Asianet Suvarna News Asianet Suvarna News

Vastu Tips: ತಾಯಿ ಲಕ್ಷ್ಮಿ ಬರುವ ಮುನ್ನ ನೀಡೋ ಸೂಚನೆಗಳಿವು!

ಹಿಂದೂ ಧರ್ಮದಲ್ಲಿ, ಲಕ್ಷ್ಮಿ ದೇವಿ ಸಂಪತ್ತಿನ ದೇವತೆ. ಆಕೆ ದಯೆ ತೋರಿದರೆ ಅಂಥವರು ಶ್ರೀಮಂತರಾಗುವುದರಲ್ಲಿ ಅನುಮಾನವಿಲ್ಲ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಪ್ರತಿಯೊಬ್ಬರೂ ಸಾಕಷ್ಟು ಪ್ರಯತ್ನ ಪಡುತ್ತಾರೆ. ಈಕೆ ಒಲಿದರೆ, ಬರುವ ಮುಂಚೆ ಕೆಲ ಸೂಚನೆಗಳನ್ನು ಕೊಡುತ್ತಾಳೆ ಎಂದು ನಿಮಗೆ ಗೊತ್ತೇ?

Lakshmi ji gives these signs before coming skr
Author
Bangalore, First Published Jun 20, 2022, 3:56 PM IST

ಹಿಂದೂ ಧರ್ಮದಲ್ಲಿ, ತಾಯಿ ಲಕ್ಷ್ಮಿ(Lakshmi Devi)ಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ಯಾರಿಗೆ ದಯೆ ತೋರುತ್ತಾಳೋ ಅವರು ಶ್ರೀಮಂತರಾಗುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯು ಸಂಪತ್ತಿನಿಂದ ತುಂಬಿರಬೇಕು ಮತ್ತು ಚೆನ್ನಾಗಿ ಬದುಕಬೇಕು ಎಂದು ಬಯಸುತ್ತಾನೆ. ಇದಕ್ಕಾಗಿ ನಾನಾ ವಿಧಾನಗಳನ್ನು ಅಳವಡಿಸಿಕೊಂಡು ಶ್ರಮಿಸುತ್ತಾನೆ. 

ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯ ಆಶೀರ್ವಾದವಿಲ್ಲದೆ ಸಂತೋಷ ಮತ್ತು ಹಣವನ್ನು ಬಯಸುವುದು ಅಸಾಧ್ಯ. ಲಕ್ಷ್ಮಿ ಎಲ್ಲಿ ನೆಲೆಸಿದ್ದಾಳೆಯೋ ಅಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಲಕ್ಷ್ಮಿ ದೇವಿಯು ಒಂದು ಸ್ಥಳವನ್ನು ತೊರೆದಾಗ ಅಲ್ಲಿ ಕತ್ತಲೆ ಮತ್ತು ಹತಾಶೆ ಉಂಟಾಗುತ್ತದೆ. ಬಡತನ, ಹಣದ ಸಮಸ್ಯೆಗಳು ಶುರುವಾಗುತ್ತವೆ. 

ಲಕ್ಷ್ಮಿ ದೇವಿಯು ಯಾವುದೇ ಸ್ಥಳಕ್ಕೆ ಆಗಮಿಸುವಾಗ, ಅನೇಕ ಮಂಗಳಕರ ಸಂಕೇತಗಳು(Auspecious signs) ಗೋಚರವಾಗುತ್ತವೆ.  ಲಕ್ಷ್ಮಿ ದೇವಿಯ ಆಗಮನದ ಮುನ್ನ ಯಾವೆಲ್ಲ ಮುನ್ಸೂಚನೆಗಳು ಸಿಕ್ಕುತ್ತವೆ ನೋಡೋಣ. 

ಇರುವೆಗಳು(Ants)
ನಿಮ್ಮ ಮನೆಗೆ ಇದ್ದಕ್ಕಿದ್ದಂತೆ ಕಪ್ಪು ಇರುವೆಗಳು ಹಿಂಡಾಗಿ ಬಂದು ಏನನ್ನಾದರೂ ತಿನ್ನಲು ಪ್ರಾರಂಭಿಸಿದರೆ, ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರಲಿದ್ದಾಳೆ ಮತ್ತು ನಿಮಗೆ ಸಾಕಷ್ಟು ಹಣ ಸಿಗುತ್ತದೆ ಎಂದು ನಂಬಲಾಗಿದೆ.

ಜವಾಬ್ದಾರಿ, ಸೂಕ್ಷ್ಮ ಜೀವಿ..ಒಂದೊಂದು ರಾಶಿಗೆ ಒಂದೊಂದು ಭಯ, ನಿಮಗೆ?

ಹಕ್ಕಿ ಗೂಡು(Birds nest)
ಒಂದು ಹಕ್ಕಿ ನಿಮ್ಮ ಮನೆಗೋ, ಮನೆಯ ಅಂಗಳದ ಮರಕ್ಕೋ ಬಂದು ಗೂಡು ಮಾಡಿದರೆ, ಅದು ತುಂಬಾ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ನೀವು ಆ ಮರವನ್ನು ಕೆಲವು ಕಾರಣಗಳಿಂದ ಕತ್ತರಿಸಿದರೆ, ಅದು ನಿಮಗೆ ಅಶುಭಕರವೆಂದು ಸಾಬೀತುಪಡಿಸಬಹುದು.

ಹಲ್ಲಿಗಳು(Lizards)
ನಂಬಿಕೆಗಳ ಪ್ರಕಾರ, ನಿಮ್ಮ ಮನೆಯಲ್ಲಿ ಒಂದೇ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಮೂರು ಹಲ್ಲಿಗಳು ಕಾಣಿಸಿಕೊಂಡರೆ, ಲಕ್ಷ್ಮಿ ದೇವಿಯು ಆಗಮಿಸಲಿದ್ದಾಳೆ ಎಂದು ಅರ್ಥ ಮಾಡಿಕೊಳ್ಳಿ. ಇದನ್ನು ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ.

ತುಳಸಿಯ ಬಳಿ ಹಲ್ಲಿ(Tulsi)
ದೀಪಾವಳಿಯ ದಿನದಂದು ತುಳಸಿ ಗಿಡದ ಸುತ್ತಲೂ ಹಲ್ಲಿಗಳು ಕಾಣಿಸಿಕೊಂಡರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಬಹಳಷ್ಟು ಹಣವನ್ನು ಪಡೆಯುವ ಸಂಕೇತವಾಗಿದೆ. 

ಬಲಗೈ ತುರಿಕೆ(Itching)
ನಿಮ್ಮ ಬಲಗೈಯಲ್ಲಿ ನಿರಂತರ ತುರಿಕೆ ಇದ್ದರೆ, ಹಣವು ಪ್ರಯೋಜನಕಾರಿಯಾಗಲಿದೆ ಎಂದರ್ಥ.

ಮನುಷ್ಯರ ಪಾಪಪುಣ್ಯಗಳ ರೆಕಾರ್ಡ್ ಇಡುವ ಚಿತ್ರಗುಪ್ತ ಯಾರು?

ಕನಸು(Dreams)
ಕನಸಿನಲ್ಲಿ ಪೊರಕೆ, ಗೂಬೆ, ಹೂಜಿ, ಆನೆ, ಮುಂಗುಸಿ, ಶಂಖ, ಹಲ್ಲಿ, ನಕ್ಷತ್ರ, ಹಾವು, ಗುಲಾಬಿ ಮುಂತಾದವುಗಳು ಕಂಡರೆ ಅದು ಸಂಪತ್ತನ್ನು ಪಡೆಯುವ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಶಂಖ(Conch)
ಬೆಳಗ್ಗೆ ಎದ್ದ ತಕ್ಷಣ ಶಂಖದ ಸದ್ದು ಕೇಳಿದರೆ ಅದು ಲಕ್ಷ್ಮಿ ದೇವಿಯ ಆಗಮನದ ಸಂಕೇತವೂ ಹೌದು.

ಕಬ್ಬು(Sugarcane)
ಮನೆಯಿಂದ ಹೊರಗೆ ಹೋಗುವಾಗ ಕಬ್ಬು ಕಂಡರೆ ಅದನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಗುಡಿಸುವಿಕೆ(Brooming)
ಮುಂಜಾನೆ ಮನೆಯಿಂದ ಹೊರಡುವಾಗ ಯಾರಾದರೂ ಸತತವಾಗಿ ಹಲವಾರು ದಿನಗಳವರೆಗೆ ಗುಡಿಸುವುದನ್ನು ನೀವು ನೋಡಿದರೆ, ದೊಡ್ಡ ವಿವಾದವು ಬಗೆಹರಿಯಲಿದೆ ಎಂದು ಅರ್ಥ ಮಾಡಿಕೊಳ್ಳಿ. ಅಲ್ಲದೆ ನೀವು ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ.

ನಾಯಿ(Dog)
ಮನೆಯಿಂದ ಹೊರಗೆ ಹೋಗುವಾಗ ದಾರಿಯಲ್ಲಿ ನಾಯಿಯೊಂದು ಸಸ್ಯಾಹಾರ ಅಥವಾ ರೊಟ್ಟಿಯನ್ನು ಬಾಯಿಯಲ್ಲಿ ಕಚ್ಚಿಕೊಂಡಿರುವುದು ಕಂಡುಬಂದರೆ ನೀವು ಹಣ ಗಳಿಸುತ್ತಿದ್ದೀರಿ ಎಂದರ್ಥ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios