MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • Miss Universe India 2026: ಈಜುಡುಗೆ ಸ್ಪರ್ಧೆಯಲ್ಲಿ ಬೆಂಗಳೂರಿನಲ್ಲಿ ಮಿಂಚಿದ ದೇಶದ 52 ಸುಂದರಿಯರು

Miss Universe India 2026: ಈಜುಡುಗೆ ಸ್ಪರ್ಧೆಯಲ್ಲಿ ಬೆಂಗಳೂರಿನಲ್ಲಿ ಮಿಂಚಿದ ದೇಶದ 52 ಸುಂದರಿಯರು

ಮಿಸ್ ಯೂನಿವರ್ಸ್ ಇಂಡಿಯಾ 2026 ಸ್ಪರ್ಧೆಯ ಭಾಗವಾಗಿ ಬೆಂಗಳೂರಿನ ವಂಡರ್‌ಲಾದಲ್ಲಿ ಸ್ವಿಮ್‌ಸೂಟ್ ಸುತ್ತು ನಡೆಯಿತು. ಜೈಪುರದಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಗೂ ಮುನ್ನ ನಡೆದ ಈ ನಿರ್ಣಾಯಕ ಸುತ್ತಿನಲ್ಲಿ, ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ 52 ಫೈನಲಿಸ್ಟ್‌ಗಳು ಭಾಗವಹಿಸಿದ್ದರು.

1 Min read
Author : Suchethana D
Published : Jul 30 2026, 05:14 PM IST
Share this Photo Gallery
  • FB
  • TW
  • Linkdin
  • Whatsapp
16
ಆಗಸ್ಟ್​ನಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2026 ಸ್ಪರ್ಧೆ
Image Credit : Social Media

ಆಗಸ್ಟ್​ನಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2026 ಸ್ಪರ್ಧೆ

ಬರುವ ಆಗಸ್ಟ್ 23 ರಂದು ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ 2026 (Miss Universe India) ಸ್ಪರ್ಧೆಯ ಗ್ರ್ಯಾಂಡ್​ ಫಿನಾಲೆಗೂ ಮುನ್ನ, ಬೆಂಗಳೂರು, ಇಂದೋರ್ ಮತ್ತು ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಇವುಗಳ ಒಂದೊಂದು ರೌಂಡ್​ಗಳನ್ನು ಆಯೋಜಿಸಲಾಗುತ್ತಿದೆ. ಇವೆಲ್ಲವೂ ಮೌಲ್ಯಮಾಪನ ಸುತ್ತುಗಳಾಗಿವೆ. ಮಿಸ್ ಯೂನಿವರ್ಸ್ ಇಂಡಿಯಾ 2026 ವಿಜೇತರು ಅಂತರರಾಷ್ಟ್ರೀಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬೆಂಗಳೂರಿನಲ್ಲಿ ಸ್ವಿಮ್​ ಸೂಟ್​ ಸುತ್ತು
Image Credit : Social Media

ಬೆಂಗಳೂರಿನಲ್ಲಿ ಸ್ವಿಮ್​ ಸೂಟ್​ ಸುತ್ತು

ಇದರ ಅಂಗವಾಗಿ ಬೆಂಗಳೂರಿನಲ್ಲಿ ನಿನ್ನೆ ಅರ್ಥಾತ್​ ಜುಲೈ 29ರಂದು ಸ್ವಿಮ್‌ಸೂಟ್ (Swim Suit) ಸುತ್ತು ಬೆಂಗಳೂರಿನ ವಂಡರ್‌ಲಾದಲ್ಲಿ ನಡೆಯಿತು.ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟ ಗೆಲ್ಲುವ ಸ್ಪರ್ಧಿಗೆ ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ.

Related Articles

Related image1
ಇಂಟರ್​ನೆಟ್​ ಇಲ್ದೇ ಕಥೆನೂ ಹೇಳತ್ತೆ, 760 ರೂ.ಗೆ ಹೇಳಿದ್ದೆಲ್ಲಾ ಕೇಳತ್ತೆ: 8 ವರ್ಷದ ಪೋರನ ಅದ್ಭುತ ಸಂಶೋಧನೆ
Related image2
ಭದ್ರತಾ ಸಲಹೆಗಾರ ಅಜಿತ್ ದೋವಲ್ ದಿಢೀರ್​ ಸಂಸತ್ತಿಗೆ ಎಂಟ್ರಿ: ವಿಪಕ್ಷಗಳು ತಲ್ಲಣ- ಏನಿದರ ವಿಶೇಷತೆ
36
52 ಫೈನಲಿಸ್ಟ್‌ಗಳು
Image Credit : Social Media

52 ಫೈನಲಿಸ್ಟ್‌ಗಳು

ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ 52 ಫೈನಲಿಸ್ಟ್‌ಗಳು ಪೂಲ್‌ಸೈಡ್ ರ್ಯಾಂಪ್‌ನಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ ತೀರ್ಪುಗಾರರ ಗಮನ ಸೆಳೆದರು.

46
ನಿರ್ಣಾಯಕ ಹಂತ
Image Credit : Social Media

ನಿರ್ಣಾಯಕ ಹಂತ

ಗ್ರ್ಯಾಂಡ್ ಫಿನಾಲೆಗೂ ಮುನ್ನ ಸ್ಪರ್ಧೆ ನಿರ್ಣಾಯಕ ಹಂತ ತಲುಪಿದ್ದು, ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳ ಮಾನದಂಡಗಳ ಆಧಾರದ ಮೇಲೆ ಸ್ಪರ್ಧಿಗಳ ಪ್ರದರ್ಶನವನ್ನು ಮೌಲ್ಯಮಾಪನ ಮಾಡಲಾಯಿತು.

