ಜಲೇಸರ್(ಆ.10)‌: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕಾಗಿ 2,100 ಕೆ.ಜಿ ತೂಕದ ಹಿತ್ತಾಳೆ ಗಂಟೆಯನ್ನು ಇಲ್ಲಿನ ಹಿಂದು ಮತ್ತು ಮುಸಲ್ಮಾನ್‌ ಕುಶಲಕರ್ಮಿಗಳು ಸಿದ್ಧಪಡಿಸುತ್ತಿದ್ದಾರೆ. ಕುಶಲಕರ್ಮಿ ದೌ ದಯಾಳ್‌ ನೇತೃತ್ವದ ತಂಡ ಈ ಗಂಟೆ ತಯಾರಿಸುತ್ತಿದ್ದು, ಇಕ್ಬಾಲ್‌ ಮಿಸ್ತ್ರಿ ಇದನ್ನು ವಿನ್ಯಾಸಗೊಳಿಸಿದ್ದಾರೆ.\

ಭಾರತದ ಅತ್ಯುತ್ತಮ CM ಸಮೀಕ್ಷೆ ಫಲಿತಾಂಶ ಪ್ರಕಟ, ಸತತ 3ನೇ ಬಾರಿ ಯೋಗಿ ಆದಿತ್ಯಾನಾಥ್‌ಗೆ ಪಟ್ಟ!

‘ಈ ಗಂಟೆ ಕೇವಲ ಹಿತ್ತಾಳೆ ಮಾತ್ರವಲ್ಲದೆ ಅಷ್ಟಧಾತುಗಳನ್ನು ಒಳಗೊಂಡಿದೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸದಿಂದ ತಯಾರಿಸ್ಪಟ್ಟಿದೆ. ಇದು ಭಾರತದಲ್ಲೇ ಅತಿ ದೊಡ್ಡ ಗಾತ್ರದ ಗಂಟೆಯಾಗಿದೆ’ ಎಂದು ವರ್ಕ್ಶಾಪ್‌ ಮಾಲಿಕ ವಿಕಾಸ್‌ ಮಿತ್ತಲ್‌ ತಿಳಿಸಿದ್ದಾರೆ.

ಬಿಜೆಪಿಯಲ್ಲಿ ನತದೃಷ್ಟ ನಾಯಕ ಅಡ್ವಾಣಿ

‘2100 ಕೆ.ಜಿ ತೂಕದ ಹಿತ್ತಾಳೆ ಗಂಟೆ ತಯಾರಿಸುವಂತೆ ನಿರ್ಮೋಹಿ ಅಖಾಡ ಕಳೆದ ವರ್ಷ ನವೆಂಬರ್‌ನಲ್ಲಿ ಸೂಚಿಸಿತ್ತು. ಇದರ ವೆಚ್ಚ 21 ಲಕ್ಷ ಆಗಬಹುದು. ನಾವು ಇದನ್ನು ರಾಮಮಂದಿರಕ್ಕೆ ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದೇವೆ’ ಎಂದು ಶಾಪ್‌ ಮಾಲಿಕರ ಸಹೋದರ ಆದಿತ್ಯ ಮಿತ್ತಲ್‌ ತಿಳಿಸಿದ್ದಾರೆ. 25 ಕಾರ್ಮಿಕರು ಒಂದು ತಿಂಗಳ ಕಾಲ ಕೆಲಸ ಮಾಡಿ ಗಂಟೆ ತಯಾರಿಸಿದ್ದಾರೆ.