30ರ ಗಡಿ ದಾಟಿದ್ರೂ ಕೆಲವರಿಗೆ ಮದುವೆಯಾಗೋದಿಲ್ಲ. ಅವರು ಬಯಸಿದ ಸಂಗಾತಿ ಸಿಗೋದಿಲ್ಲ ಇಲ್ಲವೆ ಪ್ರೇಮ ವಿವಾಹಕ್ಕೆ ನಾನಾ ಅಡೆತಡೆಗಳಿರುತ್ತವೆ. ಮದುವೆಗೆ ಆಗ್ತಿರುವ ಎಲ್ಲ ಸಮಸ್ಯೆ ದೂರವಾಗ್ಬೇಕೆಂದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರೋ ಕೆಲ ಟ್ರಿಕ್ಸ್ ಪಾಲನೆ ಮಾಡಿ.
ಮದುವೆ (Marriage ) ಸ್ವರ್ಗದಲ್ಲಿ ನಿಶ್ಚಯವಾಗಿದೆ ಎನ್ನುತ್ತಾರೆ. ಕೆಲವರ ಹಣೆಯಲ್ಲಿ ಮದುವೆ ಬರೆದಿರೋದಿಲ್ಲ. ಒಂಟಿಯಾಗಿಯೇ ಜೀವನ ಸಾಗಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಎಲ್ಲ ಪ್ರದೇಶದಲ್ಲಿಯೂ ಈಗ ಹುಡುಗಿಯರ ಸಂಖ್ಯೆ ಕಡಿಮೆಯಿದೆ. ಇದೇ ಕಾರಣಕ್ಕೆ ಅನೇಕ ಹುಡುಗರು ಮದುವೆಯಾಗದೆ ಉಳಿದಿದ್ದಾರೆ. ಮತ್ತೆ ಕೆಲವರ ಮದುವೆ ನಿಶ್ಚಯವಾಗಿ ಮಂಟಪದವರೆಗೆ ಬಂದು ನಿಲ್ಲುವುದಿದೆ. ಕೇವಲ ಹುಡುಗ್ರು ಮಾತ್ರವಲ್ಲ ಕೆಲ ಹುಡುಗಿಯರ ಮದುವೆಗೂ ನಾನಾ ರೀತಿಯ ಅಡ್ಡಿಯುಂಟಾಗುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಇದಕ್ಕೂ ಅನೇಕ ಪರಿಹಾರಗಳನ್ನು ಹೇಳಿದ್ದಾರೆ. ಶೀಘ್ರ ಕಂಕಣ ಕೂಡಿಬರಬೇಕು, ಮದುವೆಯಾಗ್ಬೇಕು ಎನ್ನುವವರು ಜ್ಯೋತಿಷ್ಯ ಶಾಸ್ತ್ರದ ಕೆಲವು ನಿಯಮಗಳನ್ನು ಪಾಲನೆ ಮಾಡ್ಬೇಕು. ಜ್ಯೋತಿಷ್ಯ ಶಾಸ್ತ್ರ (Astrology ) ದಲ್ಲಿ ಹೇಳಿದ ಪರಿಹಾರಗಳು ನಿಜವಾದ ಮತ್ತು ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಬಹಳಷ್ಟು ಸಹಾಯ ಮಾಡುತ್ತದೆ. ಈ ಪರಿಹಾರಗಳು ತುಂಬಾ ಸರಳ ಆದರೆ ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ದಾಂಪತ್ಯದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾರೆ. ಇಂದು ನಾವು ಬೇಗ ಮದುವೆಯಾಗ್ಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಬಹುಬೇಗ ಜೀವನ ಸಂಗಾತಿ ಸಿಗ್ಬೇಕೆಂದ್ರೆ ಹೀಗೆ ಮಾಡಿ :
ಕೃಷ್ಣನ ಕೃಪೆ : ಜೀವನ ಸಂಗಾತಿ ಹುಡುಕಾಟ ನಡೆಸಿ ಸುಸ್ತಾಗಿದೆ. ಒಬ್ಬರೂ ಸಿಗ್ತಿಲ್ಲ ಎನ್ನುವವರು ಶ್ರೀ ಕೃಷ್ಣನ ದೇವಸ್ಥಾನದಲ್ಲಿ ಕೊಳಲು ಮತ್ತು ವೀಳ್ಯದೆಲೆಯನ್ನು ಅರ್ಪಿಸಿ. ಹೀಗೆ ಮಾಡಿದ್ರೆ ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಪ್ರೀತಿಯ ಪ್ರವೇಶವಾಗುತ್ತದೆ. ನಿಮ್ಮ ಸಂಗಾತಿ ನಿಮಗೆ ಸಿಗ್ತಾರೆ. ಇಷ್ಟಲ್ಲದೆ ರಾಧಾ ಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಹೂವಿನ ಹಾರಗಳು, ಸಕ್ಕರೆ ಮಿಠಾಯಿಗಳನ್ನು ಅರ್ಪಿಸಬೇಕು. ಜೀವನದಲ್ಲಿ ಪ್ರೀತಿಯನ್ನು ನೀಡುವಂತೆ ಪ್ರಾರ್ಥಿಸಬೇಕು.
