರಿದ ಸಿಂಹ ರಾಶಿಯ ಮಹಿಳೆಯರು, ಸಂಸಾರವನ್ನು ಮುನ್ನಡೆಸುವುದರಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾರೆ. ಗಂಡ ತನಗೆ ಅಧೀನನಾಗಿರಬೇಕು ಎಂಬ ನಿರೀಕ್ಷೆ ಇವರಲ್ಲಿ ಹೆಚ್ಚು. ತಪ್ಪು ನಡೆದಾಗ, ಇವರ ಸಿಂಹ ಗರ್ಜನೆ ಗಂಡನನ್ನು ಅಲುಗಾಡಿಸಿಬಿಡುತ್ತದೆ. ಇವರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಗಂಡ ನಡೆದುಕೊಂಡರೆ, ಇವರಿಗಿಂತ ಉತ್ತಮ, ಪ್ರೀತಿಯುಳ್ಳ ಮಾರ್ಗದರ್ಶಕಿ ಸಿಗಲಾರರು.
47
ವೃಶ್ಚಿಕ (Scorpio) - ನಿಗೂಢ ಚಂಡಮಾರುತ
Image Credit : OTHERS

ವೃಶ್ಚಿಕ (Scorpio) - ನಿಗೂಢ ಚಂಡಮಾರುತ

ವೃಶ್ಚಿಕ ರಾಶಿಯ ಮಹಿಳೆಯರು ಶಾಂತವಾಗಿ ಕಂಡರೂ, ಗಂಡನ ಎಲ್ಲಾ ರಹಸ್ಯಗಳನ್ನು ಪತ್ತೆ ಹಚ್ಚಿರುತ್ತಾರೆ. ಗಂಡ ದಾರಿ ತಪ್ಪುತ್ತಿದ್ದಾನೆ ಎಂದು ತಿಳಿದರೆ, ಮಾತಿನ ಬಾಣಗಳಿಂದ ಅವನನ್ನು ಧ್ವಂಸ ಮಾಡಿಬಿಡುತ್ತಾರೆ. ಇವರ ಕೋಪವನ್ನು ಎದುರಿಸುವುದು ಗಂಡಂದಿರಿಗೆ ದೊಡ್ಡ ಸವಾಲು. ವೃಶ್ಚಿಕ ರಾಶಿಯ ಹೆಂಡತಿಯ ಬಳಿ ಏನನ್ನೂ ಮುಚ್ಚಿಡದೆ ಸತ್ಯವಂತರಾಗಿರುವುದೇ ಗಂಡನ ನೆಮ್ಮದಿಗೆ ಇರುವ ಏಕೈಕ ದಾರಿ.
57
ಮಕರ (Capricorn) - ಶಿಸ್ತಿನ ಶಿಖರ
Image Credit : SOCIAL MEDIA

ಮಕರ (Capricorn) - ಶಿಸ್ತಿನ ಶಿಖರ

ಶನಿ ದೇವನ ಪ್ರಭಾವದಲ್ಲಿ ಜನಿಸಿದ ಮಕರ ರಾಶಿಯ ಮಹಿಳೆಯರು, ಶಿಸ್ತು ಮತ್ತು ಕರ್ತವ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಗಂಡ ಬೇಜವಾಬ್ದಾರಿಯಿಂದ ಇದ್ದರೆ, ಸ್ವಲ್ಪವೂ ಯೋಚಿಸದೆ ಕಟ್ಟುನಿಟ್ಟಾದ ಟೀಚರ್‌ನಂತೆ ತರಾಟೆಗೆ ತೆಗೆದುಕೊಳ್ಳುತ್ತಾರೆ. ಇವರ ವಾಸ್ತವಿಕ ಮಾತುಗಳು ಗಂಡನನ್ನು ಯೋಚಿಸುವಂತೆ ಮಾಡುತ್ತದೆ. ಗಂಡ ತನ್ನ ಕರ್ತವ್ಯಗಳನ್ನು ಸರಿಯಾಗಿ ಮಾಡಿದರೆ, ಮಕರ ರಾಶಿಯ ಮಹಿಳೆಯರು ಅವರ ಪ್ರಗತಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ.
67
ಮಿಥುನ (Gemini) - ಮಾತಿನ ಮಲ್ಲಿ
Image Credit : OTHERS

ಮಿಥುನ (Gemini) - ಮಾತಿನ ಮಲ್ಲಿ

ಬುಧನ ಕಾರಕತ್ವ ಪಡೆದ ಮಿಥುನ ರಾಶಿಯ ಮಹಿಳೆಯರು, ಮಾತಿನ ಚತುರರು. ಗಂಡನೊಂದಿಗಿನ ಜಗಳದಲ್ಲಿ, ತಮ್ಮ ಚಾಣಾಕ್ಷ ಮಾತಿನಿಂದ ಗಂಡನ ಬಾಯಿ ಮುಚ್ಚಿಸಿಬಿಡುತ್ತಾರೆ. ದೈಹಿಕ ಬಲಕ್ಕಿಂತ ಇವರ ಮಾತಿನ ಬಲವೇ ಗಂಡನನ್ನು ಸುಸ್ತು ಮಾಡಲು ಸಾಕು. ಇವರೊಂದಿಗೆ ವಾದ ಮಾಡುವುದನ್ನು ಬಿಟ್ಟು, ಮುಗುಳ್ನಗುತ್ತಾ ಮುಂದೆ ಸಾಗುವುದೇ ಗಂಡಂದಿರಿಗೆ ಬುದ್ಧಿವಂತಿಕೆ.

ಇದನ್ನೂ ಓದಿ: ಅಪರೂಪದ ಮೂರು ಗ್ರಹಗಳ ಸಂಯೋಗ, 5 ರಾಶಿಗಳಿಗೆ ಸುವರ್ಣಯುಗ, ಪ್ರತಿ ಕೆಲಸದಲ್ಲೂ ಯಶಸ್ಸು!

77
ಕರ್ಕಾಟಕ (Cancer) - ಪ್ರೀತಿಯ ಹೋರಾಟಗಾರ್ತಿ
Image Credit : OTHERS

ಕರ್ಕಾಟಕ (Cancer) - ಪ್ರೀತಿಯ ಹೋರಾಟಗಾರ್ತಿ

ಚಂದ್ರನ ಪ್ರಭಾವದಲ್ಲಿರುವ ಕರ್ಕಾಟಕ ರಾಶಿಯ ಮಹಿಳೆಯರು ತುಂಬಾ ಪ್ರೀತಿಯುಳ್ಳವರು. ಆದರೆ, ಗಂಡ ತಮ್ಮ ಮೇಲೆ ಕಾಳಜಿ ತೋರಿಸದಿದ್ದಾಗ ಕೋಪದ ತುತ್ತತುದಿಗೇರುತ್ತಾರೆ. ಇವರ ಕೋಪ ಜೋರಾಗಿರುವುದಿಲ್ಲ, ಆದರೆ ಇವರ ಭಾವನಾತ್ಮಕ ಮಾತುಗಳು ಗಂಡನ ಮನಸ್ಸನ್ನು ಅಲುಗಾಡಿಸಿಬಿಡುತ್ತವೆ. ಕರ್ಕಾಟಕ ರಾಶಿಯ ಹೆಂಡತಿಯ ಪ್ರೀತಿಯ ಹೋರಾಟವನ್ನು ಅರ್ಥಮಾಡಿಕೊಂಡು, ಸ್ವಲ್ಪ ಅಪ್ಪುಗೆ ನೀಡಿದರೆ ಸಾಕು, ಕೋಪ ಮಂಜಿನಂತೆ ಕರಗಿಹೋಗುತ್ತದೆ.

ಇದನ್ನೂ ಓದಿ: ಶನಿ ಕೃಪೆಯಿಂದ 3 ರಾಶಿಗಳಿಗೆ ವಿನ್ನಿಂಗ್ ಶಾಟ್; ಇನ್ಮುಂದೆ ನಿಮ್ಮ ಬಾಳಲ್ಲಿ ದುಡ್ಡಿನ ಮಳೆ!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಾಶಿ
ಜ್ಯೋತಿಷ್ಯ
ಪತ್ನಿ
ಗಂಡ

Latest Videos
Recommended Stories
Recommended image1
ಜ್ಯೇಷ್ಠ ಹುಣ್ಣಿಮೆಯ ದಿನ ಈ ಕೆಲಸ ಮಾಡಿದ್ರೆ ಧನ-ಸಂಪತ್ತು ದುಪ್ಪಟ್ಟು
Recommended image2
ಜುಲೈನಲ್ಲಿ ಶನಿ-ಗುರುನಿಂದ 3 ರಾಶಿಗಳ ಸಮಸ್ಯೆ ಹೆಚ್ಚಿಸುತ್ತದೆ, ಹಣ ಉಳಿಸಿ, ಕೆಲಸದಲ್ಲಿ ತಾಳ್ಮೆಯಿಂದಿರಿ
Recommended image3
ಇಂದು ಗಜಕೇಸರಿ ಯೋಗದಿಂದ ಈ 5 ರಾಶಿಗಳ ಅದೃಷ್ಟವು ಹೊಳೆಯುತ್ತದೆ, ವ್ಯವಹಾರದಲ್ಲಿ ಲಾಭ
Related Stories
Recommended image1
ಜೂನ್ 29 ರಿಂದ ಜುಲೈ 5, 2026 ರವರೆಗೆ ಹಂಸ ರಾಜಯೋಗ, ಮೇಷ ಮತ್ತು ಕರ್ಕ ರಾಶಿ ಸೇರಿದಂತೆ 5 ರಾಶಿಗೆ ಲಾಭ
Recommended image2
ಜುಲೈ ಆರಂಭದಲ್ಲಿ ಅಶುಭ 'ವ್ಯತಿಪತ್ ಯೋಗ' ಸಂಭವ, 'ಈ' 5 ರಾಶಿಗಳು ಎಚ್ಚರಿಕೆ ವಹಿಸಬೇಕು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved