ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ ಕಾಂತಾರ ಚೆಲುವೆ, ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದ ಫ್ಯಾನ್ಸ್!
ನಟಿ ಸಪ್ತಮಿ ಗೌಡ, ನೇರಳೆ ಬಣ್ಣದ ಸೀರೆಯುಟ್ಟು ಮುದ್ದಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಕಾಂತಾರ ಚೆಲುವೆಯ ಟ್ರೆಡಿಶನಲ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್' ಎಂದು ಕಮೆಂಟಿಸಿದ್ದಾರೆ.
ಕಾಂತಾರ' ಚಿತ್ರದಿಂದ ಫೇಮಸ್ ಆದ ನಟಿ ಸಪ್ತಮಿ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಟ್ರೆಡಿಶನಲ್ ಹಾಗೂ ಮಾಡರ್ನ್ ಲುಕ್ನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸದ್ಯ, ನೇರಳೆ ಬಣ್ಣದ ಸೀರೆಯುಟ್ಟು ಮುದ್ದಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
ನೇರಳೆ ಬಣ್ಣದ ಸೀರೆ ಹಾಗೂ ನೀಲಿ ಬ್ಲೌಸ್ ಧರಿಸಿರುವ ನಟಿ ಸುಂದರವಾಗಿ ಕಾಣುತ್ತಿದ್ದಾರೆ. ದೊಡ್ಡ ಜುಮುಕಿ ಹಾಗೂ ನೆಕ್ಲೇಸ್ ಹಾಕ್ಕೊಂಡು ಮಿಂಚಿದ್ದಾರೆ. ಹಣೆಗೆ ಪುಟ್ಟದಾ ಬಿಂದಿ, ಕೈಯಲ್ಲಿ ಸಿಂಪಲ್ ಬಳೆಗಳನ್ನು ಹಾಕಿಕೊಂಡಿದ್ದಾರೆ. ಕಾಂತಾರ ಚೆಲುವೆಯ ಟ್ರೆಡಿಶನಲ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಪ್ತಮಿ ಗೌಡ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರೋ ಪೋಟೋಗೆ 'ಮಂಡೇ ಬ್ಲೂಸ್' ಎಂದು ಶೀರ್ಷಿಕೆ ನೀಡಿದ್ದಾರೆ. ಅಭಿಮಾನಿಗಳು ಬ್ಯೂಟಿಫುಲ್, ಕ್ಯೂಟ್, ಸಿಂಗಾರ ಸಿರಿಯೇ, ವಾವ್ ಲುಕ್, ಕ್ಯೂಟ್ ಬೇಬಿ, ಡಾರ್ಲಿಂಗ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಫೋಟೋಗೆ ಸಾವಿರಾರು ಲೈಕ್ ಹಾಗೂ ಹಾರ್ಟ್ ಎಮೋಜಿಗಳು ಬಂದಿವೆ.
ಒಬ್ಬ ಬಳಕೆದಾರರು 'ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು 'ಯುವ' ಸಿನಿಮಾ ಅಪ್ಡೇಟ್ ಕೊಡಿ ಎಂದಿದ್ದಾರೆ. ಅಭಿಮಾನಿಗಳು ಸೂಪರ್, ನಮ್ ಬಾಸ್ ಎಂದೆಲ್ಲಾ ಕಮೆಂಟ್ನಲ್ಲಿ ಹೊಗಳಿದ್ದಾರೆ.
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಿದ ಸಪ್ತಮಿ ಕಾಂತಾರ ಮೂಲಕ ದೊಡ್ಡ ಸಕ್ಸಸ್ ಕಂಡರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು.
ಕಾಂತಾರ' ಸಿನಿಮಾ ನಟಿ ಸಪ್ತಮಿ ಗೌಡ ಅವರು ಲೀಲಾ ಪಾತ್ರದ ಮೂಲಕ ದೇಶಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಮೊದಲು ಸಿನಿಮಾ ಮಾಡಿದ್ದರೂ ಸಪ್ತಮಿ ಗೌಡ ಕ್ಲಿಕ್ ಆಗಿದ್ದು 'ಕಾಂತಾರ' ಚಿತ್ರದ ಮೂಲಕ. ಕಾಂತಾರ ಪಾತ್ರಕ್ಕಾಗಿ ನಟಿ ತಿಂಗಳ ಕಾಲ ವರ್ಕ್ಶಾಪ್ ಕೂಡಾ ಎಟೆಂಡ್ ಮಾಡಿದ್ದರು.
2019-20ರಲ್ಲಿ ಜಗತ್ತಿಗೆ ಅಪ್ಪಳಿಸಿದ್ದ ಮಹಾಮಾರಿ ಕೋವಿಡ್ ವ್ಯಾಕ್ಸಿನ್ ಕುರಿತಾದ ಚಿತ್ರ 'ದಿ ವ್ಯಾಕ್ಸಿನ್ ವಾರ್'ನಲ್ಲಿಯೂ ಸಪ್ತಮಿ ಗೌಡ ನಟಿಸಿದ್ದರು. ಇದು ಇತ್ತೀಚಿಗಷ್ಟೇ ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಇದನ್ನು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ.
ಬ್ಲಾಕ್ಬಸ್ಟರ್ ಕಾಂತಾರ ಬಳಿಕ ಸಪ್ತಮಿ ಗೌಡ ಬೇಡಿಕೆ ಹೆಚ್ಚಾಗಿದೆ. ಹಾಗಂತ ಸಪ್ತಮಿ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.