ಯಾವಾಗಲೂ ಕಾಮಿಡಿ ಫಿಲಂಗಳನ್ನು ನೋಡುತ್ತೀರಾ? ಅದಕ್ಕೂ ನಿಮ್ಮ ಜನ್ಮರಾಶಿಗೂ ಸಂಬಂಧವಿದೆ!
ಶುಕ್ರವಾರ ದುರ್ಗೆ ಪೂಜೆ : ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಲು ಅಡೆತಡೆಗಳಿದ್ದರೆ ತಾಯಿ ದುರ್ಗೆ ನಿಮಗೆ ಪರಿಹಾರ ನೀಡಬಲ್ಲಳು. ಪ್ರೀತಿ ಸಿಗಬೇಕು ಎನ್ನುವವರು ದುರ್ಗೆಯನ್ನು ಪೂಜಿಸಬೇಕು. ಶುಕ್ರವಾರದಂದು ಅವಳಿಗೆ ಕೆಂಪು ಧ್ವಜ ಅಥವಾ ಚುನರಿಯನ್ನು ಅರ್ಪಿಸಬೇಕು. ಇದ್ರಿಂದ ನಿಮಗೆ ಶೀಘ್ರ ಫಲ ಸಿಗುತ್ತದೆ. ಪ್ರೀತಿಸಿದ ವ್ಯಕ್ತಿ ನಿಮ್ಮನ್ನು ಬೇಗ ಮದುವೆಯಾಗ್ತಾರೆ.
ಶಿವನ ಆರಾಧನೆ : ಉತ್ತಮ ಹಾಗೂ ನಿಮ್ಮನ್ನು ಅಪಾರವಾಗಿ ಪ್ರೀತಿಸುವ ಜೀವನ ಸಂಗಾತಿಯನ್ನು ಪಡೆಯಲು ಶಿವನ ಆರಾಧನೆ ಮಾಡಿ. 16 ಸೋಮವಾರದಂದು ಉಪವಾಸ ಮಾಡಬೇಕು. ಸೋಮವಾರ ಜೇನುತುಪ್ಪದೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡ್ಬೇಕು. ಇದ್ರಿಂದ ಶೀಘ್ರದಲ್ಲೇ ನಿಮ್ಮ ಆಸೆ ಈಡೇರುತ್ತದೆ.
ದಿರಿಸು ಖರೀದಿಸೋ ದಿನದಿಂದ ಧರಿಸೋ ತನ್ಕ Vastu ಏನನ್ನುತ್ತೆ ಕೇಳಿ..
ಜಾತಕ ದೋಷಕ್ಕೆ ಪರಿಹಾರ : ಜಾತಕದಲ್ಲಿ ಗ್ರಹದೋಷಗಳು ಮದುವೆಗೆ ವಿಳಂಬ ಮಾಡುವ ಸಾಧ್ಯತೆಯಿರುತ್ತದೆ. ಆ ಸಂದರ್ಭದಲ್ಲಿ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಆರಾಧಿಸಬೇಕು. ಶುಕ್ಲ ಪಕ್ಷದ ಗುರುವಾರದಂದು, ಹರಳುಗಳ ಮಾಲೆಯೊಂದಿಗೆ ಓಂ ಲಕ್ಷ್ಮೀ ನಾರಾಯಣ ನಮಃ ಎಂಬ ಮಂತ್ರವನ್ನು ಪಠಿಸಬೇಕು. ನಂತರ 3 ತಿಂಗಳ ಕಾಲ ಪ್ರತಿ ಗುರುವಾರ ದೇವಸ್ಥಾನದಲ್ಲಿ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಅರ್ಪಿಸಬೇಕು. ಹೀಗೆ ಮಾಡಿದ್ರೆ ಶೀಘ್ರ ನೀವು ಬಯಸಿದ ಸಂಗಾತಿ ನಿಮಗೆ ಸಿಗುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಈ ಬಟ್ಟೆ ಧರಿಸಿ : ಗುರುವಾರದಂದು ಹಳದಿ ಮತ್ತು ಶುಕ್ರವಾರದಂದು ಬಿಳಿ ಬಟ್ಟೆಗಳನ್ನು ಧರಿಸುವುದರಿಂದ, ಗುರು ಮತ್ತು ಶುಕ್ರರು ಜಾತಕದಲ್ಲಿ ಬಲಶಾಲಿಯಾಗುತ್ತಾರೆ. ಶೀಘ್ರದಲ್ಲೇ ವಿವಾಹ ಯೋಗ ಪ್ರಾಪ್ತಿಯಾಗುತ್ತದೆ.
ಈ ದಿನ ಸಂಗಾತಿ ಭೇಟಿಯಾಗ್ಬೇಡಿ : ಮದುವೆಯಲ್ಲಿ ಅಡೆತಡೆಗಳಿದ್ದರೆ, ಶನಿವಾರ ಮತ್ತು ಅಮಾವಾಸ್ಯೆಯಂದು ಪ್ರೇಮಿಯನ್ನು ಭೇಟಿಯಾಗಬಾರದು. ಶುಕ್ರವಾರ ಮತ್ತು ಹುಣ್ಣಿಮೆಯ ದಿನದಂದು ಒಟ್ಟಿಗೆ ಸಮಯ ಕಳೆಯುವುದು ಉತ್ತಮವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ಅವರ ನಡುವೆ ಪ್ರೀತಿ, ವಿಶ್ವಾಸ ಹೆಚ್ಚುತ್ತದೆ.
