ಸಮ್ಮರ್ ಟ್ರಾವೆಲ್ ಗೆ ರೆಡಿಯಾಗಿದ್ರೆ ಈ 6 ವಸ್ತುಗಳು ನಿಮ್ಮ ಬ್ಯಾಗ್ ನಲ್ಲಿರಲಿ
Summer Travel Tips in Kannada: ಬೇಸಿಗೆಯಲ್ಲಿ ಕಾಡುವ ಸಮಸ್ಯೆಗಳು ಒಂದೆರಡಲ್ಲ. ಬೆವರುವುದು, ಟ್ಯಾನಿಂಗ್, ಸ್ಕಿನ್ ಬರ್ನಿಂಗ್ ಸೂರ್ಯನಿಂದ ಆಯಾಸದಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಸುವುದು ತುಂಬಾ ಕಷ್ಟ. ಆದರೂ ನೀವು ಈ ಸಮ್ಮರ್ ನಲ್ಲಿ ಟ್ರಾವೆಲ್ ಮಾಡಲು ಯೋಜನೆ ರೂಪಿಸಿದ್ದರೆ ಇಲ್ಲಿದೆ ನಿಮಗಾಗಿ ಸಲಹೆಗಳು.
ಈ ಬೇಸಿಗೆಯಲ್ಲಿ, ನೀವು ಸಹ ಎಲ್ಲಾದರೂ ಪ್ರಯಾಣಿಸಲು ಯೋಜಿಸುತ್ತಿದ್ದರೆ ಮತ್ತು ಪ್ರವಾಸದ ಸಮಯದಲ್ಲಿ ಸೂರ್ಯನಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ, ಬ್ಯಾಗ್ (Bag) ಪ್ಯಾಕ್ ಮಾಡುವಾಗ ಜೇಲವೊಂದು ಮುಖ್ಯವಾದ ವಸ್ತುಗಳನ್ನು ಇರಿಸಿಕೊಳ್ಳಿ. ಇದರಿಂದ ನೀವು ಆರಾಮವಾಗಿ ನಿಮ್ಮ ರಜೆಯನ್ನು ಎಂಜಾಯ್ ಮಾಡಬಹುದು.
ಕರ್ಚಿಫ್ ಮತ್ತು ವೆಟ್ ವೈಪ್ ಗಳು(Wet wipe)
ಬೇಸಿಗೆ ಕಾಲದಲ್ಲಿ, ಬೆವರುವುದರಿಂದ ಸೋಂಕು ಉಂಟಾಗಬಹುದು, ಈ ಸಮಯದಲ್ಲಿ, ನಿಮ್ಮೊಂದಿಗೆ ಟವೆಲ್ ಮತ್ತು ವೆಟ್ ವೈಪ್ ಗಳನ್ನು ಇರಿಸಿಕೊಳ್ಳಿ. ಕಾಲಕಾಲಕ್ಕೆ ಅವುಗಳ ಸಹಾಯದಿಂದ ಚರ್ಮವನ್ನು ಸ್ವಚ್ಛಗೊಳಿಸಿ. ಹಾಗೆ ಮಾಡುವುದರಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.
ಸ್ಕಾರ್ಫ್(Scarf), ಹ್ಯಾಟ್ಸ್
ಪ್ರಕಾಶಮಾನವಾದ ಸೂರ್ಯನ ಬೆಳಕು ನಿಮ್ಮ ತಲೆನೋವಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಚೀಲದಲ್ಲಿ ಟೋಪಿ ಅಥವಾ ಸ್ಕಾರ್ಫ್ ಅನ್ನು ಇಟ್ಟುಕೊಳ್ಳುವುದು ಮುಖ್ಯ. ಇದು ನಿಮ್ಮ ಮುಖವನ್ನು ರಕ್ಷಿಸುವುದಲ್ಲದೆ, ಶಾಖದಿಂದ ನಿಮ್ಮ ತಲೆಯನ್ನು ತಂಪಾಗಿಡಲು ಸಹಾಯ ಮಾಡುತ್ತದೆ.
ಸನ್ ಗ್ಲಾಸ್ ಗಳು(Sun glass)
ಬೇಸಿಗೆಯಲ್ಲಿ ಪ್ರಯಾಣಿಸುವಾಗ, ಬ್ಯಾಗ್ ನಲ್ಲಿ ಸನ್ ಗ್ಲಾಸ್ ಗಳನ್ನು ಇರಿಸಿಕೊಳ್ಳಿ. ನೀವು ಅದರಲ್ಲಿ ಸ್ಟೈಲಿಶ್ ಆಗಿ ಕಾಣುವುದು ಮಾತ್ರವಲ್ಲದೆ ಸೂರ್ಯನ ಬೆಳಕಿನಿಂದ ಸಹ ತಪ್ಪಿಸುತ್ತೀರಿ. ಇದರ ಸಹಾಯದಿಂದ, ಕಣ್ಣುಗಳನ್ನು ರಕ್ಷಿಸಬಹುದು. ಇದು ಬೇಸಿಗೆಯಲ್ಲಿ ನಿಮ್ಮ ಕಣ್ಣುಗಳನ್ನು ಕೂಲ್ ಆಗಿರಿಸುತ್ತದೆ.
ಪರ್ಫ್ಯೂಮ್ (Perfume) ಜೊತೆಗಿರಲಿ
ಬೇಸಿಗೆಯಲ್ಲಿ, ಹೆಚ್ಚು ಬೆವರುತ್ತೇವೆ, ಇದರಿಂದ ವಾಸನೆ ಬರುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿ ಯಲ್ಲಿ, ಬ್ಯಾಗ್ ನಲ್ಲಿ ಪರ್ಫ್ಯೂಮ್ ಯಾವಾಗಲೂ ಹಾಕಿರಬೇಕು. ಬೆವರಿನ ವಾಸನೆ ಬಂದ ತಕ್ಷಣ, ಅದನ್ನು ದೇಹದ ಮೇಲೆ ಸಿಂಪಡಿಸಿ. ಇದರಿಂದ ನೀವು ದಿನವಿಡೀ ಫ್ರೆಶ್ ಆಗಿರುತ್ತೀರಿ.
ಸನ್ ಸ್ಕ್ರೀನ್(Sunscreen)
ಟ್ಯಾನಿಂಗ್ ಅನ್ನು ತಪ್ಪಿಸಲು ಸನ್ ಸ್ಕ್ರೀನ್ ಲೋಷನ್ ಬಹಳ ಮುಖ್ಯ, ಇದು ಚರ್ಮವನ್ನು ಪ್ರಕಾಶಮಾನವಾದ ಸೂರ್ಯನಿಂದ ರಕ್ಷಿಸುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಕಾಡುವ ಎಲ್ಲಾ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಅದಕ್ಕಾಗಿ ಉತ್ತಮ SPF ನೊಂದಿಗೆ ಸನ್ ಸ್ಕ್ರೀನ್ ಲೋಷನ್ ಅನ್ನು ಬಳಸಿ.
ಹಗುರವಾದ ಆರಾಮದಾಯಕ ಬಟ್ಟೆ
ಬ್ಯಾಗ್ ಅನ್ನು ಪ್ಯಾಕ್ ಮಾಡುವಾಗ, ಬೇಸಿಗೆಯಲ್ಲಿ ಆರಾಮದಾಯಕವಾಗಿರುವಂತಹ ಬಟ್ಟೆಗಳನ್ನು ಇರಿಸಿ. ಪ್ರಯಾಣದ ಸಮಯದಲ್ಲಿ ಸಡಿಲವಾದ ಬಟ್ಟೆಗಳನ್ನು ಧರಿಸಿ. ಇದು ಕಡಿಮೆ ಶಾಖ ಮತ್ತು ಬೆವರು ಕಡಿಮೆ ಅನುಭವಿಸುವಂತೆ ಮಾಡುತ್ತದೆ. ಪ್ರಯಾಣದ ಸಮಯದಲ್ಲಿ ಹತ್ತಿ (Cotton) ಮತ್ತು ಆರಾಮದಾಯಕ ಬಟ್ಟೆಗಳನ್ನು ಬ್ಯಾಗ್ ನಲ್ಲಿ ಪ್ಯಾಕ್ ಮಾಡಿ.