ಕೇಶದ ಅಂದ ಹೆಚ್ಚಿಸುವ ಮಾಂತ್ರಿಕ ಹೇರ್ ಬನ್ ಪಿನ್: ಲಲನೆಯರ ಸೌಂದರ್ಯ ವೃದ್ಧಿಗೆ ಈ ಟಿಪ್ಸ್
ಸೌಂದರ್ಯ ಪ್ರಿಯರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ವಿವಿಧ ಬಗೆಯ ಹೇರ್ ಪಿನ್‌ಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಕ್ವೀನ್ ಹೇರ್ ಪಿನ್, ಟಸೆಲ್ ಬನ್ ಪಿನ್, ಕುಂದನ್ ಹೂವಿನ ಪಿನ್ ಹಾಗೂ ಮೆಟಲ್ ಬನ್ ಪಿನ್‌ಗಳು ನಿಮ್ಮ ಕೇಶಶೈಲಿಗೆ ಹೊಸ ಮೆರುಗು ನೀಡಿ, ನಿಮ್ಮ ಅಂದವನ್ನು ಇಮ್ಮಡಿಗೊಳಿಸುತ್ತವೆ.

ಹೇರ್ಸ್ಟೈಲ್ ಮೇಲೆ ಗಮನ
ಸೌಂದರ್ಯದ ಮೇಲೆ ಅತೀವ ಕಾಳಜಿ ಇರುವವರು ಸಾಮಾನ್ಯವಾಗಿ ಹೇರ್ಸ್ಟೈಲ್ ಮೇಲೆಯೇ ನಿಗಾ ವಹಿಸುತ್ತಾರೆ. ಇದೇ ಕಾರಣಕ್ಕೆ ಹೇರ್ ಸ್ಟೈಲ್ನಲ್ಲಿ ಬಗೆಬಗೆ ರೂಪಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
ಕ್ವೀನ್ ಹೇರ್ ಪಿನ್ ಸ್ಟೈಲ್
ಅವುಗಳಲ್ಲಿ ಕ್ವೀನ್ ಹೇರ್ ಪಿನ್ ಸ್ಟೈಲ್ ಇದೀಗ ನೀರೆಯರ ಮನಸ್ಸನ್ನು ಗೆದ್ದಿದೆ. ನೀವು ಬನ್ ಧರಿಸಿದಾಗ ನಿಮ್ಮ ಕೂದಲು ಸೊಗಸಾಗಿ ಕಾಣಬೇಕೆಂದು ಬಯಸಿದರೆ, ಸರಳ ಹೇರ್ ಪಿನ್‌ಗಳ ಬದಲಿಗೆ ಸ್ಟೈಲಿಶ್ ಅಥವಾ ಫ್ಯಾನ್ಸಿ ಹೇರ್ ಪಿನ್ ಮಾಡಿದರೆ, ನಿಮ್ಮ ಅಂದ ಇಮ್ಮಡಿಯಾಗುತ್ತದೆ.
ನೀಲಿ ಹೂವಿನ ಸೆಟ್
ಇದು ಒಂದೇ ಪಿನ್ ಅಲ್ಲ, ಬದಲಾಗಿ ಸಣ್ಣ ಮತ್ತು ಸುಂದರವಾದ ನೀಲಿಹೂವುಗಳ ಸೆಟ್. ನೀವು ಈ ಹೂವುಗಳನ್ನು ನಿಮ್ಮ ಜಡೆ, ಪೋನಿಟೇಲ್ ಅಥವಾ ಸಡಿಲ ಕೂದಲಿನಲ್ಲೂ ಧರಿಸಬಹುದು.
ಕುಂದನ್ ಹೂವಿನ ಪಿನ್ಸ್ಟೈಲ್
ನಾಣ್ಯ ಮತ್ತು ಗೆಜ್ಜ್ಎ ವಿನ್ಯಾಸಗಳನ್ನು ಹೊಂದಿರುವ ಹೇರ್ ಪಿನ್‌ಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಇದನ್ನು ಕುಂದನ್ ಮತ್ತು ಹೂವಿನ ವಿನ್ಯಾಸಗಳೊಂದಿಗೆ ಈ ಹೇರ್ ಪಿನ್‌ಗಳನ್ನು ಖರೀದಿಸಬಹುದು. ಈ ಪಿನ್‌ಗಳನ್ನು ಸರಳವಾದ ಮಧ್ಯ-ಭಾಗದ ಕೂದಲಿನ ಬನ್‌ನಲ್ಲಿ ಬಳಸಿದರೆ ಸೂಪರ್ ಲುಕ್ ನೀಡುತ್ತದೆ.
ಬಿಳಿ- ಗುಲಾಬಿ ಹೂವಿನ ಬಾಚಣಿಗೆ ಕ್ಲಿಪ್
ಈ ಸುಂದರವಾದ ಹೂವುಗಳಿಂದ ಕೂಡಿದ ಕ್ಲಿಪ್ ಅನ್ನು ನಿಮ್ಮ ಜಡೆಯಲ್ಲಿ ಮಾತ್ರವಲ್ಲದೆ ನಿಮ್ಮ ಪೋನಿಟೇಲ್‌ನಲ್ಲಿಯೂ ಧರಿಸಬಹುದು. ಇದರ ಬಾಚಣಿಗೆಯಂತಹ ವಿನ್ಯಾಸವು ನಿಮ್ಮ ಕೂದಲಿಗೆ ಜೋಡಿಸಲು ಸುಲಭಗೊಳಿಸುತ್ತದೆ.
ಸಕತ್ ಟ್ರೆಂಡಿ ಟಸೆಲ್ ಬನ್ ಪಿನ್
ಮದುವೆ, ಮುಂಜಿ ಇತ್ಯಾದಿ ಸಮಾರಂಭಕ್ಕೆ ಹೋಗುತ್ತಿದ್ದರೆ, ಸೀರೆಗಳಿಗೂ ಸಕತ್ ಲುಕ್ ಕೊಡುವುದು ಟಸೆಲ್ ಬನ್ ಪಿನ್‌ಗಳು. ನಿಮ್ಮ ಬನ್‌ಗೆ ಹೆವಿ ಲುಕ್ ನೀಡಲು ಅಂತಹ ಪಿನ್ ಅನ್ನು ನಿಮ್ಮ ಕೂದಲಿನಲ್ಲಿ ನೇತುಹಾಕಿ. ನಿಮ್ಮ ಕೂದಲಿಗೆ ಟಸೆಲ್ ಪೆಂಡೆಂಟ್ ಪಿನ್‌ಗಳನ್ನು ಧರಿಸುವುದರಿಂದ ಲೆಹೆಂಗಾ ಅಥವಾ ಸೀರೆಯ ಲುಕ್ ಸುಂದರವಾಗಿ ಕಾಣುವಂತೆ ಮಾಡಬಹುದು.
ಮೆಟಲ್ ಹೆವಿ ಸ್ಟೇಟ್‌ಮೆಂಟ್ ಬನ್ ಪಿನ್‌ಗಳು
ಮೊದಲು ಬ್ರೇಡ್ ಅನ್ನು ಹೆಣೆಯಿರಿ ಮತ್ತು ಅದನ್ನು ಬನ್‌ನಲ್ಲಿ ಭದ್ರಪಡಿಸಿ. ಈಗ, ಹೆವಿ ಮೆಟಲ್ ಬನ್ ಪಿನ್ ಅನ್ನು ನೀವು ಬಯಸಿದ ಸ್ಥಳದಲ್ಲಿ ಇರಿಸಿ. ಲೋಹದ ಹೆವಿ ಸ್ಟೇಟ್‌ಮೆಂಟ್ ಬನ್ ಪಿನ್ ಅನ್ನು ಮಧ್ಯದಲ್ಲಿ ಇರಿಸಿ. ಇದು ಸಾಕಷ್ಟು ಭಾರವಾಗಿರುತ್ತದೆ ಮತ್ತು ತುಂಬಾ ಸೊಗಸಾಗಿ ಕಾಣುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

