Asianet Suvarna News Asianet Suvarna News

ಬಣ್ಣ ಮಾಸಿದ ನವಿಲು ಗರಿಯನ್ನು ಏನು ಮಾಡಬಹುದು?

ಚಂದ ಅಂತಾನೋ, ಪೂಜೆಗೆ ಅಂತಾನೋ ನವಿಲುಗರಿ ತಂದಿರ್ತೇವೆ. ಅನೇಕ ವರ್ಷಗಳ ನಂತ್ರ ಅದ್ರ ಬಣ್ಣ ಬದಲಾಗುತ್ತದೆ. ಆದ್ರೆ ಅದನ್ನು ಕಸಕ್ಕೆ ಎಸೆಯಬಾರದು ಅಂತಾ ದೊಡ್ಡವರು ಹೇಳಿದ್ದು ಕೇಳಿರ್ತೇವೆ. ಹಾಗಿದ್ರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
 

What To Do With Old Peacock Feathers
Author
First Published Nov 3, 2022, 1:04 PM IST

ನೋಡಲು ಅತ್ಯಂತ ಸುಂದರ ವಸ್ತುಗಳಲ್ಲಿ ನವಿಲು ಗರಿ ಕೂಡ ಒಂದು. ಎಲ್ಲರನ್ನು ಆಕರ್ಷಿಸುವ ಶಕ್ತಿ ಅದಕ್ಕಿದೆ. ಮಕ್ಕಳಿಗೆ ಬಲು ಇಷ್ಟ ನವಿಲುಗರಿ. ಈ ನವಿಲು ಗರಿಗೆ ಹಿಂದು ಧರ್ಮದಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಇದು ಶ್ರೀಕೃಷ್ಣನಿಗೂ ಪ್ರಿಯವಾದ ವಸ್ತು. ನವಿಲು ಗರಿ ರಾಹು ಗ್ರಹವನ್ನು ಶಾಂತಗೊಳಿಸುತ್ತದೆ ಎಂದು ನಂಬಲಾಗಿದೆ. ಶಾಸ್ತ್ರಗಳಲ್ಲೂ ನವಿಲು ಗರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಅನೇಕರ ಮನೆಯಲ್ಲಿ ನವಿಲು ಗರಿಯಿರುತ್ತದೆ. ಕೆಲವರು ಶ್ರೀಕೃಷ್ಣನ ಜೊತೆ ನವಿಲು ಗರಿಯನ್ನಿಟ್ಟು ಪೂಜೆ ಮಾಡ್ತಾರೆ. ಮತ್ತೆ ಕೆಲವರು ಅಲಂಕಾರದ ದೃಷ್ಟಿಯಿಂದ ಇದನ್ನು ಮನೆಯಲ್ಲಿ ಇಡ್ತಾರೆ. ನವಿಲು ಗರಿ ತುಂಬಾ ಹಳೆಯದಾದಾಗ ಮತ್ತು ಅದರ ಬಣ್ಣ ಮಸುಕಾಗಲು ಪ್ರಾರಂಭಿಸಿದಾಗ ಅದನ್ನು ಏನು ಮಾಡಬೇಕೆಂದು ಎಲ್ಲರಿಗೂ ತಿಳಿದಿಲ್ಲ.

ನವಿಲು ಗರಿ (Peacock Feather) ಹಾಳಾಗಿದೆ ಅಂತ ಅದನ್ನು ಕಸ (Garbage) ಕ್ಕೆ ಹಾಕುವಂತಿಲ್ಲ. ಅದು ಅಶುಭ ಫಲವನ್ನು ನಮಗೆ ನೀಡುತ್ತದೆ. ಹೀಗೆ ಮಾಡಿದ್ರೆ ತಾಯಿ ಲಕ್ಷ್ಮಿ (Lakshmi) ನಮ್ಮ ಮೇಲೆ ಕೋಪಗೊಳ್ಳುತ್ತಾಳೆ. ಹಾಗಾಗಿ ಹಳೆಯ ನವಿಲು ಗರಿಯನ್ನು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಹಳೆಯ ನವಿಲು ಗರಿಯನ್ನು ಹೀಗೆ ಬಳಕೆ ಮಾಡಿ :
ಪುಸ್ತಕ (Book) ದ ಮಧ್ಯದಲ್ಲಿ ನವಿಲು ಗರಿ ಇಟ್ಟು ನೋಡಿ :
ನವಿಲು ಗರಿ ಹಾಳಾಗ್ತಿದೆ, ಬಣ್ಣ (Color) ಮಾಸುತ್ತಿದೆ ಎಂದಾದ್ರೆ ಪುಸ್ತಕಗಳ ಮಧ್ಯದಲ್ಲಿ ಹಳೆಯ ನವಿಲು ಗರಿಗಳನ್ನು ಇಡಬಹುದು. ಇದರಿಂದ ನಮ್ಮ ಜ್ಞಾನದಲ್ಲಿ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಪುಸ್ತಕದ ಮಧ್ಯೆ ನವಿಲುಗರಿಯಿದ್ರೆ ಪುಸ್ತಕವನ್ನು ಓದುವಾಗ ಮನಸ್ಸು ಶಾಂತವಾಗುತ್ತದೆ. ಓದಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಅಧ್ಯಯನದಲ್ಲಿ ಸಾಕಷ್ಟು ಪ್ರಗತಿ ಕಾಣಬಹುದು. ಹಾಗಾಗ ವಿದ್ಯಾರ್ಥಿಗಳು ಹಳೆಯ ನವಿಲುಗರಿಯನ್ನು ಪುಸ್ತಕದಲ್ಲಿ ಇಟ್ಟುಕೊಳ್ಳಿ. ನೀವು ವರ್ಷಾನುಗಟ್ಟಲೆ ಪುಸ್ತಕದಲ್ಲಿ ನವಿಲುಗರಿ ಇಟ್ಟರೂ ಅದು ಹಾಳಾಗುವುದಿಲ್ಲ. ಪುಸ್ತಕಕ್ಕೆ ಹುಳು ಕೂಡ ಹಿಡಿಯೋದಿಲ್ಲ.

Vastu Tips: ಮನೆಯ ನೆಮ್ಮದಿ ಹಾಳು ಮಾಡುವ ಜೇಡರ ಬಲೆ

ನವಿಲು ಗರಿಯನ್ನು ಇಲ್ಲಿಡಿ : ನವಿಲುಗರಿ ಹಳೆಯದಾಗಿದೆ, ಪೂಜೆಗೆ ಯೋಗ್ಯವಲ್ಲ ಎನ್ನುವವರು ಅದನ್ನು ಸ್ಟೋರ್ ರೂಮಿ (Store Room) ನಲ್ಲಿ ಇಡಬಹುದು. ನಕಾರಾತ್ಮಕ ಶಕ್ತಿ ಸ್ಟೋರ್ ರೂಂನಲ್ಲಿ ನೆಲೆಸಿದ್ದರೆ  ನವಿಲು ಗರಿಯನ್ನು ಇಡೋದ್ರಿಂದ ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ. ಸ್ಟೋರ್ ರೂಮ್ ನಲ್ಲೂ ಧನಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ. ಮನೆಯಲ್ಲಿ ಸಮಸ್ಯೆ ಕಾಡ್ತಿದೆ ಎಂದಾದ್ರೆ ಸ್ಟೋರ್ ರೂಮಿನ ಬಗ್ಗೆಯೂ ನೀವು ಗಮನ ನೀಡಿ. ಸ್ಟೋರ್ ರೂಮ್ ಸ್ವಚ್ಛಗೊಳಿಸಿ ನಂತ್ರ ನವಿಲು ಗರಿಯನ್ನು ಇಡಿ. ಇದ್ರಿಂದ ಅನೇಕ ರೀತಿಯಲ್ಲಿ ಲಾಭ ಕಾಣಬಹುದು.  

ಮುರಿದ ನವಿಲು ಗರಿಯನ್ನು ಇಲ್ಲಿ ಬಿಡಿ : ಹಾಳಾದ, ಮುರಿಯುತ್ತಿರುವ ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭವಲ್ಲ. ಹಾಗಾಗಿ ಅದನ್ನು ನೀವು ತಕ್ಷಣ ಮನೆಯಿಂದ ಹೊರಗೆ ಹಾಕಬೇಕು. ಯಾಕೆಂದ್ರೆ ಹಾಳಾದ ನವಿಲುಗರಿ ರಾಹುವನ್ನು ದುರ್ಬಲಗೊಳಿಸಲು ವಿಫಲವಾಗುತ್ತದೆ. ಇದ್ರಿಂದ ಬಲಪಡೆಯುವ ರಾಹು, ಅನೇಕ ಸಮಸ್ಯೆ ತಂದೊಡ್ಡುತ್ತಾನೆ. ಹಾಗಾಗಿ ಹಾಳಾದ ನವಿಲುಗರಿಯನ್ನು ನೀವು ಮನೆಯಿಂದ ಹೊರಗೆ ಹಾಕಬೇಕು. ಇದನ್ನು ಕಸಕ್ಕೆ ಎಸೆಯಬಾರದು. ಇದನ್ನು ಶುದ್ಧವಾದ, ಹರಿಯುವ ನೀರಿನಲ್ಲಿ ಬಿಡಬೇಕು.  ಹೀಗೆ ಮಾಡಿದ್ರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ರಾತ್ರಿ ಮಹಿಳೆಯರು ಈ ಕಾರಣಕ್ಕೆ ಕೂದಲು ಕಟ್ಟಿ ಮಲಗ್ಬೇಕು

ಆರ್ಥಿಕ ಸ್ಥಿತಿ ಸುಧಾರಿಸಲು ಹೀಗೆ ಮಾಡಿ : ಒಂದ್ವೇಳೆ ಮನೆಯಲ್ಲಿರುವ ನವಿಲು ಗರಿ ಪ್ರಯೋಜನೆ ಬರ್ತಿಲ್ಲ, ಸಂಪೂರ್ಣ ಹಾಳಾಗ್ತಿದೆ ಎಂದಾದ್ರೆ ನೀವು ಅದನ್ನು ಬಾಳೆ ಗಿಡದ ಮೇಲೆ ಹಾಕಬಹುದು. ಇದರಿಂದ ಮನೆಯ  ಆರ್ಥಿಕ ಸಮಸ್ಯೆ  ಕಡಿಮೆಯಾಗುತ್ತದೆ. ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆ. 

Follow Us:
Download App:
  • android
  • ios