Puja Tips: ಪೂಜೆಯಲ್ಲಿ ಗರುಡ ಗಂಟೆ ಏಕೆ ಬಳಸಲಾಗುತ್ತೆ?
ದೇವಾಲಯದ ಪ್ರವೇಶದ್ವಾರದಲ್ಲಿ ಮತ್ತು ವಿಶೇಷ ಸ್ಥಳಗಳಲ್ಲಿ ಗಂಟೆ ಇಡುವ ಅಭ್ಯಾಸವು ಪ್ರಾಚೀನ ಕಾಲದಿಂದಲೂ ನಡೆಯುತ್ತಿದೆ. ಅಷ್ಟೇ ಅಲ್ಲ, ಮನೆಯ ಪೂಜಾ ಸ್ಥಳದಲ್ಲಿ ಕೂಡ ಗರುಡ ಗಂಟೆ ಇರಿಸಲಾಗುತ್ತೆ. ಇದಕ್ಕೆ ಕಾರಣ ಏನು ಎಂದು ಯೋಚ್ನೆ ಮಾಡೀದ್ದೀರಾ? ಧಾರ್ಮಿಕ ಗ್ರಂಥಗಳ ಪ್ರಕಾರ, ಶಬ್ದ ಸೃಷ್ಟಿಗೆ ವಿಶೇಷ ಕೊಡುಗೆ ನೀಡಿದೆ. ಸೃಷ್ಟಿಯು ರಚನೆಯಾದ ಸಮಯದಲ್ಲಿ ಹುಟ್ಟಿದ ನಾದ, ಅದೇ ನಾದವು ಈ ಗರುಡ ಘಂಟೆಯಿಂದ ಹೊರಬರುತ್ತದೆ ಎಂದು ನಂಬಲಾಗಿದೆ.
ಹಿಂದೂ ಧರ್ಮದ ಸಿದ್ಧಾಂತದ ಪ್ರಕಾರ, ಬೆಳಕು ಶಬ್ದದಿಂದ (Sound)ಉದ್ಭವಿಸುತ್ತದೆ ಮತ್ತು ಶಬ್ದವು ಬಿಂದು ರೂಪದಲ್ಲಿ ಬೆಳಕಿನಿಂದ ಹುಟ್ಟುತ್ತದೆ. ಈ ಕಾರಣದಿಂದಾಗಿ ಗಂಟೆಯ ರೂಪದಲ್ಲಿ ಶಬ್ದ ದೇವಾಲಯ ಅಥವಾ ಪೂಜಾ ಮನೆಯಲ್ಲಿ ಇಡಲಾಗುತ್ತೆ.
ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವುದರಿಂದ ನಕಾರಾತ್ಮಕ ಶಕ್ತಿ (Negative Energy)ಮತ್ತು ಎಲ್ಲಾ ರೀತಿಯ ವಾಸ್ತು ದೋಷ ದೂರವಾಗುತ್ತೆ ಮತ್ತು ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತೆ ಎಂದು ಹೇಳಲಾಗುತ್ತೆ. ಇದರ ಇನ್ನಿತರ ಮಹತ್ವದ ಬಗ್ಗೆ ತಿಳಿಯೋಣ.
ಗರುಡ ಘಂಟೆಗೆ ಏಕೆ ಅಷ್ಟೊಂದು ಮಹತ್ವವಿದೆ?:
ಮಾರ್ಕೆಟ್ನಲ್ಲಿ ಅನೇಕ ರೀತಿಯ ಘಂಟೆಗಳು ಲಭ್ಯವಿವೆ, ಆದರೆ ವಿಷ್ಣುವಿನ (Vishnu) ದೈನಂದಿನ ಪೂಜೆಯಲ್ಲಿ, ನಾವು ಗರುಡ ಚಿಹ್ನೆಯ ಗಂಟೆಯನ್ನೇ ಬಾರಿಸಬೇಕು. ಕೈಯಲ್ಲಿ ಗರುಡ ಚಿಹ್ನೆ ಗಂಟೆ ಹಿಡಿದುಕೊಂಡು ವಿಷ್ಣು ಪೂಜೆ ಮತ್ತು ಆರತಿ ಮಾಡುವ ವ್ಯಕ್ತಿಯು ಚಂದ್ರಯಾನ ವ್ರತ ಮಾಡುವ ಫಲ ಪಡೆಯುತ್ತಾನೆ ಮತ್ತು ಆ ಮನುಷ್ಯನ ಅನೇಕ ಜನ್ಮದ ಪಾಪ ನಾಶವಾಗುತ್ತೆ ಎಂದು ಹೇಳಲಾಗುತ್ತೆ.
4 ರೀತಿಯ ಗಂಟೆಗಳಿವೆ:
ಮೊದಲನೆಯದು ಹದ್ದಿನ ಗಂಟೆ, ಎರಡನೇ ಬಾಗಿಲಿನ ಗಂಟೆ, ಮೂರನೆಯದು ಕೈ ಗಂಟೆ, ಮತ್ತು ನಾಲ್ಕನೇಯದು ಗಂಟೆ. ಹದ್ದಿನ ಘಂಟೆಯ ಬಗ್ಗೆ ಹೇಳೋದಾದ್ರೆ, ಅದು ಚಿಕ್ಕದಾಗಿದೆ, ಇದನ್ನು ಒಂದು ಕೈಯಿಂದ ಬಾರಿಸಬಹುದು.
ಬಾಗಿಲಿನ ಗಂಟೆ ಎಂಬುದು ಬಾಗಿಲಿನ ಮೇಲೆ ನೇತಾಡಿಸುವ ಒಂದು ಗಂಟೆ. ಇದು ಗಾತ್ರದಲ್ಲಿ ದೊಡ್ಡದು ಅಥವಾ ಚಿಕ್ಕದಾಗಿರುತ್ತೆ. ಕೈ ಗಂಟೆ ಹಿತ್ತಾಳೆ(Brass) ಘನವಾದ ದುಂಡಗಿನ ತಟ್ಟೆಯಂತಿರುತ್ತದೆ ಮತ್ತು ಗಂಟೆಯು ತುಂಬಾ ದೊಡ್ಡದಾಗಿರುತ್ತೆ. ಕನಿಷ್ಠ 5 ಅಡಿ ಉದ್ದ ಮತ್ತು ಅಗಲ. ಅದನ್ನು ನುಡಿಸಿದ ನಂತರ, ಶಬ್ದವು ಹಲವಾರು ಕಿಲೋಮೀಟರ್ ದೂರ ಸಾಗುತ್ತೆ.
ಗರುಡ ಗಂಟೆ ಬಾರಿಸುವುದರ ಪ್ರಯೋಜನವೇನು?:
ಸಾವಿರಾರು ಪ್ರಯತ್ನಗಳ ಹೊರತಾಗಿಯೂ ನಿಮ್ಮ ಕೆಲಸ ಮಾಡಲಾಗದಿದ್ದರೆ, ಶನಿವಾರ ಅಥವಾ ಮಂಗಳವಾರ ದೇವಸ್ಥಾನಕ್ಕೆ ಹಿತ್ತಾಳೆ ಗಂಟೆ ದಾನ ಮಾಡಿ. ಹಾಗೆ ಮಾಡೋದ್ರಿಂದ, ನಿಮ್ಮ ಎಲ್ಲಾ ತೊಂದರೆ (Problems) ನಿವಾರಣೆಯಾಗುತ್ತೆ ಮತ್ತು ಸ್ಥಗಿತಗೊಂಡಿರುವ ಕೆಲಸ ಸಹ ಆರಂಭವಾಗುತ್ತೆ.
ದೇವರ ಪೂಜೆಯ ನಂತರ ಪ್ರತಿದಿನ ಆರತಿಯ ಸಮಯದಲ್ಲಿ ಗಂಟೆ ಬಾರಿಸಿ. ಇದು ವಿಧಿಯ ಮುಚ್ಚಿದ ಬಾಗಿಲು ಶಾಶ್ವತವಾಗಿ ತೆರೆಯುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೇ ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ (Positive energy) ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ.
ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ, ತಾಯಿ ಲಕ್ಷ್ಮಿಯು (Lakshmi), ಗರುಡ ಗಂಟೆಯನ್ನು ಬಾರಿಸಿದರೆ ಸಂತೋಷಪಡುತ್ತಾಳೆ ಮತ್ತು ಯಾವಾಗಲೂ ಆ ಮನೆಯಲ್ಲಿ ತನ್ನ ಕೃಪೆ ಕಾಪಾಡಿಕೊಳ್ಳುತ್ತಾಳೆ. ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರೋದಿಲ್ಲ ಮತ್ತು ಆದಾಯದ ಮಾರ್ಗ ನಿರಂತರವಾಗಿ ಹೆಚ್ಚಾಗಲು ಪ್ರಾರಂಭಿಸುತ್ತೆ.
ಮನೆಯಲ್ಲಿ ಗರುಡ ಗಂಟೆ ಬಾರಿಸುವ ಮೂಲಕ, ಕುಟುಂಬದ ಎಲ್ಲಾ ಸದಸ್ಯರಲ್ಲಿ ಸಾಮರಸ್ಯವಿರುತ್ತೆ ಮತ್ತು ಪ್ರೀತಿ (Love) ಹೆಚ್ಚಾಗುತ್ತೆ. ಗರುಡ ಗಂಟೆ ಬಾರಿಸುವ ಮೂಲಕ, ಮನುಷ್ಯನ ಆರಾಧನೆಯು ಹೆಚ್ಚು ಫಲಪ್ರದ ಮತ್ತು ಯಶಸ್ವಿಯಾಗುತ್ತೆ ಎಂದು ನಂಬಲಾಗಿದೆ. ಗರುಡ ಗಂಟೆಯ ಶಬ್ದವು ಮನಸ್ಸಿಗೆ ಶಾಂತಿ ನೀಡುತ್ತೆ ಮತ್ತು ಮಾನಸಿಕ ಒತ್ತಡ ಸಾಕಷ್ಟು ಕಡಿಮೆ ಮಾಡುತ್ತೆ.