ಹೊಸ ಜೀನ್ಸ್ ಟೈಟ್ ಆಗ್ತಿದ್ಯಾ?, ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ…
ನೀವು ಯಾವುದೇ ಹೊಸ ಜೀನ್ಸ್ ಮನೆಗೆ ತಂದ ತಕ್ಷಣ ಅದು ತುಂಬಾನೆ ಬಿಗಿಯಾಗಿದೆ ಎಂದು ಗೊತ್ತಾದ್ರೆ ಏನು ಮಾಡ್ತೀರಾ? ಒಂದು ವೇಳೆ ಆ ಜೀನ್ಸ್ ಗೆ ರಿಟರ್ನ್ ಅಥವಾ ಎಕ್ಸ್ ಚೇಂಜ್ ಆಯ್ಕೆ ಬೇರೆ ಇಲ್ಲ ಎಂದಿಟ್ಟುಕೊಳ್ಳಿ. ಏನು ಮಾಡ್ತೀರಾ ಅವಾಗ? ಹೊಸ ಜೀನ್ಸ್ ನ್ನು ಮೂಲೆಗೆ ಹಾಕ್ತೀರಾ?ಅಥವಾ ಬೇರೆಯವರಿಗೆ ಕೊಡುವ ಯೋಚನೆ ಮಾಡ್ತೀರಾ? ಚಿಂತಿಸುವ ಅಗತ್ಯವಿಲ್ಲ. ಟೈಟ್ ಆಗಿರುವ ಜೀನ್ಸ್ ನ್ನು ಹಿಗ್ಗಿಸಲು ನೀವು ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳಬಹುದು.
ನೀವು ಈಗಷ್ಟೇ ಜೀನ್ಸ್ ಖರೀದಿಸಿದ್ದರೆ ಮತ್ತು ಅದು ಫಿಟ್ಟಿಂಗ್ (jeans fitting) ಬರದಿದ್ದರೆ ಅಥವಾ ತುಂಬಾ ಬಿಗಿಯಾಗದಿದ್ದರೆ, ನೀವು ಅಸಮಾಧಾನಗೊಳ್ಳುತ್ತೀರಿ ಅಲ್ವಾ?. ಅದನ್ನು ಮತ್ತೆ ಹಿಂದಿರುಗಿಸುವುದು ಮತ್ತು ನಂತರ ಹೊಸ ಜೀನ್ಸ್ ಅನ್ನು ಆರ್ಡರ್ ಮಾಡುವುದು ಬೇಜಾರಿನ ಕೆಲಸವಾಗಿರುತ್ತೆ. ಕೆಲವೊಮ್ಮೆ ನಾವು ಖರೀದಿದಂತಹ ಜೀನ್ಸ್ ನಂತದ್ದೇ ಸಿಗದೇ ಇರಬಹುದು… ಇಂತಹ ಸಂದರ್ಭ ಬಂದಾಗ ತಲೆಕೆಡಿಸುವ ಬದಲು ಈ ಟ್ರಿಕ್ಸ್ ಟ್ರೈ ಮಾಡಿ.
ಆಗಷ್ಟೇ ಖರೀದಿಸಿದ ಜೀನ್ಸ್ ಟೈಟ್ ಎಂದು ಅನಿಸಿದಾಗಲೆಲ್ಲಾ, ಅದನ್ನು ರಿಟರ್ನ್ ಮಾಡೋ ಯೋಚನೆ ಮಾಡೋ ಬದಲು ಬಿಗಿಯಾದ ಜೀನ್ಸ್ ಅನ್ನು ಹಿಗ್ಗಿಸಲು ಈ ವಿಶೇಷ ಸಲಹೆಗಳನ್ನು ಟ್ರೈ ಮಾಡಿ. ಇದು ನಿಮ್ಮ ಜೀನ್ಸ್ ನ ಫಿಟ್ಟಿಂಗ್ ಅನ್ನು ಸಹ ಉತ್ತಮಗೊಳಿಸುತ್ತದೆ ಮತ್ತು ಅದು ಮೃದು ಮತ್ತು ಹೊಳೆಯೋದು ಖಚಿತ. ಜೀನ್ಸ್ ಅನ್ನು ಹೇಗೆ ಸ್ಟ್ರೆಚ್ ಮಾಡೋದು ಎಂದು ತಿಳಿಯೋಣ…
ಹಗುರವಾದ ಬಿಸಿ ನೀರನ್ನು ಚಿಮುಕಿಸಿ ಮತ್ತು ಹಿಗ್ಗಿಸಿ
ಮೊದಲು ನೀವು ಜೀನ್ಸ್ ಅನ್ನು ನೆಲದ ಮೇಲೆ ಇಡಬೇಕು ಮತ್ತು ಎರಡೂ ಬದಿಗಳಲ್ಲಿ ಉಗುರುಬೆಚ್ಚಗಿನ ನೀರನ್ನು ಚಿಮುಕಿಸಬೇಕು. ಸೊಂಟದ ಬಳಿ ನೀರನ್ನು ಸಿಂಪಡಿಸಿದ ನಂತರ, ಅದನ್ನು ಜೇಬಿನಿಂದ ಸ್ವಲ್ಪ ಸಮಯದವರೆಗೆ ಎಳೆಯಿರಿ. ಇದನ್ನು ಕನಿಷ್ಠ 10 ರಿಂದ 15 ಬಾರಿ ಪುನರಾವರ್ತಿಸಿ.
ಬಿಸಿ ನೀರನ್ನು ಸಿಂಪಡಿಸುವುದರಿಂದ ಜೀನ್ಸ್ ಹಿಗ್ಗುತ್ತದೆ. ಇದು ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳಬಹುದು. ಆದರೆ ನಿಮ್ಮ ಜೀನ್ಸ್ ಖಂಡಿತವಾಗಿಯೂ ಸ್ಟ್ರೆಚ್ (stretching jeans) ಆಗುತ್ತೆ. ಅಲ್ಲದೇ ಇದನ್ನು ನೀವು ಮುಂದೆ ಆರಾಮವಾಗಿ ಧರಿಸಬಹುದು. ಬೇಕಾದರೆ ನೀವು ಸಹ ಟ್ರೈ ಮಾಡಿ ನೋಡಿ.
ವಾಟರ್ ಬಾತ್ (Water bath)
ಈ ಪ್ರಕ್ರಿಯೆಯಲ್ಲಿ, ಬಿಸಿ ನೀರು ಬೇಕಾಗುತ್ತದೆ. ಇದರೊಂದಿಗೆ ಬಾತ್ ಟಬ್, ನೀರಿನ ಸ್ಪ್ರೇ ಬಾಟಲಿ ಮತ್ತು ಅಳತೆ ಮಾಡುವ ಪರಿಕರಗಳು. ಸ್ನಾನದ ಹಂತವು ನಿಮಗೆ ಸುಮಾರು 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮೊದಲನೆಯದಾಗಿ, ಜೀನ್ಸ್ ನ ಅಳತೆಯನ್ನು ತೆಗೆದುಕೊಳ್ಳಬೇಕಾಗುತ್ತದೆ, ಇದರಿಂದ ಜೀನ್ಸ್ ಅನ್ನು ಎಷ್ಟು ಹಿಗ್ಗಿಸಬಹುದು ಅನ್ನೋದನ್ನು ತಿಳಿಯಬಹುದು.
ಮೊದಲು ನೀವು ಜೀನ್ಸ್ ಧರಿಸಿ ನಂತರ 15 ನಿಮಿಷಗಳ ಕಾಲ ಬಾತ್ ಟಬ್ ನಲ್ಲಿ ಕುಳಿತುಕೊಳ್ಳಿ. ಜೀನ್ಸ್ ಸಂಪೂರ್ಣವಾಗಿ ನೀರಿನಲ್ಲಿ ನೆನೆಯುವವರೆಗೆ ನೀರಿನಲ್ಲಿ ಕುಳಿತುಕೊಳ್ಳಿ. ಈಗ ಜೀನ್ಸ್ ಬಿಗಿಯಾಗಿದ್ದಲ್ಲಿ, ತುಂಬಾ ನಿರಾಳವಾದ ಭಾವನೆ ಇರುತ್ತದೆ. ಜೀನ್ಸ್ ಸಂಪೂರ್ಣವಾಗಿ ಒದ್ದೆಯಾದಾಗ, ಅದನ್ನು ಎರಡೂ ಬದಿಗಳಿಂದ ಹಿಡಿದುಕೊಳ್ಳಿ ಗಟ್ಟಿಯಾಗಿ ಎರಡೂ ಬದಿಗಳಿಂದ ಎಳೆಯಿರಿ. ನಂತರ ಜೀನ್ಸ್ ಅನ್ನು ಬಿಸಿಲಿನಲ್ಲಿ ಒಣಗಲು ಹರಡಿ. ನಿಮ್ಮ ಬಿಗಿಯಾದ ಜೀನ್ಸ್ ಫಿಟ್ ಆಗುತ್ತದೆ.
ಸ್ಪ್ರೇ ಮಾಡಿ ಸ್ಟ್ರೆಚ್ ಮಾಡಿ
ಉಗುರು ಬೆಚ್ಚಗಿನ ನೀರು, ಸ್ಪ್ರೇ ಬಾಟಲಿ, ಅಳತೆ ಟೇಪ್ ಈ ಪ್ರಕ್ರಿಯೆಯಲ್ಲಿ ಉಪಯುಕ್ತವಾಗಿರುತ್ತದೆ. ಇದಕ್ಕೆ ಸುಮಾರು 45 ನಿಮಿಷಗಳು ಬೇಕಾಗಬಹುದು. ಮೊದಲಿಗೆ, ನಿಮ್ಮ ಜೀನ್ಸ್ ಧರಿಸಿ, ಆದರೆ ನೀವು ಹೆಚ್ಚು ಬಿಗಿಯಾದ ಭಾವನೆಯನ್ನು ಹೊಂದಿರುವ ಸ್ಥಳದಲ್ಲಿ, ಉಗುರುಬೆಚ್ಚಗಿನ ನೀರನ್ನು ಸಿಂಪಡಿಸಿ ಮತ್ತು ನಂತರ ಅದನ್ನು ಎಳೆಯಿರಿ. ಸ್ವಲ್ಪ ಸಮಯದವರೆಗೆ ಗಾಳಿಯು ಅದರೊಳಗೆ ಬೀಸಲು ಬಿಡಿ ಮತ್ತು ಅದೇ ಪ್ರಕ್ರಿಯೆಯನ್ನು ಮತ್ತೆ ಮಾಡಿ. ಇದರ ನಂತರ, ಜೀನ್ಸ್ ಅನ್ನು ಒಣಗಲು ಹರಡಿ.