ಶಾಂಪೂಗೆ ಕಾಫಿ ಸೇರಿಸಿದರೆ ಕೂದಲು ಉದುರೋದು ಕಡಿಮೆಯಾಗುತ್ತಾ? ತಜ್ಞರು ಏನಂತಾರೆ!
Hair Care Tips: ಶಾಂಪೂ ಗೆ ಕಾಫಿ ಸೇರಿಸುವ ಟ್ರೆಂಡ್ ವೈರಲ್ ಆಗಿದೆ. ಇದು ನಿಜವಾಗಿಯೂ ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆಯೇ?ಕೂದಲಿನ ಹೊಳಪನ್ನು ಹೆಚ್ಚಿಸಲು ಮತ್ತು ಬೇರುಗಳನ್ನು ಪೋಷಿಸಲು ಸಹಾಯ ಮಾಡುತ್ತದೆಯೇ? ಇಲ್ಲಿದೆ ವೈರಲ್ ಹ್ಯಾಕ್ ಕುರಿತು ಸಂಪೂರ್ಣ ಮಾಹಿತಿ.

ಶ್ಯಾಂಪೂವಿಗೆ ಕಾಫಿ ಮಿಕ್ಸ್ ಮಾಡಿದ್ರೆ ಹೇರ್ ಫಾಲ್ ನಿಲ್ಲುತ್ತಾ?
ನಿಮ್ಮ ದಿನವು ಸಾಮಾನ್ಯವಾಗಿ ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭವಾಗುತ್ತದೆ ಅಲ್ವಾ?, ಅದೇ ಕಾಫಿ ನಿಮ್ಮ ಕೂದಲಿಗೆ ಪ್ರಯೋಜನಕಾರಿ ಎನ್ನುವುದು ನಿಮಗೆ ಗೊತ್ತಾ? ಶಾಂಪೂ ಜೊತೆ ಸರಿಯಾದ ಪ್ರಮಾಣದಲ್ಲಿ ಶಾಂಪೂ ಬೆರೆಸಿ ತಲೆ ಹಚ್ಚಿದರೆ, ಅದು ನೆತ್ತಿಯನ್ನು ಸ್ವಚ್ಛಗೊಳಿಸಲು, ಹೊಳಪನ್ನು ನೀಡಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುವ ಮಾಹಿತಿ ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೀವೂ ಟ್ರೈ ಮಾಡಿ ನೋಡಿ.
ಕಾಫಿ ಕೂದಲಿಗೆ ಹೇಗೆ ಪ್ರಯೋಜನಕಾರಿ?
ಕಾಫಿಯಲ್ಲಿರುವ ಕೆಫೀನ್ ಮತ್ತು ಉತ್ಕರ್ಷಣ ನಿರೋಧಕಗಳು ನೆತ್ತಿಯನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಕೆಲವು ಸಂಶೋಧನೆಗಳು ಕೆಫೀನ್ ಕೂದಲು ಕಿರುಚೀಲಗಳನ್ನು ಉತ್ತೇಜಿಸಲು ಮತ್ತು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತವೆ. ಹೆಚ್ಚಿದ ರಕ್ತದ ಹರಿವು ಕೂದಲಿನ ಬೇರುಗಳಿಗೆ ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತದೆ, ಇದು ಆರೋಗ್ಯಕರವಾಗಿ ಕಾಣುವ ಕೂದಲಿಗೆ ಕಾರಣವಾಗಬಹುದು.
ಕೂದಲಿನ ಬೇರುಗಳು ಬಲಗೊಳಿಸುತ್ತದೆ
ದುರ್ಬಲವಾದ ಬೇರುಗಳು ಕೂದಲು ಮುರಿದು ಸುಲಭವಾಗಿ ಉದುರಲು ಕಾರಣವಾಗುತ್ತವೆ. ಕಾಫಿಯೊಂದಿಗೆ ನಿಧಾನವಾಗಿ ಮಸಾಜ್ ಮಾಡುವುದರಿಂದ ನೆತ್ತಿಯ ಬೇರುಗಳಿಗೆ ಉತ್ತಮ ಪೋಷಣೆ ಸಿಗುತ್ತದೆ. ಆದರೆ, ಕೂದಲು ಉದುರುವುದು ಅತಿಯಾಗಿದ್ದರೆ, ಮನೆಮದ್ದುಗಳನ್ನು ಮಾತ್ರ ಅವಲಂಬಿಸುವ ಬದಲು ಚರ್ಮರೋಗ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ನೈಸರ್ಗಿಕ ಹೊಳಪನ್ನು ಹೆಚ್ಚಿಸಬಹುದು
ಒಣಗಿದ ಮತ್ತು ನಿರ್ಜೀವ ಕೂದಲು ಹೆಚ್ಚಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಕಾಫಿ ಕೂದಲಿನ ಹೊರ ಮೇಲ್ಮೈಯನ್ನು ಸ್ವಚ್ಛಗೊಳಿಸಲು ಮತ್ತು ಅದನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಕೂದಲು ಮೊದಲಿಗಿಂತ ಮೃದು ಮತ್ತು ಹೊಳೆಯುವಂತೆ ಕಾಣುವ ಸಾಧ್ಯತೆಯಿದೆ.
ನೆತ್ತಿಯನ್ನು ಸ್ವಚ್ಚ ಮಾಡುತ್ತೆ
ನೆತ್ತಿಯ ಮೇಲೆ ಹೆಚ್ಚುವರಿ ಎಣ್ಣೆ, ಧೂಳು ಮತ್ತು ಹೇರ್ ಪ್ರಾಡಕ್ಟ್ ಸಂಗ್ರಹವಾಗುವುದರಿಂದ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಕಾಫಿಯು ನೈಸರ್ಗಿಕ ಎಕ್ಸ್‌ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನೆತ್ತಿಯ ಶುಚಿತ್ವವನ್ನು ಸುಧಾರಿಸುತ್ತದೆ ಮತ್ತು ತುರಿಕೆ ಅಥವಾ ಸೌಮ್ಯವಾದ ತಲೆಹೊಟ್ಟು ಮುಂತಾದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಅಕಾಲಿಕ ಬೂದು ಕೂದಲಿನ ಮೇಲೆ ಪರಿಣಾಮ?
ಕಾಫಿಯಲ್ಲಿ ಕಂಡುಬರುವ ನೈಸರ್ಗಿಕ ವರ್ಣದ್ರವ್ಯಗಳು ಕೂದಲಿಗೆ ಸ್ವಲ್ಪ ಗಾಢವಾದ ಟೋನ್ ನೀಡಲು ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಆದರೆ, ಪರಿಣಾಮವು ಶಾಶ್ವತವಲ್ಲ, ಮತ್ತು ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.
ಶಾಂಪೂಗೆ ಕಾಫಿಯನ್ನು ಬೆರೆಸುವ ಸರಿಯಾದ ಮಾರ್ಗ
ಸಾಮಾನ್ಯ ಶಾಂಪೂಗೆ ಸುಮಾರು ಒಂದು ಟೀಚಮಚ ಕಾಫಿ ಪುಡಿ ಸೇರಿಸಿ, ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಒದ್ದೆಯಾದ ಕೂದಲಿಗೆ 2 ರಿಂದ 3 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ನಂತರ, ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ವಿಧಾನವನ್ನು ಬಳಸುವುದು ಉತ್ತಮ.
ಈ ವಿಷಯ ನೆನಪಿರಲಿ
- ನೀವು ತುಂಬಾ ಸೂಕ್ಷ್ಮವಾದ ನೆತ್ತಿಯನ್ನು ಹೊಂದಿದ್ದರೆ ಅಥವಾ ಅಲರ್ಜಿ ಇದ್ದರೆ, ಮೊದಲು ಪ್ಯಾಚ್ ಟೆಸ್ಟ್ ಮಾಡಲು ಮರೆಯದಿರಿ.
- ಕಾಫಿಯ ಅತಿಯಾದ ಬಳಕೆಯಿಂದ ಕೂದಲು ಡ್ರೈ ಆಗಬಹುದು.
- ಅಲ್ಲದೇ ನೀವು ನಿರಂತರ ಕೂದಲು ಉದುರುವಿಕೆ, ನೆತ್ತಿಯ ಸೋಂಕು ಅಥವಾ ತೀವ್ರವಾದ ತಲೆಹೊಟ್ಟು ಅನುಭವಿಸುತ್ತಿದ್ದರೆ, ಮನೆಮದ್ದುಗಳನ್ನು ಪ್ರಯತ್ನಿಸುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಸುರಕ್ಷಿತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

