ಫಸ್ಟ್ ಡೇಟ್ ಗೆ ಬೆಸ್ಟ್ ಆಗಿ ಕಾಣಲು ಪ್ಲಸ್ ಸೈಜ್ ಜನರಿಗೆ ಫ್ಯಾಶನ್ ಟಿಪ್ಸ್
ಫಸ್ಟ್ ಡೇಟ್ ಗೆ ಬೆಸ್ಟ್ ಲುಕ್ನಲ್ಲಿ ಕಾಣಿಸಿಕೊಳ್ಳಲು ಯಾರು ಇಷ್ಟಪಡೋದಿಲ್ಲ ಹೇಳಿ? ಆದರೆ ಪ್ಲಸ್ ಸೈಜ್ ಜನರಿಗೆ ಡೇಟ್ ಗೆ ವಿಶೇಷವಾಗಿ ಕಾಣುವುದು ಸ್ವಲ್ಪ ಕಷ್ಟವಾಗುತ್ತೆ. ಹಾಗಾಗಿ, ನೀವು ಬಯಸಿದ್ರೆ, ಕೆಲವು ಸ್ಟೈಲ್ ಟಿಪ್ಸ್ ಅನುಸರಿಸೋ ಮೂಲಕ ಫಸ್ಟ್ ಡೇಟ್ ಗೆ ನೀವು ಸ್ಮಾರ್ಟ್ ಮತ್ತು ಪರ್ಫೆಕ್ಟ್ ಸುಲಭವಾಗಿ ಕಾಣಬಹುದು.
ಫಸ್ಟ್ ಡೇಟ್(First date) ಎಲ್ಲರಿಗೂ ತುಂಬಾ ವಿಶೇಷ. ಹಾಗಾಗಿ, ಉಡುಗೆ ತೊಡುಗೆಯಿಂದ ಹಿಡಿದು ಫುಟ್ ವೇರ್ ಮತ್ತು ಹೇರ್ ಸ್ಟೈಲ್ ವರೆಗೆ, ಜನರು ಮೊದಲ ಡೇಟ್ ನಲ್ಲಿ ಪರ್ಫೆಕ್ಟಾಗಿ ಕಾಣಲು ಪ್ರತಿಯೊಂದು ಸಣ್ಣ ವಿಷಯದ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಯಾಕೆಂದರೆ ಆ ದಿನ ತಾನು ತುಂಬಾನೆ ಸ್ಮಾರ್ಟ್ ಆಗಿ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ.
ಆದರೆ, ಪ್ಲಸ್ ಸೈಜ್ (Plus size) ಜನರಿಗೆ ಮೊದಲ ಡೇಟ್ ನಲ್ಲಿ ಉತ್ತಮವಾಗಿ ಕಾಣುವುದು ಸ್ವಲ್ಪ ಸವಾಲಿನ ಕೆಲಸ. ತಾವೇನು ಮಾಡಿದರೂ ತುಂಬಾ ದಪ್ಪನಾಗಿ ಕಾಣುತ್ತೇನೆ ಎಂದು ಅವರಿಗೆ ಅನಿಸಿರಬಹುದು. ಹಾಗಾಗಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ, ಪ್ಲಸ್ ಸೈಜ್ ಜನರು ಮೊದಲ ಡೇಟ್ ಗೆ ಅದ್ಭುತವಾಗಿ ಕಾಣಬಹುದು.
ಸಹಜವಾಗಿ, ಪ್ಲಸ್ ಸೈಜ್ ಜನರ ವ್ಯಕ್ತಿತ್ವವು ಸ್ವತಃ ಸಾಕಷ್ಟು ಪ್ರಭಾವಶಾಲಿಯಾಗಿರುತ್ತೆ . ಆದರೆ ಡೇಟಿಂಗ್ ನಂತಹ ವಿಶೇಷ ಸಂದರ್ಭಗಳಲ್ಲಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳೋದು ಪ್ಲಸ್-ಸೈಜ್ ಜನರಿಗೆ ಅಷ್ಟೇ ಕಷ್ಟವಾಗುತ್ತೆ. ಹಾಗಾಗಿ, ನಿಮ್ಮ ತಪ್ಪು ಡ್ರೆಸ್ಸಿಂಗ್ ಸ್ಟೈಲ್(dressing style) ನಿಮ್ಮ ಸಂಪೂರ್ಣ ಲುಕ್ ಹಾಳುಮಾಡಬಹುದು.ಆದ್ದರಿಂದ, ಕೆಲವು ಸುಲಭ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಡೇಟಿಂಗ್ ಎಂಜಾಯ್ ಮಾಡಬಹುದು.
ಫಿಟ್ಟಿಂಗ್ ಬಟ್ಟೆಗಳನ್ನು(Fitting dress) ಧರಿಸಿ
ಡೇಟ್ ಗೆ ಹೆಚ್ಚು ಬಿಗಿಯಾದ ಬಟ್ಟೆ ಧರಿಸೋದರಿಂದ ನಿಮ್ಮ ಕರ್ವ್ ಸರಿಯಾಗಿ ಕಾಣುತ್ತೆ. ಆದರೆ, ಸಡಿಲವಾದ ಉಡುಗೆಗಳೊಂದಿಗೆ ನೀವು ಆನ್ ಕಂಫರ್ಟಬಲ್ ಅನುಭವಿಸಬಹುದು. ಮೊದಲ ಡೇಟ್ಗೆ ಫಿಟ್ಟಿಂಗ್ ಬಟ್ಟೆಗಳನ್ನು ಧರಿಸೋದು ಉತ್ತಮ ಆಯ್ಕೆಯಾಗಿದೆ.
ಬಣ್ಣ(Colours) ಆಯ್ಕೆಯ ಮೇಲೆ ಕಾನ್ಸನ್ಟ್ರೇಟ್ ಮಾಡಿ
ಸಾಮಾನ್ಯವಾಗಿ, ಪ್ಲಸ್ ಸೈಜ್ ಜನರ ತೂಕವೂ ಹೆಚ್ಚಾಗಿರುತ್ತೆ . ಹಾಗಾಗಿ, ಗಾಢ ಬಣ್ಣದ ಬಟ್ಟೆಗಳು ನಿಮಗೆ ಉತ್ತಮವಾಗಬಹುದು. ಹಾಗೇ, ಮೊದಲ ಡೇಟ್ ಗಾಗಿ, ನೀವು ಡಾರ್ಕ್ ಜೀನ್ಸ್ ನೊಂದಿಗೆ ಲೈಟ್ ಶೇಡ್ ನ ಕ್ಯಾಶುಯಲ್ ಅಪ್ಪರ್ ವೇರ್ ಆಯ್ಕೆ ಮಾಡಬಹುದು. ಅಲ್ಲದೆ, ಬ್ರೈಟ್ ಶೇಡ್ ಪಾಕೆಟ್ ಮತ್ತು ಬ್ರೈಟ್ ವಿನ್ಯಾಸದ ಬಟ್ಟೆಗಳು ಸಹ ನಿಮಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ.
ಲೇಯರ್ ಮತ್ತು ಪ್ಯಾಟರ್ನ್ ಗೆ ಗಮನ ಕೊಡಿ
ಪ್ಲಸ್ ಸೈಜ್ ಹೊಂದಿರುವ ಜನರು ಮೊದಲ ಡೇಟ್ ಗೆ ದೊಡ್ಡ ಗಾತ್ರದ ಶರ್ಟ್ ಸೆಲೆಕ್ಟ್ ಮಾಡಬಹುದು. ಇದು ನಿಮ್ಮ ಲುಕ್ ಸಾಕಷ್ಟು ಟ್ರೆಂಡಿ(Trendy) ಮತ್ತು ಆರಾಮದಾಯಕವಾಗಿ ಕಾಣುವಂತೆ ಮಾಡುತ್ತೆ. ಅಲ್ಲದೆ, ಕ್ಲಾಸಿಕ್ ಪ್ಯಾಟರ್ನ್ ಮತ್ತು ಹಾರಿಜಾಂಟಲ್ ಪ್ಯಾಟರ್ನ್ ಹೊಂದಿರುವ ಡ್ರೆಸ್ ಆಯ್ಕೆಯು ಸಹ ನಿಮಗೆ ಪರ್ಫೆಕ್ಟ್ ಆಗಿರುತ್ತೆ.
ಡಾರ್ಕ್ ಶೇಡ್ ಶರ್ಟ್ ಪ್ರಯತ್ನಿಸಿ
ಮೊದಲ ಡೇಟ್ ನಲ್ಲಿ ನ್ಯೂಟ್ರಲ್ ಲುಕ್ ಗಾಗಿ ನೀವು ದಪ್ಪ ಟೀ-ಶರ್ಟ್ (Tshirt)ಸಹ ಧರಿಸಬಹುದು. ಇದು ನಿಮ್ಮ ಲುಕ್ ಸಾಕಷ್ಟು ಸ್ಟೈಲಿಶ್ ಮತ್ತು ಡ್ಯಾಶಿಂಗ್ ಆಗಿ ಕಾಣುವಂತೆ ಮಾಡುತ್ತೆ. ಆದರೆ, ಡೇಟ್ ಗೆ ವಿ ನೆಕ್ ಟಿ-ಶರ್ಟ್ ಧರಿಸಬೇಡಿ. ಇದು ನಿಮ್ಮ ಭುಜಗಳನ್ನು ತುಂಬಾ ಅಗಲವಾಗಿ ಕಾಣುವಂತೆ ಮಾಡುತ್ತೆ.
ಪ್ಯಾಂಟ್ ಗಳ (Pant)ಪ್ಯಾಟರ್ನ್ ಹೀಗಿರ್ಲಿ
ಫಸ್ಟ್ ಡೇಟ್ ಗೆ ಹೋಗಲು ಪ್ಲೀಟೆಡ್ ಪ್ಯಾಟರ್ನ್ ಪ್ಯಾಂಟ್ ಗಳನ್ನು ಆಯ್ಕೆ ಮಾಡೋದು ಉತ್ತಮ ಆಯ್ಕೆಯಾಗಬಹುದು. ಇದು ನಿಮ್ಮ ಅಂಕೆಲ್ ಸೈಜ್ ಬ್ಯಾಲೆನ್ಸ್ ಮಾಡುತ್ತೆ. ಅದೇ ಸಮಯದಲ್ಲಿ, ನೀವು ಬಯಸಿದರೆ, ನೀವು ಅಂಕೆಲ್ ಲೆಂಥ್ ಪ್ಯಾಂಟ್ ಗಳನ್ನು ಸಹ ಪ್ರಯತ್ನಿಸಬಹುದು.
ಮೊನೊಕ್ರೋಮ್ ಪ್ಯಾಟರ್ನ್ (Monochrome pattern) ಅನುಸರಿಸಿ
ಮೊನೊಕ್ರೋಮ್ ಪ್ಯಾಟರ್ನ್ ನಲ್ಲಿ ನೀವು ಒಂದೇ ಬಣ್ಣದ ಅನೇಕ ಶೇಡ್ ಗಳನ್ನು ಆಯ್ಕೆ ಮಾಡಬಹುದು. ಇದು ನಿಮ್ಮ ಲುಕ್ ಹೆಚ್ಚಿಸೋದಲ್ಲದೆ, ನಿಮ್ಮ ಡೇಟ್ ನಂದು ಯಾರ ಗಮನವೂ ನಿಮ್ಮ ಹೊಟ್ಟೆ ಮೇಲೆ ಬೀಳದಂತೆ ನೋಡಿಕೊಳ್ಳುತ್ತೆ. ಅಲ್ಲದೆ, ಮೊನೊಕ್ರೋಮ್ ಲುಕ್ನಲ್ಲಿ ನೀವು ತೆಳ್ಳಗೆ ಮತ್ತು ಸ್ಮಾರ್ಟ್ ಆಗಿ ಕಾಣುತ್ತೀರಿ.