56
ಸ್ಪರ್ಧಿಗಳ ಆತ್ಮವಿಶ್ವಾಸದ ಸ್ಪರ್ಧೆ
Image Credit : Social Media

ಸ್ಪರ್ಧಿಗಳ ಆತ್ಮವಿಶ್ವಾಸದ ಸ್ಪರ್ಧೆ

ಸ್ವಿಮ್‌ಸೂಟ್ ಸುತ್ತು ಸ್ಪರ್ಧೆಯ ಪ್ರಮುಖ ಹಂತಗಳಲ್ಲಿ ಒಂದಾಗಿದ್ದು, ಸ್ಪರ್ಧಿಗಳ ಆತ್ಮವಿಶ್ವಾಸ, ವ್ಯಕ್ತಿತ್ವ, ವೇದಿಕೆ ಮೇಲಿನ ನಡಿಗೆ ಹಾಗೂ ಒಟ್ಟಾರೆ ಪ್ರಸ್ತುತಿಯನ್ನು ತೀರ್ಪುಗಾರರು ಸೂಕ್ಷ್ಮವಾಗಿ ಪರಿಶೀಲಿಸಿದರು. ಈ ಬಾರಿ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರುವ ಸ್ಪರ್ಧಿಗಳು ಭಾಗವಹಿಸಿದ್ದು, ಭಾರತದ ಸಾಂಸ್ಕೃತಿಕ ವೈವಿಧ್ಯತೆಯೂ ಕಾರ್ಯಕ್ರಮದಲ್ಲಿ ಪ್ರತಿಬಿಂಬಿತವಾಯಿತು.

66
ಇಲ್ಲಿಯವರೆಗಿನ ಸ್ಪರ್ಧೆ
Image Credit : Social Media

ಇಲ್ಲಿಯವರೆಗಿನ ಸ್ಪರ್ಧೆ

ಇದಕ್ಕೂ ಮುನ್ನ ಸ್ಯಾಶಿಂಗ್ ಸಮಾರಂಭ, ಪರಿಚಯಾತ್ಮಕ ರ್ಯಾಂಪ್​ ವಾಕ್, ಭಾಷಣ ಸುತ್ತು ಹಾಗೂ ಗಾಲಾ ಡಿನ್ನರ್ ಸೇರಿದಂತೆ ಹಲವು ಸುತ್ತುಗಳು ಯಶಸ್ವಿಯಾಗಿ ನಡೆದಿದ್ದವು. ಗ್ರ್ಯಾಂಡ್ ಫಿನಾಲೆಗೂ ಮುನ್ನ ಇನ್ನೂ ಹಲವು ಮೌಲ್ಯಮಾಪನ ಸುತ್ತುಗಳು ನಡೆಯಲಿದ್ದು, ಬಳಿಕ ಎಲ್ಲ ಫೈನಲಿಸ್ಟ್‌ಗಳು ಆಗಸ್ಟ್ 23ರಂದು ಜೈಪುರದಲ್ಲಿ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸೌಂದರ್ಯ ಸ್ಪರ್ಧೆ
ವಿಶ್ವ ಸುಂದರಿ
ಫ್ಯಾಷನ್
ಮಹಿಳೆಯರು
ಈಜುಕೊಳ
Latest Videos
Recommended Stories
Recommended image1
ಈ ಕಾಲದ ಹುಡುಗಿಯರ ಮನಗೆದ್ದ ಲೇಟೆಸ್ಟ್ ಚೈನ್ ಮಾಂಗಲ್ಯ ಡಿಸೈನ್ಸ್ ಇವೇ ನೋಡಿ
Recommended image2
ಶಾಂಪೂಗೆ ಕಾಫಿ ಸೇರಿಸಿದರೆ ಕೂದಲು ಉದುರೋದು ಕಡಿಮೆಯಾಗುತ್ತಾ? ತಜ್ಞರು ಏನಂತಾರೆ!
Recommended image3
Johnson & Johnson ಪೌಡರ್​ನಿಂದ ಕ್ಯಾನ್ಸರ್​: 53 ಸಾವಿರ ಕೋಟಿ ರೂ. ಪರಿಹಾರ ನೀಡಲು ಕಂಪೆನಿ ಒಪ್ಪಿಗೆ
Related Stories
Recommended image1
ಇಂಟರ್​ನೆಟ್​ ಇಲ್ದೇ ಕಥೆನೂ ಹೇಳತ್ತೆ, 760 ರೂ.ಗೆ ಹೇಳಿದ್ದೆಲ್ಲಾ ಕೇಳತ್ತೆ: 8 ವರ್ಷದ ಪೋರನ ಅದ್ಭುತ ಸಂಶೋಧನೆ
Recommended image2
ಭದ್ರತಾ ಸಲಹೆಗಾರ ಅಜಿತ್ ದೋವಲ್ ದಿಢೀರ್​ ಸಂಸತ್ತಿಗೆ ಎಂಟ್ರಿ: ವಿಪಕ್ಷಗಳು ತಲ್ಲಣ- ಏನಿದರ ವಿಶೇಷತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved